ಮೋದಿ ಪದಗ್ರಹಣ ಬಳಿಕ ಶೇರು ಮಾರುಕಟ್ಟೆಯಲ್ಲಿ ಹಲ್ ಚಲ್; ಏರಿಕೆನಾ? ಇಳಿಕೆನಾ?
ಇಂದು ಮಾರುಕಟ್ಟೆ ಆರಂಭದಿಂದಲೇ ಅಂಕಗಳ ಏರಿಕೆ ಕಂಡು ಬಂತು. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 387 ಪಾಯಿಂಟ್ ಏರಿಕೆ ಕಂಡು 77,079 ಪಾಯಿಂಟ್‌ಗೆ ತಲುಪಿದೆ. ನಿಫ್ಟಿ ಶೇ.0.39 ವೇಗದಲ್ಲಿ 23,411 ಪಾಯಿಂಟ್‌ಗೆ ತಲುಪಿದೆ.
ನವದೆಹಲಿ: ವಾರದ ಮೊದಲ ದಿನ ಮತ್ತು ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರು ದಿನ ಇಂದು ಶೇರು ಮಾರುಕಟ್ಟೆಯಲ್ಲಿ ಭಾರೀ ನೆಗೆತ ಕಂಡು ಬಂದಿದೆ. ಬಿಎಸ್‌ಇ ಸೆನ್ಸೆಕ್ ಮೊದಲ ಬಾರಿಗೆ 77,000 ಪಾಯಿಂಟ್ ದಾಟಿ ಏರಿಕೆಯತ್ತ ಸಾಗುತ್ತಿದೆ. ಇತ್ತ ನಿಫ್ಟಿ50 ಅದ 23,400 ಅಂಕಗಳಷ್ಟು ಏರಿಕೆ ಕಂಡು ಬಂದಿದೆ. ಇಂದು ಮಾರುಕಟ್ಟೆ ಆರಂಭದಿಂದಲೇ ಅಂಕಗಳ ಏರಿಕೆ ಕಂಡು ಬಂತು. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 387 ಪಾಯಿಂಟ್ ಏರಿಕೆ ಕಂಡು 77,079 ಪಾಯಿಂಟ್‌ಗೆ ತಲುಪಿದೆ. ನಿಫ್ಟಿ ಶೇ.0.39 ವೇಗದಲ್ಲಿ 23,411 ಪಾಯಿಂಟ್‌ಗೆ ತಲುಪಿದೆ.
ಪವರ್‌ಗ್ರಿಡ್, ಎನ್‌ಟಿಪಿಸಿ, ಎಸ್‌ಬಿಐ, ಟಾಟಾ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಶೇರುಗಳ ಮುಖಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ಶೇರುಗಳು ಕುಸಿತ ಕಂಡಿವೆ. ನಿಫ್ಟಿ ಸ್ಟಾಕ್‌ಗಳಲ್ಲಿ, ಸಿಪ್ಲಾ ಮತ್ತು ಅದಾನಿ ಪೋರ್ಟ್‌ಗಳು ಶೇರುಗಳು ಏರಿಕೆ ಕಂಡಿದ್ರೆ, ಎಲ್ & ಟಿಮಿಂಡ್‌ಟ್ರೀ ಭಾರೀ ಇಳಿಕೆಯಾಗಿದೆ.
ಮೊದಲ ಸಂಪುಟ ಸಭೆಯಲ್ಲಿಯೇ ಬಂಪರ್ ಘೋಷಣೆ ಮಾಡ್ತಾರಾ ಪ್ರಧಾನಿಮೋದಿ?
