ಏಪ್ರಿಲ್ 1ರಿಂದ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಿಲ್ಲ;ಅಂತೆಕಂತೆಗಳಿಗೆ ತೆರೆ ಎಳೆದ ಸರ್ಕಾರ

ಆದಾಯ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿ ಏ.1ರಂದು ಸರ್ಕಾರ ತೆರಿಗೆದಾರರಿಗೆ ಅಚ್ಚರಿಯ ಸುದ್ದಿ ನೀಡಲಿದೆ. ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಲಿವೆ ಎಂಬ ಸುದ್ದಿಗಳು ಹಲವು ದಿನಗಳಿಂದ ಹರಿದಾಡುತ್ತಿದ್ದು, ಅದು ಸುಳ್ಳೆಂದು  ವಿತ್ತ ಸಚಿವೆ  ಸ್ಪಷ್ಟಪಡಿಸಿದ್ದಾರೆ.

No Income Tax Surprises From April 1 Govt Clarifies Doubts On Tax Regimes Check Details Inside anu

ನವದೆಹಲಿ (ಏ.1): ತೆರಿಗೆ ವ್ಯವಸ್ಥೆಗೆ ಸಂಬಂಧಿಸಿ ತೆರಿಗೆದಾರರಲ್ಲಿದ್ದ ಸಾಮಾನ್ಯ ಅನುಮಾನಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪರಿಹರಿಸಿದ್ದಾರೆ. 2024-25ನೇ ಹಣಕಾಸು ಸಾಲಿನ ಪ್ರಾರಂಭದ ದಿನವಾದ ಏಪ್ರಿಲ್ 1ರಿಂದ ಈಗಿರುವ ತೆರಿಗೆ ವ್ಯವಸ್ಥೆಗಳಿಗೆ ಸಂಬಂಧಿಸಿ ಯಾವುದೇ ಹೊಸ ಬದಲಾವಣೆ ಇರೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2024-25ನೇ ಸಾಲಿನ ಮಧ್ಯಂತರ ಬಜೆಟ್ ನಲ್ಲಿ  ನೇರ ಅಥವಾ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿರಲಿಲ್ಲ. ಅಲ್ಲದೆ, 2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದಂತೆಯೇ  ಹೊಸ ಹಾಗೂ ಹಳೆಯ ತೆರಿಗೆ ವ್ಯವಸ್ಥೆಯ ಆದಾಯ ತೆರಿಗೆ ಸ್ಲ್ಯಾಬ್ ಗಳಿದ್ದು, ಅದರಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಈ ಮಧ್ಯೆ 2024-25ನೇ ಹಣಕಾಸು ಸಾಲಿನ ಪ್ರಾರಂಭಿಕ ದಿನವಾದ ಏಪ್ರಿಲ್ 1ರಂದು ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಘೋಷಿಸಲಾಗುತ್ತದೆ ಎಂದು ಕೆಲವು ವರದಿಗಳು ಬಿತ್ತರಗೊಂಡಿದ್ದು, ತೆರಿಗೆದಾರರಲ್ಲಿ ಗೊಂದಲ ಮೂಡಿಸಿದ್ದವು. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

"ಕೆಲವು ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಹೊಸ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿ ದಾರಿಪ್ಪಿಸುವ ಮಾಹಿತಿಗಳು ಹರಿದಾಡಿದ್ದವು'' ಎಂದು ಸಚಿವಾಲಯ ತಿಳಿಸಿದೆ. ಅದಕ್ಕಾಗಿಯೇ ಈ ಸ್ಪಷ್ಟನೆ ನೀಡುತ್ತಿರೋದಾಗಿ ಅದು ತಿಳಿಸಿದೆ. ಹೊಸ ತೆರಿಗೆ ವ್ಯವಸ್ಥೆ ಕಂಪನಿಗಳು ಹಾಗೂ ಸಂಸ್ಥೆಗಳನ್ನು ಹೊರತುಪಡಿಸಿ ಇತರ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. 2023-24ನೇ ಹಣಕಾಸು ಸಾಲಿನಿಂದ ಹೊಸ ತೆರಿಗೆ ವ್ಯವಸ್ಥೆ ಡಿಫಾಲ್ಟ್ ವ್ಯವಸ್ಥೆ ಆಗಿರಲಿದೆ. ಇನ್ನು ಈ ಸಾಲಿನ ಮೌಲ್ಯಮಾಪನ ವರ್ಷ 2024-25 ಆಗಿರಲಿದೆ.

