Asianet Suvarna News Asianet Suvarna News

Petrol Diesel Rate:ಜಾರ್ಖಂಡ್ ನಲ್ಲಿ ಪೆಟ್ರೋಲ್ ದರ 25ರೂ. ಇಳಿಕೆ; ರಾಜ್ಯದಲ್ಲಿ ಇಂಧನ ದರದಲ್ಲಿ ಬದಲಾವಣೆ ಇಲ್ಲ

ಜಾರ್ಖಂಡ್ ಸರ್ಕಾರ ಜನವರಿ 26ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ದರದಲ್ಲಿ ಲೀಟರ್ ಗೆ 25ರೂ. ಇಳಿಕೆ ಮಾಡಿದೆ. ಆದ್ರೆ ರಾಜ್ಯದಲ್ಲಿ ಮಾತ್ರ ಇಂಧನ ದರ ಸುಮಾರು ಎರಡು ತಿಂಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ.
 

No changes in Petrol Diesel price in Karnataka check todays fuel rate Dec 30 2021 anu
Author
Bangalore, First Published Dec 30, 2021, 11:02 AM IST

ಬೆಂಗಳೂರು (ಡಿ.30): ರಾಜ್ಯದಲ್ಲಿ ಸುಮಾರು ಎರಡು ತಿಂಗಳಿಂದ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel)ಬೆಲೆ ಸ್ಥಿರವಾಗಿದೆ.  ಕೇಂದ್ರ ಸರ್ಕಾರ ನವೆಂಬರ್ 4 ರಂದು ಇಂಧನ ಮೇಲಿನ ಅಬಕಾರಿ ಸುಂಕ(excise duty)ಕಡಿತಗೊಳಿಸೋ ಮೂಲಕ ಬೆಲೆಯಲ್ಲಿ ಇಳಿಕೆ ಮಾಡಿತ್ತು. ಆ ಬಳಿಕ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸ್ಥಿರವಾಗಿದೆ. ನಿನ್ನೆ (ಡಿ.29) ಜಾರ್ಖಂಡ್ ( Jharkhand) ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ 25ರೂ. ಇಳಿಕೆ ಮಾಡಿರೋದಾಗಿ ಘೋಷಿಸಿದೆ.  ಹೊಸ ದರವು 2022ರ ಜನವರಿ 26ರಿಂದ ಅನುಷ್ಠಾನಕ್ಕೆ ಬರಲಿದ್ದು, ದ್ವಿಚಕ್ರ ವಾಹನಗಳಿಗೆ(Two wheelers) ಮಾತ್ರ ಅನ್ವಯಿಸಲಿದೆ.  ಜಾರ್ಖಂಡ್ ದಲ್ಲಿ ಪ್ರಸ್ತುತ ಪೆಟ್ರೋಲ್ ಲೀಟರ್ ಗೆ 98.48ರೂ. ಇದ್ದು, 25ರೂ. ಇಳಿಕೆ ಬಳಿಕ 73ರೂ. ತಲುಪಲಿದೆ.  ಡಿಸೆಂಬರ್ 1ರಂದು ದೆಹಲಿ ಸರ್ಕಾರ ಕೂಡ ಪೆಟ್ರೋಲ್ ಮೇಲಿನ  ವ್ಯಾಟ್ (VAT)ಕಡಿತಗೊಳಿಸೋ ಮೂಲಕ ಬೆಲೆಯಲ್ಲಿ ಇಳಿಕೆ ಮಾಡಿತ್ತು. ರಾಜ್ಯದಲ್ಲಿ ಇಂದಿನ (ಡಿ.30) ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೀಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿಇಂಧನ ದರ
ಬೆಂಗಳೂರಿನಲ್ಲಿ( Bengaluru)ಇಂದು ಪೆಟ್ರೋಲ್ ದರ ಲೀಟರ್ ಗೆ 100.58ರೂ. ಇದ್ದು, ಯಾವುದೇ ಬದಲಾವಣೆ ಕಂಡುಬಂದಿಲ್ಲ. ಡೀಸೆಲ್ ದರ ಲೀಟರ್ ಗೆ 85.01ರೂ ಇದೆ. ಹುಬ್ಬಳ್ಳಿಯಲ್ಲಿ (Hubli)ಪೆಟ್ರೋಲ್ ಬೆಲೆ ಇಂದು 100.30ರೂ.ಇದೆ. ನಿನ್ನೆ ಪೆಟ್ರೋಲ್ ಬೆಲೆ  100.31ರೂ. ಇತ್ತು. ಡೀಸೆಲ್ ಬೆಲೆ ಇಂದು 84.78ರೂ. ಇದೆ. ನಿನ್ನೆ   84.79ರೂ. ಇತ್ತು. ಮಂಗಳೂರಿನಲ್ಲಿ (Mangalore)ಪೆಟ್ರೋಲ್ ಬೆಲೆ 99.76 ರೂ. ಹಾಗೂ ಡೀಸೆಲ್ ದರ 84.24ರೂ.ಇದೆ. ಮೈಸೂರಿನಲ್ಲಿ (Mysore)ಪೆಟ್ರೋಲ್ ದರ ಲೀಟರ್ ಗೆ 100.32ರೂ. ಇದೆ. ನಿನ್ನೆ ಪೆಟ್ರೋಲ್ ದರ 100.08ರೂ. ಇತ್ತು.  ಇನ್ನು ಡೀಸೆಲ್ ದರ ಇಂದು ಲೀಟರ್ ಗೆ  84.77ರೂ. ಇದೆ. ನಿನ್ನೆ  84.56ರೂ. ಇತ್ತು. ಕಲಬುರಗಿಯಲ್ಲಿ(Kalburgi) ನಿನ್ನೆ ಪೆಟ್ರೋಲ್  ಬೆಲೆ ಲೀಟರ್ ಗೆ 100.73ರೂ. ಇತ್ತು. ಇಂದು 100.71ರೂ. ಇದೆ. ಡೀಸೆಲ್ ಲೀಟರ್ ಗೆ ನಿನ್ನೆ 85.17ರೂ. ಇತ್ತು. ಇಂದು 85.15ರೂ. ಇದೆ.

