Asianet Suvarna News Asianet Suvarna News

ಹೆಂಡ್ತಿ ಮಾತು ಕೇಳ್ತಾರಂತೆ ಮುಖೇಶ್ ಅಂಬಾನಿ; ಯಶಸ್ವಿ ದಾಂಪತ್ಯದ ಗುಟ್ಟು ರಟ್ಟು ಮಾಡಿದ ನೀತಾ ಅಂಬಾನಿ

ನೀತಾ ಹಾಗೂ ಮುಖೇಶ್ ಅಂಬಾನಿ ಜೋಡಿ ನೋಡಿದವರಿಗೆ ಮದುವೆಯಾಗಿ ಇಷ್ಟು ವರ್ಷವಾಗಿದ್ದರೂ ಇವರಿಬ್ಬರು ಇನ್ನೂ ನವ ವಧು ವರರಂತೆ ಹೇಗೆ ಖುಷಿ ಖುಷಿಯಾಗಿ ಇರ್ತಾರೆ ಎಂಬ ಪ್ರಶ್ನೆ ಕಾಡದೇ ಇರದು. ಹೀಗಿರುವಾಗ ನೀತಾ ಅಂಬಾನಿ ತಮ್ಮ ಸುದೀರ್ಘ, ಯಶಸ್ವಿ ದಾಂಪತ್ಯ ಬದುಕಿನ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. 
 

Nita Ambanis Two Pence About Married Life Revealed How Hubby Mukesh Ambani Is A Great Listener anu
Author
First Published Dec 7, 2023, 4:06 PM IST

Business Desk: ಭಾರತದ ಶ್ರೀಮಂತ ಉದ್ಯಮ ದಂಪತಿಗಳಲ್ಲಿ ಸದಾ ಸುದ್ದಿಯಲ್ಲಿರೋರು ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ. ಇವರಿಬ್ಬರಿಗೆ ಮೊಮ್ಮಕ್ಕಳಾಗಿ ಅಜ್ಜ-ಅಜ್ಜಿಯಾಗಿದ್ದರೂ ಇಬ್ಬರ ನಡುವಿನ ಬಾಂಧವ್ಯ ಈಗಷ್ಟೇ ಮದುವೆಯಾದವರಂತೆಯೇ ಇದೆ. ಅವರಿಬ್ಬರು ಜೊತೆಯಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ರೀತಿ, ಇಬ್ಬರ ನಡುವಿನ ಹೊಂದಾಣಿಕೆ ನೋಡಿದವರಿಗೆ 'ಮೇಡ್ ಫಾರ್ ಈಚ್ ಅದರ್ ಜೋಡಿ' ಅನಿಸದೆ ಇರದು. ಅಷ್ಟೇ ಅಲ್ಲ, ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ 35ಕ್ಕಿಂತಲೂ ಅಧಿಕ ವರ್ಷಗಳ ಇವರ ದಾಂಪತ್ಯ ಸಮಾಜಕ್ಕೆ  ಮಾದರಿ ಕೂಡ. ಶ್ರೀಮಂತರ ಮನೆಯೊಳಗೆ ಸಂಬಂಧಗಳು ಸರಿಯಿರದು ಎಂಬುದಕ್ಕೆ ಅಂಬಾನಿ ಕುಟುಂಬ ಅಪವಾದ. ಈ ಕುಟುಂಬದಲ್ಲಿ ಸಂಬಂಧಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ ಕೂಡ. ಹೀಗಿರುವಾಗ ಸ್ವರ್ಗದಲ್ಲೇ ನಿಶ್ಚಯವಾಗಿರುವ ಜೋಡಿ ಎಂಬಂತಿರುವ ಮುಖೇಶ್ ಹಾಗೂ ನೀತಾ ಅಂಬಾನಿ ಅವರ ಸುದೀರ್ಘ ದಾಂಪತ್ಯ ಬದುಕಿನ ಗುಟ್ಟೇನು? ಇದನ್ನು ಸ್ವತಃ ನೀತಾ ಅಂಬಾನಿ ಅವರೇ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ಏನದು?

