ಬ್ಯಾಂಕ್, ಮ್ಯೂಚುಫಲ್ ಫಂಡ್ ಯಾವುದ್ರಲ್ಲೂ ಅಲ್ಲ... ಮುಖೇಶ್ ಅಂಬಾನಿ ತಮ್ಮ ಹಣ ಹೂಡಿಕೆ ಮಾಡೋದು ಎಲ್ಲಿ?
ಫೋರ್ಬ್ಸ್ ಪ್ರಕಾರ ಮುಖೇಶ್ ಅಂಬಾನಿ 116.1 ಶತಕೋಟಿ ಯುಎಸ್ ಡಾಲರ್ ರಿಯಲ್‌ಟೈಮ್ ನಿವ್ವಳ ಮೌಲ್ಯ ಹೊಂದಿದ್ದಾರೆ. ಇದರ ಪ್ರಕಾರ ಏಪ್ರಿಲ್ 12ರ ವೇಳೆಗೆ ಅವರ ಮೌಲ್ಯ 9.70 ಲಕ್ಷ ಕೋಟಿ ರೂಪಾಯಿ.
ಮುಂಬೈ (ಏ.12): ಭಾರತದ ಬಿಲಿಯನೇರ್ ಮುಖೇಶ್ ಅಂಬಾನಿ ಭಾರತದ ಶ್ರೀಮಂತ ವ್ಯಕ್ತಿ ಮಾತ್ರವಲ್ಲ, ಏಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಏಪ್ರಿಲ್ 2ರ ವೇಳೆಗೆ 19.86 ಲಕ್ಷ ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿರುವ ದೇಶದ ಪ್ರಖ್ಯಾತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಮುಖೇಶ್ ಅಂಬಾನಿ. ಅವರ ರಿಲಯನ್ಸ್ ಗ್ರೂಪ್ ಟೆಲಿಕಾಂ, ತೈಲ ಮತ್ತು ಅನಿಲ ಮತ್ತು ರಿಟೇಲ್ ವ್ಯಾಪಾರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವ್ಯವಹಾರ ನಡೆಸುತ್ತಿದೆ. 66 ವರ್ಷದ ಮುಖೇಶ್ ಅಂಬಾನಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರೂ ಆಗಿದ್ದಾರೆ. ಇನ್ನು ಮುಂಬೈನ ಮಲಬಾರ್ ಹಿಲ್ಸ್‌ನಲ್ಲಿ ಅವರು ವೈಭವವಾದ ಅಂಟಾಲಿಯಾ ಬಂಗಲೆಯನ್ನೂ ಹೊಂದಿದ್ದಾರೆ. ಫೋರ್ಬ್ಸ್ ಪ್ರಕಾರ ರಿಲಯನ್ಸ್ ಇಂಡಸ್ಟ್ರೀನ್ ಚೇರ್ಮನ್ ಮುಖೇಶ್ ಅಂಬಾನಿ ಅವರ ರಿಯಲ್‌ಟೈಮ್ ಮೌಲ್ಯ 116.1 ಶತಕೋಟಿ ಯುಎಸ್ ಡಾಲರ್. ಆದರೆ, ಅವರು ತಮ್ಮಲ್ಲಿರುವ ಹಣವನ್ನು ಎಲೆಲ್ಲಾ ಹೂಡಿಕೆ ಮಾಡ್ತಾರೆ ಅನ್ನೋದು ಗೊತ್ತಾ?
