ಮೇ 18ರಂದು ವಿಶೇಷ ಟ್ರೇಡಿಂಗ್ ನಡೆಸಲಿರುವ ಎನ್ ಎಸ್ ಇ; ಕಾರಣವೇನು? ಇಲ್ಲಿದೆ ಮಾಹಿತಿ

ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ ಎಸ್ ಇ) ಮೇ 18ರಂದು ಈಕ್ವಿಟಿ ಹಾಗೂ ಈಕ್ವಿಟಿ ಡಿರೈವೆಟಿವ್ಸ್ ವಿಭಾಗಗಳಲ್ಲಿ ವಿಶೇಷ ಟ್ರೇಡಿಂಗ್ ನಡೆಸಲಿದೆ. 
 

NSE To Conduct Special Trading Session On May 18 anu

ಮುಂಬೈ (ಮೇ 8): ಈಕ್ವಿಟಿ ಹಾಗೂ ಈಕ್ವಿಟಿ ಡಿರೈವೆಟಿವ್ಸ್ ವಿಭಾಗಗಳಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ ಎಸ್ ಇ) ಮೇ 18ರಂದು ವಿಶೇಷ ಟ್ರೇಡಿಂಗ್ ಅವಧಿಯನ್ನು ನಡೆಸಲಿದೆ. ಈ ಬಗ್ಗೆ ನಿನ್ನೆ (ಮೇ 7) ಎನ್ ಎಸ್ ಇ ಮಾಹಿತಿ ನೀಡಿದೆ. ಪ್ರೈಮರಿ ಸೈಟ್ ನಲ್ಲಿ ಪ್ರಮುಖ ಸಮಸ್ಯೆಗಳು ಅಥವಾ ವೈಫಲ್ಯಗಳ ನಿರ್ವಹಣೆಗೆ ಇರುವ ಸಿದ್ಧತೆಗಳ ಪರಿಶೀಲನೆಗೆ ಈ ವಿಶೇಷ ಟ್ರೇಡಿಂಗ್ ಅವಧಿಯನ್ನು ನಡೆಸುತ್ತಿರೋದಾಗಿ ಎನ್ ಎಸ್ ಇ ತಿಳಿಸಿದೆ. ಈ ವಿಶೇಷ ನೇರ ಟ್ರೇಡಿಂಗ್ ಅವಧಿಯಲ್ಲಿ ಪ್ರೈಮರಿ ಸೈಟ್ ನಿಂದ (ಪಿಆರ್) ಡಿಸಾಸ್ಟರ್ ರಿಕವರಿ (ಡಿಆರ್) ಸೈಟ್ ಗೆ ಬದಲಾವಣೆ ಆಗಲು ಅವಕಾಶವಿದೆ. ಇನ್ನು ಈ ದಿನ ಎರಡು ಅವಧಿಯಲ್ಲಿ ಟ್ರೇಡಿಂಗ್ ನಡೆಯಲಿದ್ದು, ಮೊದಲ ಅವಧಿ ಪ್ರೈಮರಿ ಸೈಟ್  ನಲ್ಲಿ (ಪಿಆರ್ ) ಬೆಳಗ್ಗೆ 9.15ರಿಂದ 10 ಗಂಟೆ ತನಕ ಇರಲಿದೆ. ಇನ್ನು ಎರಡನೇ ಅವಧಿ ಡಿಆರ್ ಸೈಟ್ ನಲ್ಲಿ ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:30ರ ತನಕ ನಡೆಯಲಿದೆ. ಈ ವಿಶೇಷ ಅವಧಿಯಲ್ಲಿ ಡಿರೈವೆಟಿವ್ಸ್  ಉತ್ಪನ್ನಗಳು ಸೇರಿದಂತೆ ಎಲ್ಲ ಸೆಕ್ಯುರಿಟಿಗಳು ಲಭ್ಯವಿರಲಿದ್ದು, ಗರಿಷ್ಠ ಶೇ.5ರಷ್ಟು ಪ್ರೈಸ್ ಬ್ರ್ಯಾಂಡ್ ಹೊಂದಿರಲಿದೆ. 

ಇನ್ನು ಈಗಾಗಲೇ ಶೇ.2 ಅಥವಾ ಅದಕ್ಕಿಂತ ಕಡಿಮೆ ಪ್ರೈಸ್ ಬ್ರ್ಯಾಂಡ್ ನಲ್ಲಿರುವ ಎಲ್ಲ ಸೆಕ್ಯುರಿಟಿಗಳು ನಿಗದಿತ ಬ್ಯಾಂಡ್ ಗಳಲ್ಲಿ ಲಭ್ಯವಿರಲಿವೆ ಎಂದು ಎನ್ ಎಸ್ ಇ ಮಾಹಿತಿ ನೀಡಿದೆ. ' ಈಕ್ವಿಟಿ ಹಾಗೂ ಈಕ್ವಿಟಿ ಡಿರೈವೆಟಿವ್ಸ್ ವಿಭಾಗಗಳಲ್ಲಿ ಮೇ 18, 2024ರಂದು ಶನಿವಾರ ಪ್ರೈಮರಿ ಸೈಟ್ ನಿಂದ ಡಿಸಾಸ್ಟರ್ ರಿಕವರಿ ಸೈಟ್ ಗೆ ವಿಶೇಷ ಲೈವ್ ಟ್ರೇಡಿಂಗ್ ಅನ್ನು ಎಕ್ಸ್ ಚೇಂಜ್ ನಡೆಸಲಿದೆ' ಎಂದು ಎನ್ ಎಸ್ ಇ (NSE) ಸುತ್ತೋಲೆಯಲ್ಲಿ ತಿಳಿಸಿದೆ.