1962ರಿಂದಲೂ ಬಾಕಿ ಇರುವ ತೆರಿಗೆ ಕೇಸ್‌ಗಳು ರದ್ದು

ಹಳೆಯ ತೆರಿಗೆ ವ್ಯವಸ್ಥೆಯಂತೆ ವಿವಿಧ ವಿನಾಯ್ತಿಗಳು ಹಾಗೂ ಕಡಿತಗಳ ಪ್ರಯೋಜನಗಳು ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಇರದಿದ್ದರೂ ತೆರಿಗೆ ದರಗಳು ಗಮನಾರ್ಹವಾಗಿ ಕಡಿಮೆ ಇರುತ್ತವೆ. ಹೊಸ ತೆರಿಗೆ ವ್ಯವಸ್ಥೆ ಡಿಫಾಲ್ಟ್ ತೆರಿಗೆ ವ್ಯವಸ್ಥೆಯಾಗಿದ್ದರೂ ತೆರಿಗೆದಾರರು ತಮಗೆ ಅನುಕೂಲಕರವಾದ ಹೊಸ ಅಥವಾ ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಬಹುದು. 2024-25ನೇ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ನಕ ಹೊಸ ತೆರಿಗೆ ವ್ಯವಸ್ಥೆಯಿಂದ ಹೊರಹೋಗಲು ಅವಕಾಶವಿದೆ. ಯಾವುದೇ ಉದ್ಯಮದ ಆದಾಯವಿಲ್ಲದ ಅರ್ಹ ವ್ಯಕ್ತಿ ಪ್ರತಿ ಹಣಕಾಸು ಸಾಲಿನಲ್ಲಿ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಆ ವ್ಯಕ್ತಿ ಒಂದು ವರ್ಷ ಹೊಸ ತೆರಿಗೆ ವ್ಯವಸ್ಥೆ ಅಳವಡಿಸಿಕೊಂಡಿದ್ದರೆ, ಇನ್ನೊಂದು ವರ್ಷ ಹಳೆಯ ತೆರಿಗೆ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. 

ಎಷ್ಟು ಆದಾಯವಿದ್ರೆ ಐಟಿಆರ್ ಸಲ್ಲಿಕೆ ಮಾಡ್ಬೇಕು?
ಕಳೆದ ವರ್ಷದ ಬಜೆಟ್‌ನಲ್ಲಿ, ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ರಿಟರ್ನ್ಸ್‌ ಸಲ್ಲಿಸಿದರೆ 7 ಲಕ್ಷ ರೂ.ವರೆಗೆ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸುವ ಅಗತ್ಯವಿರಲಿಲ್ಲ. ಆ ಲಾಭ ಈ ವರ್ಷವೂ ಮುಂದುವರೆಯಲಿದೆ. ಹಳೆ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ ಆದಾಯ 2.5 ಲಕ್ಷ ರೂ.ವರೆಗಿದ್ದರೆ ತೆರಿಗೆ ಪಾವತಿಸುವ ಅಗತ್ಯವಿಲ್ಲ. ತೆರಿಗೆದಾರರ ಆದಾಯ 2.5 ಲಕ್ಷ ರೂ.ಗಿಂತ ಹೆಚ್ಚಿದ್ದು, 5 ಲಕ್ಷ ರೂ. ಮೀರದಿದ್ದರೆ ಅವರಿಗೆ ತೆರಿಗೆ ವಿನಾಯ್ತಿಗಳು ಲಭಿಸುತ್ತವೆ. ಅಂದರೆ 5 ಲಕ್ಷ ರೂ.ವರೆಗೂ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಆದಾಯವು 5 ಲಕ್ಷ ರೂ. ಮೀರಿದರೆ 2.5 ಲಕ್ಷ ರೂ.ಗಿಂತ ಮೇಲ್ಪಟ್ಟ ಆದಾಯಕ್ಕೆ ತೆರಿಗೆ ಪಾವತಿಸಬೇಕಿದೆ.

Income Tax Return 2024:ಎಚ್ ಆರ್ ಎ ವಿನಾಯ್ತಿ ಕ್ಲೇಮ್ ಮಾಡೋ ಮುನ್ನ ಈ 5 ವಿಚಾರಗಳನ್ನು ಗಮನಿಸಿ

ಹೊಸ ತೆರಿಗೆ ಪದ್ಧತಿಯಲ್ಲಿ 3 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ರಿಟರ್ನ್ಸ್‌ ಅನ್ನೇ ಸಲ್ಲಿಸುವ ಅಗತ್ಯವಿಲ್ಲ. ಆದರೆ ತೆರಿಗೆದಾರನ ವಾರ್ಷಿಕ ಆದಾಯ 3 ಲಕ್ಷ ರೂ.ನಿಂದ 7 ಲಕ್ಷ ರೂ. ನಡುವೆ ಇದ್ದರೆ ರಿಟರ್ನ್ಸ್‌ ಸಲ್ಲಿಸಬೇಕು, ಆದರೆ ತೆರಿಗೆ ಪಾವತಿಸುವ ಅಗತ್ಯವಿಲ್ಲ. ವಾರ್ಷಿಕ ಆದಾಯ 7 ಲಕ್ಷ ರೂ. ಮೀರಿದರೆ ಆಗ 3 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ತೆರಿಗೆ ಬರುತ್ತದೆ. ಹೊಸ ತೆರಿಗೆ ಪದ್ಧತಿಯಲ್ಲಿ ಯಾವುದೇ ಹೂಡಿಕೆಗಳನ್ನು ಮಾಡುವ ಅಗತ್ಯವಿಲ್ಲ. ಏಕೆಂದರೆ ಅಂತಹ ಹೂಡಿಕೆಗೆ ಇಲ್ಲಿ ತೆರಿಗೆ ವಿನಾಯ್ತಿ ಲಭಿಸುವುದಿಲ್ಲ.

Latest Videos
Follow Us:
Download App:
  • android
  • ios