ಪೆಟ್ರೋಲ್ ಡೀಸೆಲ್ ತುಂಬಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಇಂದಿನ ದರ!

ಪೆಟ್ರೋಲ್ ಡೀಸೆಲ್ ದರ ಏರಿಳಿತ ಇತರ ಅಗತ್ಯವಸ್ತುಗಳ ಮೇಲೂ ತಟ್ಟಲಿದೆ. ಆದರೆ ಹಲವು ದಿನಗಳಿಂದ ಇಂಧನ ದರಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಹಾಗಂತ ಅಗ್ಗವಾಗಿಲ್ಲ. ಇಂದು ಬೆಂಗಳೂರು, ಕರ್ನಾಟಕ ಹಾಗೂ ದೇಶದಲ್ಲಿನ ಪೆಟ್ರೋಲ್ ಡೀಸೆಲ್ ದರ ಎಷ್ಟಿದೆ?

OMCs announces todays petrol diesel price check fuel rate on Bengaluru and Karnataka districts ckm

ಬೆಂಗಳೂರು(ಆ.08) ಅಂತಾರಾಷ್ಟ್ರೀಯ ಬಿಕ್ಕಟ್ಟು, ಅಮೆರಿಕ ಸೇರಿದಂತೆ ಕೆಲ ಅಗ್ರ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತಗಳಿಂದ ಹಲವು ಮಾರುಕಟ್ಟೆಗಳು ಅಲ್ಲೋಲಕಲ್ಲೋಲವಾಗಿದೆ. ಈ ಕ್ಷಿಪ್ರ ಬೆಳವಣಿಗೆಗಳು ಭಾರತದ ಮೇಲೂ ಪರಿಣಾಮ ಬೀರುತ್ತಿದೆ. ಇದರ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಆತಂಕವೂ ಶುರುವಾಗತೊಡಗಿದೆ. ಈಗಾಗಲೇ ದುಬಾರಿಯಾಗಿರುವ ಇಂಧನ ಕೈಗೆಟುಕದ ದ್ರಾಕ್ಷಿಯಾಗುತ್ತಾ ಅನ್ನೋ ಅನುಮಾನ ಕಾಡತೊಡಗಿದೆ. ಇದರ ನಡುವೆ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದರದಲ್ಲಿ ಹೆಚ್ಚಿನ ವ್ಯತ್ಯಾಗಳಿಲ್ಲ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ದರ 102.86 ರೂಪಾಯಿ ಆಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್‌ಗೆ 88.94 ರೂಪಾಯಿ ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಪ್ರತಿ ಲೀಟರ್‌ಗೆ  94.72 ರೂಪಾಯಿ ಆಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್‌ಗೆ 87.62 ರೂಪಾಯಿ ಆಗಿದೆ. ಇನ್ನು ಚೆನ್ನೈನಲ್ಲಿ ಪೆಟ್ರೋಲ್ ದರ 100.75 ರೂಪಾಯಿ ಆಗಿದ್ದರೆ, ಡೀಸೆಲ್ ದರ 92.34 ರೂಪಾಯಿ ಆಗಿದೆ.  ಕರ್ನಾಟಕದ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಸ್ಥಿರವಾಗಿದೆ. ಬಳ್ಳಾರಿಯಲ್ಲಿ ಗರಿಷ್ಠ ದರ ದಾಖಲಾಗಿದೆ. ಬಳ್ಳಾರಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.89 ರೂಪಾಯಿ ಇದೆ. 

ಐಟಿ ಕ್ಷೇತ್ರದಲ್ಲಿ ಅಲ್ಲೋಲ- ಕಲ್ಲೋಲ, ಏಳೇ ತಿಂಗಳಲ್ಲಿ 1.24 ಲಕ್ಷ ಟೆಕ್‌ ನೌಕರರು ಮನೆಗೆ!

ಕರ್ನಾಟಕ ಜಿಲ್ಲೆಯ ಪೆಟ್ರೋಲ್ ದರ
ಬಾಗಲಕೋಟೆ:103.57 
ಬೆಂಗಳೂರು: 102.86 
ಬೆಂಗಳೂರು ಗ್ರಾಮಂತರ: 102.94
ಬೆಳಗಾವಿ:102.68
ಬಳ್ಳಾರಿ: 104.89
ಬೀದರ್:103.22
ವಿಜಯಪುರ: 103.14
ಚಾಮರಾಜನಗರ:102.99
ಚಿಕ್ಕಬಳ್ಳಾಪುರ: 103.94
ಚಿಕ್ಕಮಗಳೂರು: 103.94
ಚಿತ್ರದುರ್ಗ:103.94
ದಕ್ಷಿಣ ಕನ್ನಡ: 102.03
ದಾವಣೆಗೆರೆ:104.70
ಧಾರವಾಡ: 102.92
ಗದಗ:103.19
ಕಲಬುರಗಿ: 102.63
ಹಾಸನ:102.85
ಹಾವೇರಿ:103.89
ಕೊಡುಗು:104.34
ಕೋಲಾರ:102.55
ಕೊಪ್ಪಳ:104.01
ಮಂಡ್ಯ:102.81
ಮೈಸೂರು:102.54
ರಾಯಚೂರು:103.57
ರಾಮನಗರ:103.34
ಶಿವಮೊಗ್ಗ:104.42
ತುಮಕೂರು:104.20
ಉಡುಪಿ:102.30
ಉತ್ತರಕನ್ನಡ:103.90
ಯಾದಗಿರಿ :103.25

ಅಜ್ಜ ಖರೀದಿಸಿದ್ದ L&T ಷೇರುಗಳಿಂದ ರಾತ್ರೋರಾತ್ರಿ ಕೋಟ್ಯಧಿಪತಿಯಾದ ಬೆಂಗಳೂರು ಮಹಿಳೆ!

ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಡೀಸೆಲ್ ದರದಲ್ಲಿ ಕೊಂಚ ಏರಿಕೆಯಾಗಿದೆ. ಆದರೆ ಹೆಚ್ಚಿನ ವ್ಯತ್ಯಾಸಗಳಾಗಿಲ್ಲ.  ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರ ಸ್ಥಿರವಾಗಿದೆ. ಆದರೆ ಒಡಿಶಾದ ಭುವನೇಶ್ವರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸಣ್ಣ ವ್ಯತ್ಯಾಸವಾಗಿದೆ. ಆಗಸ್ಟ್ 7 ರಂದು ಭುವನೇಶ್ವರದಲ್ಲಿ ಇಂದನ ಧರದಲ್ಲಿ ಏರಿಕೆಯಾಗಿದೆ. ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ ಭುವನೇಶ್ವರದ ಇಂಧನ ದುಬಾರಿಯಾಗಿಲ್ಲ. 

Latest Videos
Follow Us:
Download App:
  • android
  • ios