ವಾರಾಂತ್ಯದಲ್ಲಿ ಆಭರಣ ಖರೀದಿಸೋರಿಗೆ ಕೊಂಚ ನಿರಾಳತೆ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಏರಿಕೆಯಾಗಿಲ್ಲ. ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆ ಕಂಡುಬಂದಿದೆ. 

ಬೆಂಗಳೂರು (ಡಿ.25): ಮದುವೆ, ಗೃಹಪ್ರವೇಶ ಮುಂತಾದ ಶುಭ ಸಮಾರಂಭಗಳು ಈಗ ಜೋರಾಗಿಯೇ ನಡೆಯುತ್ತಿವೆ. ಇಂಥ ಸಮಯದಲ್ಲಿ ಚಿನ್ನ(Gld) ಹಾಗೂ ಬೆಳ್ಳಿಗೆ (Silver) ಹೆಚ್ಚಿನ ಬೇಡಿಕೆಯಿರೋದು ಸಹಜ. ಬಂಧುಗಳಿಗೆ, ಆತ್ಮೀಯರಿಗೆ ಉಡುಗೊರೆ ನೀಡಲು ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನೇ ಬಹುತೇಕರು ಆಯ್ಕೆ ಮಾಡುತ್ತಾರೆ. ಕ್ರಿಸ್ಮಸ್ ಸಂದರ್ಭದಲ್ಲಿ ಕೂಡ ಉಡುಗೊರೆ ನೀಡಲು ಕೆಲವರು ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನುಆಯ್ಕೆ ಮಾಡಿಕೊಳ್ಳುತ್ತಾರೆ ಕೂಡ. ಹೀಗಾಗಿ ಕಳೆದ ಕೆಲವು ದಿನಗಳಿಂದ ಚಿನ್ನ ಹಾಗೂ ಬೆಳ್ಳಿಗೆ ಬೇಡಿಕೆ ಸ್ವಲ್ಪ ಹೆಚ್ಚಿದೆ. ಇನ್ನು ಚಿನ್ನ ಖರೀದಿಸುತ್ತಿರೋರಿಗೆ ನಾಲ್ಕೈದು ದಿನಗಳಿಂದ ಕೊಂಚ ಮಟ್ಟಿಗೆ ಖುಷಿ ಹಾಗೂ ನಿರಾಳತೆ ಸಿಕ್ಕಿದೆ. ಇದಕ್ಕೆ ಕಾರಣ ಚಿನ್ನದ ಬೆಲೆಯಲ್ಲಿ(Price) ಕಳೆದ ಕೆಲವು ದಿನಗಳಿಂದ ಇಳಿಕೆ ಕಂಡುಬಂದಿರೋದು. ನಿತ್ಯ ವಸ್ತುಗಳ ಬೆಲೆಯೇರಿಕೆ(Price hike), ಒಮಿಕ್ರಾನ್(Omicron) ಭೀತಿ, ಡಾಲರ್(Dollar) ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ವಿದೇಶಿ ವಿನಿಮಯ ಸಂಗ್ರಹದಲ್ಲಿನ(Foreign Exchange reserve) ಇಳಿಕೆ ಚಿನ್ನದ ದರದ ಏರಿಕೆಗೆ ಕಾರಣವಾಗಬಹುದು ಎಂಬ ಸಣ್ಣ ಅನುಮಾನವಂತೂ ಎಲ್ಲರ ಮನದಲ್ಲಿ ಮೂಡಿತ್ತು.ಕಳೆದ ವರ್ಷ ಕೋವಿಡ್ -19 (COVID) ಕಾರಣಕ್ಕೆ ಚಿನ್ನದ ಬೆಲೆ ಗಗನಕ್ಕೇರಿದ್ದನ್ನು ಯಾರೂ ಮರೆತಿಲ್ಲ.ಹೀಗಾಗಿ ಈ ಬಾರಿ ಒಮಿಕ್ರಾನ್ ಕಾರಣಕ್ಕೆ ಮತ್ತೆ ಚಿನ್ನದ ದರದಲ್ಲಿ ಏರಿಕೆಯಾಗುತ್ತೇನೋ ಎಂಬ ಭಯ ಚಿನ್ನ ಖರೀದಿದಾರರು ಹಾಗೂ ಹೂಡಿಕೆದಾರರಲ್ಲಿತ್ತು(Investors). ಆದ್ರೆ ಇತ್ತೀಚಿಗಿನ ಬೆಳವಣಿಗೆ ಅವರಿಗೆ ಕೊಂಚ ರಿಲೀಫ್ ನೀಡಿದೆ. ಕಳೆದ ಕೆಲವು ದಿನಗಳಿಂದ ಇಳಿಕೆ ಹಾದಿಯಲ್ಲಿದ್ದ ಚಿನ್ನದ ಬೆಲೆ ಇಂದು (ಡಿ.25) ಸ್ಥಿರತೆ ಕಾಯ್ದುಕೊಂಡಿದೆ. ಏರಿಕೆಯಾಗುತ್ತಿದ್ದ ಬೆಳ್ಳಿ(Silver) ದರ ಇಂದು 100ರೂ.ಇಳಿಕೆಯಾಗಿದೆ.ಇಂದು (ಡಿ.25) ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಬೆಂಗಳೂರಿನಲ್ಲಿ(Bengaluru) ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,350ರೂ. ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 49,480ರೂ. ಇದೆ. ಒಂದು ಕೆ.ಜಿ. ಬೆಳ್ಳಿ ಬೆಲೆಯಲ್ಲಿ ಇಂದು 100ರೂ. ಇಳಿಕೆ ಕಂಡುಬಂದಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 62,400ರೂ. ಇದ್ರೆ ಇಂದು 62,300ರೂ. ಇದೆ.

Petrol Diesel Rate : ಕ್ರಿಸ್ಮಸ್ ಸಂಭ್ರಮದಲ್ಲಿ ಇಂಧನ ದರ ಪರಿಶೀಲಿಸಲು ಮರೆಯಬೇಡಿ; ಪೆಟ್ರೋಲ್, ಡೀಸೆಲ್ ಇಂದಿನ ಬೆಲೆ ಹೀಗಿದೆ

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,500ರೂ. ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 51,800ರೂ. ಇದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು 100ರೂ. ಇಳಿಕೆಯಾಗಿದೆ. ನಿನ್ನೆ 62,400ರೂ. ಆಗಿದ್ದ ಬೆಳ್ಳಿ ಬೆಲೆ ಇಂದು 62,300ರೂ. ಆಗಿದೆ. 

ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿ ಕೂಡ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 47,300ರೂ. ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು 48,300ರೂ. ಇದೆ. ಬೆಳ್ಳಿ ದರದಲ್ಲಿಇಂದು 100ರೂ. ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 62,400ರೂ. ಇದ್ದು, ಇಂದು 62,300ರೂ. ಆಗಿದೆ.

Aadhaar card: ಆಧಾರ್ ಕಾರ್ಡ್ ಕಳೆದು ಹೋಗಿದೆಯಾ? ಮರಳಿ ಪಡೆಯಲು ಹೀಗೆ ಮಾಡಿ

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ ಇಂದು ಚಿನ್ನದ ದರ ಸ್ಥಿರವಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,510ರೂ.ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು 49,650ರೂ. ಆಗಿದೆ. ಬೆಳ್ಳಿ ದರ ಕೂಡ ಇಂದು ಸ್ಥಿರವಾಗಿದ್ದು, ಒಂದು ಕೆ.ಜಿ. ಬೆಳ್ಳಿಗೆ 66,100ರೂ.ಇದೆ.

"