ನನ್ನ ಗಂಡ ಉತ್ತಮ ಕೇಳುಗ ಅನ್ತಾರೆ ನೀತಾ
ದಾಂಪತ್ಯದಲ್ಲಿ ಗಂಡ-ಹೆಂಡ್ತಿ ನಡುವೆ ಅಭಿಪ್ರಾಯ ಭೇದವಿರೋದು ಸರ್ವೇಸಾಮಾನ್ಯ. ಹೀಗಿರುವಾಗ ದಾಂಪತ್ಯದಲ್ಲಿ ಖುಷಿಯಿರಬೇಕು ಅಂದ್ರೆ ಪ್ರತಿಯೊಂದು ವಿಚಾರದಲ್ಲೂ ಗಂಡ-ಹೆಂಡ್ತಿ ಸಮಾನ ಪಾಲುದಾರರಾಗಬೇಕು. ಹಾಗೆಯೇ ಒಬ್ಬರ ಮಾತಿಗೆ ಇನ್ನೊಬ್ಬರು ಕಿವಿಯಾಗಬೇಕು. ಆಗ ದಾಂಪತ್ಯದಲ್ಲಿ ಸಾರಸ್ಯ ಮೂಡುತ್ತದೆ. ಮುಖೇಶ್ ಹಾಗೂ ನೀತಾ ಅಂಬಾನಿ ಅವರ ನಡುವೆ ಕೂಡ ಅಭಿಪ್ರಾಯಗಳಲ್ಲಿ ಭಿನ್ನತೆಯಿರುತ್ತದೆ. ಆದರೆ, ಅವರಿಬ್ಬರು ಈ ವಿಚಾರವಾಗಿ ಮುಕ್ತವಾಗಿ ಮಾತನಾಡುತ್ತಾರಂತೆ, ಚರ್ಚೆ ನಡೆಸುತ್ತಾರಂತೆ. ಇದರಿಂದ ಇಬ್ಬರಿಗೂ ಜೊತೆಯಾಗಿ ಒಮ್ಮತದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ನೀತಾ ಅಂಬಾನಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಪತಿ ಮುಖೇಶ್ ಅಂಬಾನಿ ತನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ. ಅವರೊಬ್ಬ ಉತ್ತಮ ಕೇಳುಗ ಎಂದು ಪತಿಯನ್ನು ಹೊಗಳಿದ್ದಾರೆ.

ಲಕ್ಸುರಿಯಸ್‌ ಲೈಫ್‌ಸ್ಟೈಲ್‌, ನೀತಾ ಅಂಬಾನಿಯನ್ನೇ ಮೀರಿಸ್ತಾರೆ ಮಗಳು ಇಶಾ; ಧರಿಸೋ ಜಾಕೆಟ್‌ ಬೆಲೇನೆ ಇಷ್ಟೊಂದಾ?

ಕುಟುಂಬಕ್ಕೆ ಸಮಯ ಮೀಸಲಿಡ್ತಾರೆ
ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ. ಅವರು ಸದಾ ಬ್ಯುಸಿಯಾಗಿರುತ್ತಾರೆ. ಆದರೂ ಕುಟುಂಬಕ್ಕೆ ಸಮಯ ಮೀಸಲಿಡಲು ಅವರು ಮರೆಯೋದಿಲ್ಲ. ಅದೆಷ್ಟೇ ಬ್ಯುಸಿಯಿದ್ದರೂ ಕುಟುಂಬ ಸದಸ್ಯರಿಗಾಗಿ ಮುಖೇಶ್ ಸಮಯ ಮೀಸಲಿಡುತ್ತಾರೆ ಎಂದು ನೀತಾ ಹೇಳಿಕೊಂಡಿದ್ದಾರೆ. ಇನ್ನು ಕುಟುಂಬ ಹಾಗೂ ಉದ್ಯಮ ಎರಡೂ ಕಡೆ ಸಮಯ ನೀಡುವ ಮುಖೇಶ್ ಗೆ, ಅತ್ಯುತ್ತಮವಾಗಿ ಸಮಯ ನಿರ್ವಹಣೆ ಮಾಡುವ ಕಲೆ ತಿಳಿದಿದೆ ಎನ್ನುತ್ತಾರೆ ನೀತಾ. ಅಲ್ಲದೆ, ಮುಖೇಶ್ ಸಮಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡೋದನ್ನು ಅವರು ಮೆಚ್ಚಿಕೊಂಡಿದ್ದಾರೆ ಕೂಡ.

