* ಮೇ 23ಕ್ಕೆ ಎನ್‌ಇಎಫ್‌ಟಿಸೇವೆ 14 ತಾಸು ವ್ಯತ್ಯಯ* ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೂ ಲಭ್ಯವಿರುವುದಿಲ್ಲ ಈ ಸೇವೆ* ಎನ್‌ಇಎಫ್‌ಟಿ ಸೇವೆಯಲ್ಲಿ ಆಗುವ ವ್ಯತ್ಯಯವನ್ನು ಬ್ಯಾಂಕುಗಳು ತಮ್ಮ ಗ್ರಾಹಕರ ಗಮನಕ್ಕೆ ತರುವಂತೆ ಸೂಚನೆ
ಮುಂಬೈ(ಮೇ.18): ಆನ್‌ಲೈನ್ ಮೂಲಕ ಹಣ ವರ್ಗಾವಣೆಗೆ ಬಳಸಲ್ಪಡುವ ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ)ನ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ಸೇವೆ ಇದೇ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೂ ಲಭ್ಯವಿರುವುದಿಲ್ಲ.
10 ಲಕ್ಷ ವರೆಗಿನ ಸಾಲ, ತುರ್ತು ಆರೋಗ್ಯ ಸೇವೆಗೆ 50,000 ಕೋಟಿ: ಆರ್‌ಬಿಐ!
ವ್ಯವಸ್ಥೆಯನ್ನು ತಾಂತ್ರಿಕವಾಗಿ ಮೇಲ್ದರ್ಜೆಗೇರಿಸಬೇಕಿರುವ ಕಾರಣ ಮೇ 22ರ ಮಧ್ಯರಾತ್ರಿ 12.01ರಿಂದ ಮೇ 23ರ ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ ಸೇವೆ ಲಭ್ಯವಿರುವುದಿಲ್ಲ. ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಎಂದಿನಂತೆ ನಡೆಯಲಿದೆ. ಆ ವ್ಯವಸ್ಥೆಯನ್ನು ಏ.18ರಂದೇ ತಾಂತ್ರಿಕವಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಎನ್‌ಇಎಫ್‌ಟಿ ಸೇವೆಯಲ್ಲಿ ಆಗುವ ವ್ಯತ್ಯಯವನ್ನು ಬ್ಯಾಂಕುಗಳು ತಮ್ಮ ಗ್ರಾಹಕರ ಗಮನಕ್ಕೆ ತರಬೇಕೆಂದು ಸೂಚಿಸಿದೆ.
