ಮೋದಿ ಸೈಲೆಂಟ್ ಸಾಧನೆ: ದುಪ್ಪಟ್ಟಾಯ್ತು ಕೈಗಾರಿಕಾ ಉತ್ಪಾದನೆ!
ಮೋದಿ ಅವರ ಸೈಲೆಂಟ್ ಸಾಧನೆ ಬಗ್ಗೆ ಕೇಳಿದಿರಾ?|ಶಾಶ್ವತ ಪರಿಹಾರದ ಮೋದಿ ಯೋಜನೆಗಳು ಫಲ ನೀಡುತ್ತಿವೆ| ಅಕ್ಟೋಬರ್ ನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಶೇ.8.1 ಕ್ಕೆ ಏರಿಕೆ| 11 ತಿಂಗಳಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಉತ್ಪಾದನಾ ಅಂಕಿ-ಅಂಶ| ಕಳೆದ ವರ್ಷದ ಅಕ್ಟೋಬರ್ ನಲ್ಲಿ ಕೈಗಾರಿಕಾ ಉತ್ಪನ್ನ ಶೇ.1.8 ರಷ್ಟು ಏರಿಕೆ| ಬಂಡವಾಳ ಹಾಗೂ ಗ್ರಾಹಕ ಬಳಕೆಯ ಸರಕುಗಳ ಉತ್ಪಾದನೆ ಹೆಚ್ಚಳ
ನವದೆಹಲಿ(ಡಿ.13): ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಅಭಿವೃದ್ಧಿ ಯೋಜನೆಗಳನ್ನು ಅವರ ವಿರೋಧಿಗಳೂ ಮನಸಾರೆ ಒಪ್ಪುತ್ತಾರೆ. ತಾತ್ಕಾಲಿಕ ಸೌಲಭ್ಯಗಳಿಗಿಂತ ತಡವಾಗಿಯಾದರೂ ಸರಿ ಶಾಶ್ವತ ಪರಿಹಾರಕ್ಕಾಗಿ ಮೋದಿ ಯಾವಾಗಲೂ ಪ್ರಯತ್ನಿಸುತ್ತಾರೆ.
ಅಕ್ಟೋಬರ್ ತಿಂಗಳಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಶೇ.8.1 ಕ್ಕೆ ಏರಿಕೆಯಾಗಿದ್ದು, ಕಳೆದ 11 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಉತ್ಪಾದನಾ ಅಂಕಿ-ಅಂಶ ದಾಖಲಾಗಿದೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪನ್ನ ಶೇ.1.8 ರಷ್ಟು ಏರಿಕೆಯಾಗಿತ್ತು. ಈ ವರ್ಷ ಬಂಡವಾಳ ಹಾಗೂ ಗ್ರಾಹಕ ಬಳಕೆಯ ಸರಕುಗಳ ಉತ್ಪಾದನೆ ಹೆಚ್ಚಳದಿಂದಾಗಿ ಕೈಗಾರಿಕಾ ಉತ್ಪಾದನೆಯೂ ಏರಿಕೆ ಕಂಡಿದೆ.