ಹಿಂದೂಗಳ ಪವಿತ್ರ ಗಂಗಾಜಲದ ಮೇಲೆ ಜಿಎಸ್‌ಟಿ ತೆರಿಗೆ ಇಲ್ಲ, ಕೇಂದ್ರ ಸರ್ಕಾರ ಸ್ಪಷ್ಟನೆ!

ಹಿಂದೂಗಳ ಪವಿತ್ರ ಗಂಗಾಜಲದ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಲಾಗಿದೆ ಅನ್ನೋ ಕಾಂಗ್ರೆಸ್ ಆರೋಪ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಪವಿತ್ರ ಗಂಗಾಜಲದ ಮೇಲೆ ಯಾವುದೇ ತೆರಿಗೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

NO GST on Gangajal Central Govt CBIC clarified 18 percent tax allegation by congress ckm

ನವದೆಹಲಿ(ಅ.12) ಕೆಲ ದಿನಗಳಿಂದ ದೇಶದಲ್ಲಿ ಕೋಲಾಹಲ ಸೃಷ್ಟಿಸಿದ ಗಂಗಾಜಲದ ಮೇಲಿನ ತೆರಿಗೆ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಹಿಂದೂಗಳ ಪವಿತ್ರ ಗಂಗಾಜಲದ ಮೇಲೆ ಮೋದಿ ಸರ್ಕಾರ ಶೇಕಡಾ 19 ರಷ್ಟು ಜಿಎಸ್‌ಟಿ ತೆರಿಗೆ ವಿಧಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಕುರಿತು ಕೇಂದ್ರ ಸರ್ಕಾರದ ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟಾಕ್ಸಸ್ ಅಂಡ್ ಕಸ್ಟಮ್ಸ್ ಸ್ಪಷ್ಟನೆ ನೀಡಿದೆ. 2017ರ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿತ್ತು. ಇಷ್ಟೇ ಅಲ್ಲ ಪವಿತ್ರ ಗಂಗಾಜಲಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಈ ನಿಯಮದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಸ್ಪಷ್ಟನೆಯಿಂದ ಇದೀಗ ಗಂಭೀರ ಆರೋಪ ಮಾಡಿದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.

ಚತ್ತೀಸಘಡ ಮುಖ್ಯಮಂತ್ರಿ ಭೂಪೇಶ್ ಭಾಘೆಲ್ ಬಳಿಕ ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಮೋದಿ ಉತ್ತರಖಂಡ ಪ್ರವಾಸದ ದಿನವೇ ಖರ್ಗೆ ಟ್ವಿಟರ್ ಮೂಲಕ ಕೇಂದ್ರದ ವಿರುದ್ಧ ನಕಲಿ ರಾಮ ಭಕ್ತ ಆರೋಪ ಮಾಡಿದ್ದರು. ಹಿಂದೂಗಳ ಬದುಕಿನಲ್ಲಿ ಗಂಗಾಜಲಕ್ಕೆ ವಿಶೇಷ ಪ್ರಾತಿನಿಧ್ಯವಿದೆ.  ಜನನದಿದಂ ಮರಣದವರೆಗೆ ಸಾಮಾನ್ಯ ಭಾರತೀಯನಿಗೆ ಮೋಕ್ಷ ಒದಗಿಸುವ ಗಂಗಾ ಮಾತೆ ಮಹತ್ವ ಹೆಚ್ಚು. ನಿಮ್ಮ ಸರ್ಕಾರ ಶೇಕಡಾ 10 ರಷ್ಟು ಜಿಎಸ್‌ಟಿ ತೆರಿಗೆಯನ್ನು ಗಂಗಾಜಲದ ಮೇಲೆ ವಿಧಿಸಿದೆ. ತಮ್ಮ ಮನೆಯಲ್ಲಿ ಗಂಗಾಜಲ ತರಿಸುವವರಿಗೆ ಇದರ ಹೊರೆಯನ್ನು ಮೋದಿ ಸರ್ಕಾರ ಯೋಚಿಸಿಲ್ಲ. ಬಿಜೆಪಿ ಸರ್ಕಾರದ   ಲೂಟಿ ಹಾಗೂ ಬೂಟಾಟಿಕೆಯ ಪರಮಾವಧಿ ಎಂದು ಮಲ್ಲಿಕಾರ್ಜುನ ಖರ್ಗೆ ನೇರವಾಗಿ ಮೋದಿ ಹಾಗೂ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು.