ಜೊತೆಯಾಗಿ ಸಿನಿಮಾ ನೋಡ್ತಾರೆ
ಮುಖೇಶ್ ಅಂಬಾನಿ ತಡರಾತ್ರಿ ಮನೆಗೆ ಬರುತ್ತಾರಂತೆ. ಆದರೂ ಪತ್ನಿಯ ಜೊತೆಗೆ ಕುಳಿತು ಸಿನಿಮಾ ನೋಡೋದನ್ನು ಮಿಸ್ ಮಾಡೋದಿಲ್ವಂತೆ. ಬಹುತೇಕ ದಿನಗಳಲ್ಲಿ ಮಧ್ಯರಾತ್ರಿ 12ರಿಂದ ಬೆಳಗಿನ ಜಾವ 3ಗಂಟೆ ತನಕ ಪತಿ-ಪತ್ನಿ ಜೊತೆಯಾಗಿ ಸಿನಿಮಾ ನೋಡುತ್ತಾರಂತೆ. ನೀತಾ ಅವರಿಗೆ ಸಿನಿಮಾ ನೋಡುವ ಹುಚ್ಚು ಇರದಿದ್ದರೂ ಮುಖೇಶ್ ಅವರ ಜೊತೆಗೆ ಕೂತು ನೋಡುತ್ತಾರಂತೆ.

ಹೆಸರಾಂತ ಸಲೂನ್‌ ಜತೆ ಇಶಾ ಅಂಬಾನಿಯ 8.4 ಲಕ್ಷ ಕೋಟಿ ಬ್ರಾಂಡ್ ಒಪ್ಪಂದ ರದ್ದು!

ಲಾಂಗ್ ಡ್ರೈವ್ ಹೋಗ್ತಾರೆ
ದಂಪತಿಗಳು ಈಗ ಕೂಡ ಯುವ ಜೋಡಿಯಂತೆ ಇರುವುದು ಇಷ್ಟಪಡುತ್ತಾರಂತೆ.  ಅದಕ್ಕಾಗಿ ಈಗ ನನ್ನನ್ನು ಡ್ರೈವ್‌ಗೆ ಕರೆದುಕೊಂಡು ಹೋಗುತ್ತಾನೆ, ನಾವಿಬ್ಬರೂ ಹಿಂದಿ ಸಂಗೀತವನ್ನು ಕೇಳಲು ಇಷ್ಟಪಡುತ್ತೇವೆ, ಬೀದಿ ಆಹಾರವನ್ನು ತಿನ್ನುತ್ತೇವೆ, ನಾನು ರಸ್ತೆಯಲ್ಲಿ ನನ್ನ 'ಭೇಲ್' ಅನ್ನು ಪ್ರೀತಿಸುತ್ತೇನೆ ಮತ್ತು ಅವನು ತನ್ನ 'ದೋಸಾ ಇಡ್ಲಿ'ಯನ್ನು ಪ್ರೀತಿಸುತ್ತಾನೆ ಎಂದು ನೀತಾ ಹೇಳಿದ್ದಾರೆ.  ಯಾವಾಗಲೂ ನಾವು ಇಷ್ಟಪಡುವುದನ್ನು ಮಾಡಲು ಇಚ್ಚಿಸುತ್ತೇವೆ ಎಂದು ನೀತಾ ಹೇಳಿದ್ದಾರೆ
 

Follow Us:
Download App:
  • android
  • ios