Asianet Suvarna News Asianet Suvarna News

ರಾತ್ರಿ 9 ಗಂಟೆ ನಂತ್ರ ಎಟಿಎಂನತ್ತ ಸುಳಿಬೇಡಿ: ಗೃಹ ಸಚಿವಾಲಯ!

ರಾತ್ರಿ 9 ಗಂಟೆ ಆದ್ಮೇಲೆ ಎಟಿಎಂ ಗೆ ಹಣ ತುಂಬುವಂತಿಲ್ಲ! ಅಧಿವೇಶನ ಹೊರಡಿಸಿದ ಕೇಂದ್ರ ಗೃಹ ಸಚಿವಾಲಯ! ಹಣ ಸಾಗಿಸುವ ವಾಹನಗಳ ಮೇಲೆ ಹೆಚ್ಚಿದ ದಾಳಿ! ನಗರ, ಗ್ರಾಮೀಣ ಪ್ರದೇಶಗಳಿಗೆ ಬೇರೆ ಬೇರೆ ಸಮಯ! ನಕ್ಸಲ್ ಪೀಡಿತ ಪ್ರದೇಶಗಳಿಗೂ ಸಮಯ ನಿಗದಿ

No ATM to be refilled after 9 pm from February 2019
Author
Bengaluru, First Published Aug 19, 2018, 4:20 PM IST

ನವದೆಹಲಿ(ಆ.19): ಮುಂದಿನ ವರ್ಷದಿಂದ ನಗರ ಪ್ರದೇಶಗಳಲ್ಲಿ ರಾತ್ರಿ 9 ಗಂಟೆ ನಂತರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 6 ಗಂಟೆಯ ನಂತರ ಎಟಿಎಂಗೆ ಹಣ ಭರ್ತಿ ಮಾಡುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೊಸ ಅಧಿಸೂಚನೆ ಹೊರಡಿಸಿದೆ.

ಇತ್ತೀಚಿಗೆ ಎಟಿಎಂಗೆ ಹಣಗೆ ಸಾಗಿಸುವ ವಾಹನಗಳ ಮೇಲೆ ದಾಳಿ, ಎಟಿಎಂ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. 

ಹಣ ಸಾಗಿಸುವ ವಾಹನಕ್ಕೆ ಇಬ್ಬರು ಸಶಸ್ತ್ರ ಗಾರ್ಡ್‌ಗಳು ಕಡ್ಡಾಯವಾಗಿ ಇರಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೊಸ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಹೊಸ ಅಧಿಸೂಚನೆ ಪ್ರಕಾರ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮಧ್ಯಾಹ್ನ 4 ಗಂಟೆಯೊಳಗೆ ಎಟಿಎಂಗೆ ಹಣ ತುಂಬಬೇಕು. ಎಟಿಎಂ ಹಣ ನಿರ್ವಹಣೆ ಮಾಡುವ ಖಾಸಗಿ ಕಂಪನಿಗಳು ಮಧ್ಯಾಹ್ನದೊಳಗಾಗಿ ಬ್ಯಾಂಕ್ ನಿಂದ ಹಣ ಸಂಗ್ರಹಿಸಬೇಕು ಎಂದು ಸೂಚಿಸಲಾಗಿದೆ.

ದೇಶಾದ್ಯಂತ ಖಾಸಗಿ ಕಂಪನಿಗಳ ಸುಮಾರು 8 ಸಾವಿರ ವಾಹನಗಳು ನಿತ್ಯ ಸುಮಾರು 15 ಸಾವಿರ ಕೋಟಿ ರುಪಾಯಿ ಹಣವನ್ನು ಬ್ಯಾಂಕ್ ಪರವಾಗಿ ಎಟಿಎಂಗೆ ತುಂಬುತ್ತವೆ. ಕೇಂದ್ರ ಗೃಹ ಸಚಿವಾಲಯದ ಈ ಹೊಸ ಅಧಿಸೂಚನೆ ಫೆಬ್ರವರಿ 8, 2019ರಿಂದ ಜಾರಿಗೆ ಬರಲಿದೆ.

Follow Us:
Download App:
  • android
  • ios