ಪವಿತ್ರ ನದಿ ಗಂಗಾಜಲ ದಾವಣಗೆರೆ ಅಂಚೆ ಕಚೇರಿಯಲ್ಲೂ ಲಭ್ಯ

ಇದಕ್ಕೂ ಮೊದಲು ಭೂಪೇಶ್ ಬಾಘೆಲ್, ಬಿಜಪಿ ನಕಲಿ ರಾಮ ಭಕ್ತರು ಎಂದು ಆರೋಪಿಸಿದ್ದರು.  ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಸೇರಿದಂತೆ ಇತರ ಕೆಲ ಮಾಧ್ಯಮದಲ್ಲೂ ಶೇಕಡಾ 18 ರಷ್ಟು ತೆರಿಗೆ ಭಾರಿ ಸದ್ದು ಮಾಡಿತ್ತು. ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿದ್ದಂತೆ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ(CBIC) ಸ್ಪಷ್ಟನೆ ನೀಡಿದೆ.

 

 

ಪವಿತ್ರ ಗಂಗಾಜಲವನ್ನು ದೇಶದ ಮನೆ ಮನೆಯಲ್ಲಿ ಪೂಜೆಗೆ ಬಳಸಲಾಗುತ್ತದೆ. ಪೂಜಾ ಸಾಮಾಗ್ರಿಗಳನ್ನು ಜಿಎಸ್‌ಟಿ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಪೂಜಾ ಸಾಮಾಗ್ರಿ ಮೇಲೆ ಜಿಎಸ್‌ಟಿ ತೆರಿಗೆಯನ್ನು ಜಿಎಸ್‌ಟಿ ಕೌನ್ಸಿಲ್‌ನ 14 ಹಾಗೂ 15ನೇ ಸಭೆಯಲ್ಲಿ ಚರ್ಚಿಸಲಾಗಿದೆ. ಮೇ 18, 19, 2017ರಂದು ಹಾಗೂ ಜೂನ್ 2, 2017ರಂದು ನಡೆದ ಸಭೆಯಲ್ಲಿ ಪೂಜಾ ಸಾಮಾಗ್ರಿ ಹಾಗೂ ಜಿಎಸ್‌ಟಿ ತೆರಿಗೆ ಕುರಿತು ಚರ್ಚೆ ನಡೆಸಲಾಗಿದೆ. ಬಳಿಕ ಪೂಜಾ ಸಾಮಾಗ್ರಿಗಳನ್ನು ಜಿಎಸ್‌ಟಿ ತೆರಿಗೆಯಿಂದ ಪೂಜಾ ಸಾಮಾಗ್ರಿಯನ್ನು ಹೊರಗಿಡಲು ನಿರ್ಧರಿಸಿ ನಿರ್ಣಯ ಕೈಗೊಳ್ಳಲಾಗಿದೆ. ಜಿಎಸ್‌ಟಿ ಜಾರಿಯಾದಗಿನಿಂದ ಪೂಜಾ ಸಾಮಾಗ್ರಿಗಳನ್ನು ತೆರಿಗೆಯಿಂದ ವಿನಾಯಿತಿಗೊಳಿಸಲಾಗಿದೆ ಎಂದು  CBIC ಸ್ರಷ್ಟನೆ ನೀಡಿದೆ.

ಗಂಗಾಜಲ ಹೊತ್ತು ಎವರೆಸ್ಟ್ ಏರಿದ ಐಎಎಸ್ ಅಧಿಕಾರಿ!
 

Latest Videos
Follow Us:
Download App:
  • android
  • ios