ಬಿಲಿಯನೇರ್ ಉದ್ಯಮಿ ತಮ್ಮ ಹೂಡಿಕೆಯನ್ನು ವೈವಿಧ್ಯವಾಗಿ ಇರಿಸಿದ್ದಾರೆ. ಪ್ರಸ್ತುತ ದೇಶದಲ್ಲಿ ಚಾಲ್ತಿಯಲ್ಲಿರುವ ಹಲವು ಕ್ಷೇತ್ರಗಳಲ್ಲಿ ಮುಖೇಶ್ ಅಂಬಾನಿ ಹಣ ಹೂಡಿಕೆ ಮಾಡಿದ್ದಾರೆ. ಅದರಲ್ಲೂ ಭವಿಷ್ಯದಲ್ಲಿ ಲಾಭ ತಂದುಕೊಡಬಲ್ಲ ಹಲವು ಕ್ಷೇತ್ರಗಳಲ್ಲಿ ಮುಖೇಶ್ ಅಂಬಾನಿ ಹೂಡಿಕೆ ಮಾಡಿದ್ದಾರೆ. ಮುಖೇಶ್ ಅಂಬಾನಿ ಇತ್ತೀಚೆಗೆ ಔಷಧ ವಿತರಣಾ ಕಂಪನಿ ನೆಟ್‌ಮೆಡ್ಸ್‌ನಲ್ಲಿ 60 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಇದಲ್ಲದೆ, ರಿಲಯನ್ಸ್ ಅಧ್ಯಕ್ಷರು ಆಡ್ವೆರ್ಬ್ ಟೆಕ್ನಾಲಜೀಸ್ ಹೆಸರಿನ ಭಾರತೀಯ ರೊಬೊಟಿಕ್ಸ್ ಸ್ಟಾರ್ಟಪ್‌ನಲ್ಲಿ ಸುಮಾರು 983 ಕೋಟಿ ರೂಪಾಯಿಗಳಿಗೆ ಹೆಚ್ಚಿನ ಪಾಲನ್ನು ಖರೀದಿ ಮಾಡಿದ್ದಾರೆ.
ಭಾರತಕ್ಕೂ ಬರಲಿದೆ ಟೆಸ್ಲಾ, ಎಲೋನ್ ಮಸ್ಕ್ ಉದ್ಯಮಕ್ಕೆ ಹೂಡಿಕೆ ಮಾಡ್ತಿರೋ ಬಿಲಿಯನೇರ್ ಯಾರು?
ಅವರ ರಿಲಯನ್ಸ್ ಇಂಡಸ್ಟ್ರೀಸ್ ಟಿವಿ ಮತ್ತು ಸ್ಟ್ರೀಮಿಂಗ್ ಕಂಪನಿ ವಯಾಕಾಮ್18 ನಲ್ಲಿ ಪ್ಯಾರಾಮೌಂಟ್ ಗ್ಲೋಬಲ್‌ನ ಶೇಕಡಾ 13 ರಷ್ಟು ಪಾಲನ್ನು ಸುಮಾರು USD 517 ಮಿಲಿಯನ್ (Rs 4310 ಕೋಟಿ) ಗೆ ಖರೀದಿಸುವ ಸಾಧ್ಯತೆಯಿದೆ. ಅಲ್ಲದೆ, ರಿಲಯನ್ಸ್ ಇಂಡಸ್ಟ್ರೀಸ್‌ನ ಚಿಲ್ಲರೆ ವಿಭಾಗವು 2020 ರಲ್ಲಿ ಆನ್‌ಲೈನ್ ಪೀಠೋಪಕರಣ ಚಿಲ್ಲರೆ ವ್ಯಾಪಾರಿ ಅರ್ಬನ್ ಲ್ಯಾಡರ್‌ನಲ್ಲಿ 96 ಪ್ರತಿಶತ ಪಾಲನ್ನು 182 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿದೆ. ಬಿಲಿಯನೇರ್ ಬ್ಯಾಂಕ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹಣವನ್ನು ಹಾಕುವ ಬದಲು ತನ್ನ ಹಣವನ್ನು ಹೀಗೆ ಹೂಡಿಕೆ ಮಾಡಿದ್ದಾರೆ.
ದುಬಾರಿ ಕಾರು, ವಾಚ್ ಕಲೆಕ್ಷನ್ ಅಷ್ಟೇ ಅಲ್ಲ ಅನಂತ್ ಅಂಬಾನಿ ಬಳಿಯಿದೆ ಕೋಟಿ ಕೋಟಿ ಮೌಲ್ಯದ ಬ್ರೂಚ್!