Asianet Suvarna News Asianet Suvarna News

ಪೆಟ್ರೋಲ್‌ಗೆ ಮೆಥೆನಾಲ್ ಬಳಕೆ ಕಡ್ಡಾಯ?: ಸಮಸ್ಯೆ ಮಂಗಮಾಯ!

ಪೆಟ್ರೋಲ್ ಗೆ ಮೆಥೆನಾಲ್ ಮಿಶ್ರಣ ಕಡ್ಡಾಯ?1 ಶೇ. 15 ರಷ್ಟು ಮೆಥೆನಾಲ್ ಮಿಶ್ರಣ ಸಂಭವ! ಪೆಟ್ರೋಲ್ ಬೆಲೆ ಇಳಿಕೆಗಾಗಿ ಮೆಥೆನಾಲ್ ಬಳಕೆ! ವರ್ಕೌಟ್ ಆಗುತ್ತಾ ನೀತಿ ಆಯೋಗದ ಪ್ಲ್ಯಾನ್?! ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪುತ್ತಾ?

 

 

Niti Aayog may test-drive plan to run petrol cars on 15% methanol
Author
Bengaluru, First Published Aug 4, 2018, 2:01 PM IST

ನವದೆಹಲಿ(ಆ.4): ತೈಲ ಖಾಲಿಯಾದ ಮೇಲೆ ಮುಂದೇನು ಎಂಬ ಪ್ರಶ್ನೆಗೂ ಮಾನವ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ನವೀಕರಿಸಬಹುದಾದ ಅಥವಾ ಎಂದೂ ಕೊನೆಗೊಳ್ಳದ ಸಂಪನ್ಮೂಲವಾದ ಸೌರಶಕ್ತಿಯನ್ನು ಮಾನವ ಸಮಾಜ ಈಗಾಗಲೇ ಬಳಕೆ ಮಾಡುತ್ತಿದೆ. ಆದರೆ ಈ ಸೌರಶಕ್ತಿಯ ಸಮರ್ಪಕ ಬಳಕೆಯನ್ನು ಕೆಲವೇ ಕೆಲವು ದೇಶಗಳು ಮಾಡುತ್ತಿವೆ.

ಭಾರತದಂತ ದೇಶಗಳು ಸೌರಶಕ್ತಿ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಲು ಇನ್ನೂ ಹಲವು ದಶಕಗಳು ಬೇಕು. ಆದರೆ ಈಗಿರುವ ತೈಲ ಸಂಪನ್ಮೂಲವನ್ನೇ ಸದ್ಬಳಕೆ ಮಾಡಲು ಮುಂದಾಗಬೇಕಿರುವುದು ಇಂದಿನ ತುರ್ತು ಅಗತ್ಯ. ಅದಕ್ಕೆಂದೇ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿವೆ.

ಅದರಂತೆ ಭವಿಷ್ಯದಲ್ಲಿ ಕಾರು ಇತ್ಯಾದಿ ಪ್ರಯಾಣಿಕರ ವಾಹನಗಳಲ್ಲಿ ಪೆಟ್ರೋಲ್ ಜೊತೆಗೆ ಶೇ.15 ರಷ್ಟು ಮೆಥನಾಲ್ ಬಳಕೆ ಕಡ್ಡಾಯವಾಗುವ ಸಾಧ್ಯತೆ ದಟ್ಟವಾಗಿದೆ. ನೀತಿ ಆಯೋಗವು ಈ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ತನ್ನ ವರದಿಯನ್ನು ಈಗಾಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

ಈ ಪ್ರಸ್ತಾವನೆ ಕೇಂದ್ರ ಸಂಪುಟದಲ್ಲಿ ಒಪ್ಪಿಗೆಯಾದೆ ಭಾರತದ ತೈಲ ಆಮದು ವೆಚ್ಛದಲ್ಲಿ ಮಾಸಿಕ ಕನಿಷ್ಠ ಶೇ. 10 ರಷ್ಟು ಉಳಿತಾಯವಾಗಲಿದೆ ಎನ್ನಲಾಗಿದೆ. ನೀತಿ ಆಯೋಗವು ತನ್ನ ಮಹತ್ವಾಂಕ್ಷಿ 'ಮೆಥನಾಲ್ ಎಕಾನಾಮಿ'ಯ ಮಾರ್ಗದರ್ಶಿಯನ್ನು ಸಿದ್ಧಪಡಿಸಿದ್ದು, ಈ ಯೋಜನೆ ಯಶಸ್ವಿಯಾದರೆ 2010 ರ ವೇಳೆಗೆ 10 ಸಾವಿರ ಕೋಟಿ ಡಾಲರ್ ನಷ್ಟು ಹಣ ಉಳಿತಾಯ ಮಾಡಬಹುದಾಗಿದೆ.

ಅಡುಗೆ ಹಾಗೂ ಸಾರಿಗೆ ಎರಡೂ ವಲಯದಲ್ಲಿ ಮೆಥೆನಾಲ್ ಬಳಕೆ ವೃದ್ಧಿಯಾದಾಗ ಮಾತ್ರ ಇದು ಸಾಧ್ಯವಾಗಲಿದೆ ಎಂಬುದು ನೀತಿ ಆಯೋಗದ ಅನಿಸಿಕೆ. ಪ್ರಸ್ತುತ ಭಾರತದಲ್ಲಿನ ವಾಹನಗಳಲ್ಲಿ ಶೇ. 10 ರಷ್ಟು ಎಥೆನಾಲ್ ಮಿಶ್ರಿತ ಇಂಧನದ ಬಳಕೆ ಇದೆ. ಪ್ರತೀ ಲೀಟರ್ ಎಥೆನಾಲ್ ಗೆ 42 ರೂ. ವೆಚ್ಛವಾದರೆ ಮೆಥೆನಾಲ್ ಗೆ ಕೇವಲ 20 ರೂ. ವೆಚ್ಛವಾಗಲಿದೆ.

ಶೇ. 15 ರಷ್ಟು ಮೆಥೆನಾಲ್ ಮಿಶ್ರಣದ ಪರಿಣಾಮ ಪೆಟ್ರೋಲ್ ಬೆಲೆಯಲ್ಲಿ ಶೇ. ೧ಒ ರಷ್ಟು ಇಳಿಕೆ ನಿರೀಕ್ಷಿಸಬಹುದಾಗಿದ್ದು, ನೀತಿ ಆಯೋಗ ಈ ನಿಟ್ಟಿನಲ್ಲಿ ಗಮನಾರ್ಹ ಕೆಲಸ ಮಾಡುತ್ತಿದೆ ಎನ್ನಬಹುದು.

Follow Us:
Download App:
  • android
  • ios