ಇ-ಕಾಮರ್ಸ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿ| ಆನ್‌ಲೈನ್ ಶಾಪಿಂಗ್ ಪ್ರೀಯರಿಗೆ ಕೇಂದ್ರ ಸರ್ಕಾರದಿಂದ ಶಾಕ್| ಹೊಸ ನೀತಿಯ ಪರಿಣಾಮವಾಗಿ ರದ್ದಾಗಲಿದೆ ಕ್ವಿಕ್ ಡಿಲೆವರಿ ಸೌಲಭ್ಯ?| ಹೊಸ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ಜಾರಿಗೆ| ಸರ್ಕಾರದ ನಿರ್ಧಾರಕ್ಕೆ ಮಧ್ಯಮ ಉದ್ದಿಮೆದಾರರು ಫುಲ್ ಖುಷ್
ನವದೆಹಲಿ(ಫೆ.02): ಆನ್‌ಲೈನ್ ಶಾಪಿಂಗ್ ಪ್ರೀಯರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಇ-ಕಾಮರ್ಸ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೊಳಿಸಿದ್ದು, ಕ್ವಿಕ್ ಡಿಲೆವರಿ ಸೌಲಭ್ಯ ರದ್ದಾಗಲಿದೆ.
ಹೌದು, ಇನ್ನು ಮುಂದೆ ಆನ್ಲೈನ್ನಲ್ಲಿ ಖರೀದಿಸಿದ ವಸ್ತುಗಳು ಗ್ರಾಹಕನಿಗೆ ತಲುಪಲು ಆಗಲು 4-7 ದಿನ ತೆಗೆದುಕೊಳ್ಳಲಿದೆ.
ಇ-ಕಾಮರ್ಸ್ನಲ್ಲಿ ಹೊಸ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ಜಾರಿಗೆ ಬಂದಿದ್ದು, ಇದರನ್ವಯ ಕ್ವಿಕ್ ಡೆಲಿವರಿ ಆಯ್ಕೆ ಸಿಗುವುದಿಲ್ಲ. ಇದು ಆನ್‌ಲೈನ್ ವಸ್ತುಗಳ ಮಾರಾಟ ತಾಣಕ್ಕೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ.
ಅಷ್ಟೇ ಅಲ್ಲದೇ ಹೊಸ ನೀತಿಯ ಪರಿಣಾಮವಾಗಿ ಇ-ಕಾಮರ್ಸ್ ಸಂಸ್ಥೆಗಳು ಡೆಲಿವರಿಗೆ ಹೆಚ್ಚಿನ ಶುಲ್ಕ ಪಡೆಯಲು ನಿರ್ಧರಿಸಿದ್ದು, ಇದು ಗ್ರಾಹಕರಿಗೆ ಕಸಿವಿಸಿ ತರಲಿದೆ ಎಂದು ಹೇಳಲಾಗಿದೆ.
ಹೊಸ ನೀತಿಯಿಂದಾಗಿ ಭಾರತದ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸೇರಿದಂತೆ ಹಲವು ಕಂಪನಿಗಳಿಗೆ ಭಾರೀ ಹೊಡೆತ ಬೀಳುವ ಸಂಭವ ಹೆಚ್ಚಿದ್ದು, ಈ ನೀತಿಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಇತ್ತ ಕೇಂದ್ರ ಸರ್ಕಾರದ ಹೊಸ ನೀತಿಯಿಂದಾಗಿ ಮಧ್ಯಮ ಗಾತ್ರದ ಉದ್ದಿಮೆದಾರರು ಸಂತಸದಲ್ಲಿದ್ದಾರೆ. ಕಾರಣ ಆನ್‌ಲೈನ್ ವಹಿವಾಟಿನಿಂದ ಇವರಿಗೆ ನಷ್ಟ ಎದುರಾಗಿದ್ದು, ಇದೀಗ ಗ್ರಾಹಕರು ಮರಳಿ ಇವರತ್ತ ಬರಬಹುದು ಎಂಬ ಆಶಾವಾದ ಇದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 2, 2019, 6:41 PM IST