Union Budget: ಫೆ.1ಕ್ಕೆ ಷೇರು ಮಾರುಕಟ್ಟೆ ಇರುತ್ತಾ? ಇಲ್ವಾ? ಇಲ್ಲಿದೆ ಡೀಟೇಲ್ಸ್..
2025ರ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆ ಪ್ರಯುಕ್ತ NSE ಮತ್ತು BSE ತೆರೆದಿರುತ್ತವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಂಟನೇ ಕೇಂದ್ರ ಬಜೆಟ್ ಅನ್ನು ಮಂಡಿಸುವ ದಿನದಂದು ಲೈವ್ ಟ್ರೇಡಿಂಗ್ ಸೆಷನ್ ನಡೆಯಲಿದೆ.
ಮುಂಬೈ (ಡಿ.23): ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಫೆಬ್ರವರಿ 1, 2025 ರಂದು (ಶನಿವಾರ) ಕೇಂದ್ರ ಬಜೆಟ್ 2024 ಸಲುವಾಗಿ ತೆರೆದಿರಲಿದೆ ಎಂದು ತಿಳಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ವರ್ಷ ಫೆಬ್ರವರಿ 1 ರಂದು ತಮ್ಮ ಎಂಟನೇ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.
ಸೋಮವಾರ ಈ ಕುರಿತಾಗಿ ಸುತ್ತೋಲೆ ನೀಡಿರುವ ಎನ್‌ಎಸ್‌ಇ, “ಎಲ್ಲಾ ಸದಸ್ಯರ ಗಮನಕ್ಕೆ 2025ರ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆ ಪ್ರಯುಕ್ತ ಲೈವ್ ಟ್ರೇಡಿಂಗ್ ಸೆಷನ್ ಇರಲಿದೆ' ಎಂದು ತಿಳಿಸಿದೆ.
ಕೇಂದ್ರ ಬಜೆಟ್ ಮಂಡನೆಯಿಂದಾಗಿ, ಎಕ್ಸ್‌ಚೇಂಜ್ ಫೆಬ್ರವರಿ 01ರಂದು ಈ ಕೆಳಗಿನಂತೆ ಪ್ರಮಾಣಿತ ಮಾರುಕಟ್ಟೆ ಸಮಯದ ಪ್ರಕಾರ ಲೈವ್ ಟ್ರೇಡಿಂಗ್ ಸೆಷನ್ ಅನ್ನು ನಡೆಸಲಿದೆ. ಇದಲ್ಲದೆ, ಸೆಟಲ್‌ಮೆಂಟ್ ಹಾಲಿಡೇ ಕಾರಣದಿಂದ 01-ಫೆಬ್ರವರಿ-2025 ರಂದು T0 ಸೆಶನ್ ಅನ್ನು ವ್ಯಾಪಾರಕ್ಕೆ ನಿಗದಿಪಡಿಸಲಾಗುವುದಿಲ್ಲ ಎನ್ನುವುದನ್ನು ಗಮನಿಸುವಂತೆ ತಿಳಿಸಿದೆ.
ಇಪಿಎಫ್‌ಒ ಸದಸ್ಯರಿಗೆ Important ನೋಟಿಸ್, ಜನವರಿ ಒಳಗಾಗಿ ಈ ಕೆಲಸ ಮಾಡಿ!
ಪ್ರೀ ಓಪನ್: ಆರಂಭ 9 ಗಂಟೆಗೆ, ಅಂತ್ಯ 9.08 ನಿಮಿಷ.
ಸಾಮಾನ್ಯ ಮಾರುಕಟ್ಟೆ: ಆರಂಭ ಬೆ. 9.15ಕ್ಕೆ, ಮುಕ್ತಾಯ: ಸಂಜೆ 3.30ಕ್ಕೆ
ಏಸು ಸಹೋದರನಿಗೆ ಸಂಬಂಧಿಸಿದ 2 ಸಾವಿರ ವರ್ಷ ಹಳೇ ಮೂಳೆ ಪೆಟ್ಟಿಗೆ ಪ್ರದರ್ಶನಕ್ಕಿಟ್ಟ ಅಮೆರಿಕ!