ಈ ಬಾರಿ ದೀಪಾವಳಿ ಮುಹೂರ್ತ ಟ್ರೇಡಿಂಗ್ ಯಾವಾಗ? ಈ ವಿಶೇಷ ವಹಿವಾಟಿನ ದಿನಾಂಕ, ಸಮಯ ಮತ್ತು ಮಹತ್ವ ಹೀಗಿದೆ..

ಈ ಹಿಂದೆ ಕೂಡ ಎನ್ ಎಸ್ ಇ ಹಾಗೂ ಬಿಎಸ್ ಇ ಇದೇ ಮಾದರಿಯ ಟ್ರೇಡಿಂಗ್ ಅವಧಿಯನ್ನು ಮಾರ್ಚ್ 2ರಂದು ನಿರ್ವಹಿಸಿದ್ದವು. ಈ ಅವಧಿಯಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿ ಹಾಗೂ ತಾಂತ್ರಿಕ ಸಲಹಾ ಸಮಿತಿ ಜೊತೆಗಿನ ನಿರ್ದಿಷ್ಟ ಚರ್ಚೆಗಳನ್ನು ನಡೆಸಿ, ಅದರ ಆಧಾರದಲ್ಲಿ ವಿಶೇಷ ಟ್ರೇಡಿಂಗ್ ನಡೆಸಲಾಗಿತ್ತು. ಡಿಆರ್ ಸೈಟ್ ನಲ್ಲಿ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುವ ಯಾವುದೇ ಅನಿರೀಕ್ಷಿತ ಘಟನೆಗಳನ್ನು ನಿರ್ದಿಷ್ಟ ಅವಧಿಯಲ್ಲಿ ನಿರ್ವಹಿಸಲು ಎಕ್ಸ್ ಚೇಂಜ್ ಗಳ ಸಿದ್ಧತೆಯನ್ನು ಪರಿಶೀಲಿಸಲು ಈ ವಿಶೇಷ ಟ್ರೇಡಿಂಗ್ ಅವಧಿಯನ್ನು ನಡೆಸಲಾಗುತ್ತದೆ. 

ಪ್ರೈಮರಿ ಸೈಟ್ ನಲ್ಲಿ ಯಾವುದೇ ಪ್ರಮುಖ ಸಮಸ್ಯೆ ಅಥವಾ ವೈಫಲ್ಯತೆ ಎದುರಾದ ಸಂದರ್ಭದಲ್ಲಿ ವಹಿವಾಟುಗಳನ್ನು ಮುಂದುವರಿಸಲು ಡಿಆರ್ ಸೈಟ್ ಗೆ ಬದಲಾವಣೆ ಹೊಂದಲು ಈ ವಿಶೇಷ ಟ್ರೇಡಿಂಗ್ ಗಳು ನೆರವು ನೀಡುತ್ತವೆ. 

ಅಕ್ಷಯ ತೃತೀಯಗೆ ಜ್ಯುವೆಲ್ಲರಿಗಳಿಂದ ಭರ್ಜರಿ ಆಫರ್: ಬಾಲರಾಮ ಉಡುಗೊರೆ..!

ದೀಪಾವಳಿ ಸಮಯದಲ್ಲಿ ಕೂಡ ಪ್ರತಿವರ್ಷ ವಿಶೇಷ ಟ್ರೇಡಿಂಗ್ ಅಧಿವೇಶನ ನಡೆಸಲಾಗುತ್ತದೆ.  NSE (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ಮತ್ತು BSE (ಬಾಂಬೆ ಸ್ಟಾಕ್ ಎಕ್ಸ್ಚೇಂಜ್) ಎರಡೂ ಸೀಮಿತ ಅವಧಿಗೆ ವ್ಯಾಪಾರವನ್ನು ಅನುಮತಿಸುತ್ತವೆ. ಮುಹೂರ್ತದ ವಹಿವಾಟಿನ ಅವಧಿಯಲ್ಲಿ ಕಾರ್ಯಗತಗೊಳಿಸಲಾದ ಎಲ್ಲಾ ವಹಿವಾಟುಗಳನ್ನು ಅದೇ ದಿನದಲ್ಲಿ ಇತ್ಯರ್ಥಗೊಳಿಸಲಾಗುತ್ತದೆ. ಎಲ್ಲಾ ವಹಿವಾಟುಗಳನ್ನು ಇತ್ಯರ್ಥಗೊಳಿಸಲು ಸಾಮಾನ್ಯವಾಗಿ 15 ನಿಮಿಷದ ಪೂರ್ವ-ಆರಂಭಿಕ ಅಧಿವೇಶನ ಮತ್ತು ಮುಕ್ತಾಯದ ಅವಧಿ ಇರುತ್ತದೆ. ಸಾಂಪ್ರದಾಯಿಕವಾಗಿ, ಸ್ಟಾಕ್ ಬ್ರೋಕರ್‌ಗಳು ತಮ್ಮ ಹೊಸ ವರ್ಷವನ್ನು ದೀಪಾವಳಿಯ ದಿನದಿಂದ ಪ್ರಾರಂಭಿಸುತ್ತಾರೆ. ಆದ್ದರಿಂದ, ಅವರು ತಮ್ಮ ಗ್ರಾಹಕರಿಗೆ ದೀಪಾವಳಿಯಂದು ಮಂಗಳಕರ ಸಮಯದಲ್ಲಿ ಹಾಗೂ ಮುಹೂರ್ತದಲ್ಲಿ ಹೊಸ ಸೆಟಲ್‌ಮೆಂಟ್‌ ಖಾತೆಗಳನ್ನು ತೆರೆಯುತ್ತಾರೆ.

Latest Videos
Follow Us:
Download App:
  • android
  • ios