ನಿಫ್ಟಿ ಐಟಿ ಶೇ.1.04ರಷ್ಟು ಕುಸಿತ
ಬಾರ್ಡರ್ ಮಾರ್ಕೆಟ್ ಬೆಂಚ್‌ಮಾರ್ಕ್ ಸೂಚ್ಯಂಕಗಳನ್ನು ಮೀರಿಸಿವೆ. ಮಿಡ್‌ಕ್ಯಾಪ್ ಸೂಚ್ಯಂಕ ಶೇ.1.07ರಷ್ಟು ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ.1.27ರಷ್ಟು ಏರಿಕೆ ಕಂಡಿವೆ. ನಿಫ್ಟಿ ಪಿಎಸ್‌ಯು ನಿಫ್ಟಿ ಶೇ.2.13, ನಿಫ್ಟಿ ರಿಯಲ್ ಶೇ.1.8 ಮತ್ತು ನಿಫ್ಟಿ ಆಯಿಲ್ ಆ್ಯಂಡ್ ಗ್ಯಾಸ್ ಶೇ.1.14ರಷ್ಟು ಏರಿಕೆ ಕಂಡಿವೆ. ಇನ್ನೊಂದೆಡೆ ನಿಫ್ಟಿ ಐಟಿ ಶೇ.1.04ರಷ್ಟು ಕುಸಿದಿದೆ.
ಕಳೆದ ವಾರ ಬಿಎಸ್‌ಇ ಸೆನ್ಸೆಕ್ಸ್ 2,732.05 ಪಾಯಿಂಟ್ ಇತ್ತು. ಈಗ ಶೇ.3.69ರಷ್ಟು ಏರಿಕೆ ಕಂಡಿದೆ. ನಿಫ್ಟಿ 759.45 ಪಾಯಿಂಟ್ ಇತ್ತು, ಈಗ ಶೇ.3.37ರಷ್ಟು ಏರಿಕೆಯಾಗಿತ್ತು. ಶುಕ್ರವಾರ 30 ಶೇರುಗಳ ಬಿಎಸ್‌ಇ ಸೆನ್ಸೆಕ್ಸ್ 1,720.8 ಪಾಯಿಂಟ್ ಆಗಿತ್ತು. ಶೇ.2.29ರಷ್ಟು ಏರಿಕೆಯಾಗಿ 76,795.31ಕ್ಕೆ ಏರಿಕೆಯಾಗಿ ಹೊಸ ದಾಖಲೆ ಬರೆದಿದೆ. ಸೆನ್ಸೆಕ್ಸ್ 1,618.85 ಅಂಕಗಳಿಷ್ಟಿತ್ತು. ಶೇ.2.16ರಷ್ಟು ನೆಗೆತ ಕಂಡು 76,693.36 ರೆಕಾರ್ಡ್ ಬರೆದು ಕೊನೆಗೊಂಡಿತ್ತು.
ಮೋದಿ ಪ್ರಧಾನಿಯಾದ ಮೊದಲ ದಿನವೇ ರೈತರ ಖಾತೆಗೆ 20,000 ಕೋಟಿ ರೂ ಹಣ ಜಮೆ!
ಶೇರು ಮಾರುಕಟ್ಟೆ ಏರಿಕೆಗೆ ಕಾರಣ ಏನು?
ಲೋಕಸಭಾ ಚುನಾವಣೆ ಫಲಿತಾಂಶ ಮತ್ತು ಆರ್‌ಬಿಐ ನೀತಿಗಳ ಸಮೀಕ್ಷೆಯ ವರದಿ ಬಂದಿರೋ ಕಾರಣ ಸೆನ್ಸೆಕ್ಸ್ ಏರಿಕೆ ಕಂಡು ಬಂದಿದೆ. ಈಗ ಹೂಡಿಕೆದಾರರ ಗಮನ ಜಾಗತಿಕ ಅಂಶಗಳ ಮೇಲಿದೆ. ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ, ಕಚ್ಚಾ ತೈಲ ಮತ್ತು ಸರಕುಗಳ ಬೆಲೆಗಳ ಮೇಲೆ ಮಾರುಕಟ್ಟೆ ನಿರ್ಧಾರವಾಗುತ್ತದೆ. ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರ (ಡಿಐಐ) ಹೂಡಿಕೆಗಳನ್ನು ಸಹ ಹೂಡಿಕೆದಾರರು ಗಮನಿಸುತ್ತಿದ್ದಾರೆ ಎಂದು ಸ್ವಸ್ತಿಕ್ ಇನ್ವೆಸ್ಟ್‌ಮಾರ್ಟ್ ಲಿಮಿಟೆಡ್‌ನ ಹಿರಿಯ ತಾಂತ್ರಿಕ ವಿಶ್ಲೇಷಕ ಪ್ರವೇಶ್ ಗೌರ್ ಹೇಳುತ್ತಾರೆ.