Jharkhand Petrol Price Cut : ದೆಹಲಿ ಬಳಿಕ ಜಾರ್ಖಂಡ್ ಸರದಿ; ಪೆಟ್ರೋಲ್ ಬೆಲೆಯಲ್ಲಿ 25ರೂ. ಇಳಿಕೆ

ಪೆಟ್ರೋಲ್ ದರ ಪರಿಷ್ಕರಣೆ ಹೇಗೆ? 
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್‌ಗಳ ಕಮೀಷನ್ ಹಾಗೂ ವ್ಯಾಟ್(VAT) ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್‌ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ.ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕೋದು.ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು. ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. 

Ola Hyper chargers: BPCL ಪಂಪ್ ಗಳಲ್ಲಿ ಹೈಪರ್ ಚಾರ್ಜಸ್ ಸ್ಥಾಪನೆಗೆ ಮುಂದಾದ ಓಲಾ; ಜೂನ್ ತನಕ ಗ್ರಾಹಕರಿಗೆ ಉಚಿತ ಸೇವೆ

GST ಇಲ್ಲ
ಪೆಟ್ರೋಲ್ ಹಾಗೂ ಡೀಸೆಲ್ ಸರಕು ಹಾಗೂ ಸೇವಾ ತೆರಿಗೆ (GST) ವ್ಯಾಪ್ತಿಗೆ ಬಾರದಿದ್ರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ತೆರಿಗೆಗಳನ್ನು ವಿಧಿಸುತ್ತವೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ. 

"

 

Follow Us:
Download App:
  • android
  • ios