ಲಂಡನ್(ಜೂ.27): ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕ್’ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಭಾರತದಿಂದ ಪರಾರಿಯಾಗಿರುವ, ವಜ್ರದ ವ್ಯಾಪಾರಿ ನೀರವ್​ ಮೋದಿ ಹಾಗೂ ಆತನ ಸಹೋದರಿ ಪೂರ್ವಿ ಮೋದಿಗೆ ಸೇರಿದ ನಾಲ್ಕು ಸ್ವಿಸ್​ ಬ್ಯಾಂಕ್ ಖಾತೆಯನ್ನು ಸ್ವಿಟ್ಜರ್​​ಲ್ಯಾಂಡ್ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.

ಜಾರಿ ನಿರ್ದೇಶನಾಲಯ(ಇಡಿ) ಮನವಿ ಮೇರೆಗೆ ಸ್ವಿಸ್ ಅಧಿಕಾರಿಗಳು ಬ್ಯಾಂಕ್​ ಖಾತೆ ಜಪ್ತಿ ಮಾಡಿದ್ದು, ಅಕೌಂಟ್​​ನಲ್ಲಿದ್ದ ಆರು ಮಿಲಿಯನ್ ಅಮೆರಿಕನ್​ ಡಾಲರ್​​​ ನಗದು ಸೀಜ್ ಮಾಡಿದ್ದಾರೆ.

ಸದ್ಯ ನೀರವ್ ಮೋದಿ ವಂಡ್ಸ್​ವರ್ತ್ ಜೈಲಿನಲ್ಲಿದ್ದು, ಜಾಮೀನಿಗಾಗಿ ಸಲ್ಲಿಸಿದ್ದ ಎಲ್ಲಾ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ನೀರವ್ ಮೋದಿಯ ಮುಂದಿನ ವಿಚಾರಣೆ ಜುಲೈ 29ರಂದು ನಡೆಯಲಿದೆ.