ನವದೆಹಲಿ[ಮಾ.08]: ಕಳೆದೆರಡು ದಿನಗಳಿಂದ ಹಣವಿಲ್ಲದೇ ಪರದಾಡುತ್ತಿದ್ದ ಯಸ್ ಬ್ಯಾಂಕ್ ಗ್ರಾಹಕರಿಗೆ ನಿಟ್ಟುಸಿರು ಬಿಡುವಂತ ಸುದ್ದಿ ಬಂದೆರಗಿದೆ. ಸದ್ಯ ಗ್ರಾಹಕರು ಯಸ್ ಬ್ಯಾಂಕ್ ಮಾತ್ರವಲ್ಲದೇ, ಇತರ ಬ್ಯಾಂಕ್ ಎಟಿಎಂಗಳಿಂದಲೂ ಹಣ ಡ್ರಾ ಮಾಡಬಹುದು ಎಂದು ಬ್ಯಾಂಕ್ ಹೇಳಿದೆ. ಅಲ್ಲದೇ ಗ್ರಾಹಕರ ತಾಳ್ಮೆಗೆ ಬ್ಯಾಂಕ್ ಮಂಡಳಿ ಧನ್ಯವಾದ ತಿಳಿಸಿದೆ.

ಆರ್ಥಿಕ ಸಂಕಷ್ಟಕ್ಕೀಡಾಗಿರುವ ಯಸ್ ಬ್ಯಾಂಕ್ ಈ ಹಿಂದೆ ಇತರ ಬ್ಯಾಂಕ್ ಗಳಿಂದ ಹಣ ಡ್ರಾ ಮಾಡುವ ಸೇವೆಯನ್ನು ತಡೆ ಹಿಡಿದಿತ್ತು. ಇದು ಗ್ರಾಹಕರನ್ನು ಸಂಕಷ್ಟಕ್ಕೀಡು ಮಾಡಿತ್ತು. ಆದರೀಗ ಈ ಆದೇಶ ಹಿಂಪಡೆದಿರುವುದು ಗ್ರಾಹರನ್ನು ನಿರಾಳವಾಗಿಸಿದೆ. ಸಂಕಷ್ಟದಲ್ಲಿರುವ ಬ್ಯಾಂಕ್ ಉಳಿಸಲು RBI ಕೂಡಾ ಯತ್ನಿಸುತ್ತಿದೆ. 

ಇನ್ನು ಯಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ರನ್ನು ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಬಂಧಿಸಿದ್ದು, ಅವರ ಮೂವರು ಮಕ್ಕಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಮಾರ್ಚ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