ಮೈಸೂರು(ಮಾ.05): ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು (ಗುರುವಾರ) ಒಟ್ಟು 2,37,893 ಕೋಟಿ ರೂ. ಗಾತ್ರದ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಆದರೆ ಹಳೇ ಮೈಸೂರು ಜನರಿಗೆ ಬಿಎಸ್‌ವೈ ಬಜೆಟ್ ಆಶಾದಾಯಕವಾಗಿಲ್ಲ.

ಹಳೇ ಮೈಸೂರು ಭಾಗಕ್ಕೆ ಬಜೆಟ್‌ನಲ್ಲಿ ಗಮನಾರ್ಹ ಮನ್ನಣೆ ಸಿಕ್ಕಿಲ್ಲ. ಮೈಸೂರು, ಮಂಡ್ಯ ಸೇರಿ ಐದಾರು ಜಿಲ್ಲೆಗೆ ಬಜೆಟ್‌ನಲ್ಲಿ ಹೇಳಿಕೊಳ್ಳುವಂತಹ ಅನುದಾನವೇ ಸಿಕ್ಕಿಲ್ಲ. ಬಜೆಟ್‌ನಲ್ಲಿ ಯಾವುದೇ ನಿಗದಿತ ದೊಡ್ಡ ಸ್ಕೀಮ್ ಪ್ರಸ್ತಾಪವಾಗಿಲ್ಲ.

ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ?

ಚಾಮರಾಜನಗರ, ಕೊಡಗು, ತುಮಕೂರು, ಚಿತ್ರದುರ್ಗ, ಹಾಸನ ಸೇರಿ ಹಲವು ಜಿಲ್ಲೆಗಳಿಗೆ ಬಿಗ್ ಸ್ಕೀಮ್ ಘೋಷಣೆ ಮಾಡಿಲ್ಲ. ಮೈಸೂರು ಭಾಗದ ಜಿಲ್ಲೆಗಳಿಗೆ ಹೊಸ ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿಲ್ಲ. ಹಳೆ ಮೈಸೂರು ಭಾಗಗಳಿಗೆ ಯಡಿಯೂರಪ್ಪ ಬಜೆಟ್ ನಲ್ಲಿ ಪ್ರಾಶಸ್ತ್ಯವನ್ನೇ ನೀಡಿಲ್ಲವೇ ಎಂಬಂತ ಪ್ರಶ್ನೆ ಮೂಡಿದೆ. ಹೇಳಿಕೊಳ್ಳುವಂತಹ ಯಾವುದೇ ದೊಡ್ಡ ಯೋಜನೆಗಳನ್ನು ಮೈಸೂರು ಭಾಗಕ್ಕೆ ನೀಡಿಲ್ಲ.