ಹೆಣ್ಣು ಮಕ್ಕಳ ಭದ್ರ ಭವಿಷ್ಯಕ್ಕಾಗಿ ಇಲ್ಲಿಯೇ ಹೂಡಿಕೆ ಮಾಡಿ

ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಬಲಪಡಿಸೋದು ಬಹಳ ಮುಖ್ಯ. ಅವರ ಶಿಕ್ಷಣ, ಮದುವೆ ಸೇರಿದಂತೆ ಅವರ ಜೀವನಕ್ಕೆ ಅಗತ್ಯವಿರುವ ಆರ್ಥಿಕ ನೆರವು ನೀಡಲು ಪಾಲಕರು ಮುಂದಾಗ್ತಾರೆ. ಅಂಥವರಿಗೆ ಇಲ್ಲೊಂದಿಷ್ಟು ಅತ್ಯುತ್ತಮ ಯೋಜನೆಗಳ ವಿವರ ಇದೆ. 
 

National Girl Child Day Best Financial Gift For Daughter roo

ಜನವರಿ 24ನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.  ಈ ದಿನವನ್ನು ಹೆಣ್ಣು ಮಕ್ಕಳಿಗೆ ಮೀಸಲಿಡಲಾಗಿದೆ. ಹಿಂದೆ ಹೆಣ್ಣು ಮಕ್ಕಳ ಜನನವಾಗ್ತಿದ್ದಂತೆ ಪಾಲಕರಿಗೆ ನಾನಾ ಚಿಂತೆ ಕಾಡ್ತಿತ್ತು. ಹೆಣ್ಣು ಮಕ್ಕಳ ಮದುವೆ ಬಗ್ಗೆ ಪಾಲಕರು ಮಗು ಹುಟ್ಟಿದಾಗಿನಿಂದಲೇ ಚಿಂತಿಸಲು ಶುರು ಮಾಡ್ತಿದ್ದರು. ಅಲ್ಪ ಸ್ವಲ್ಪ ಹಣವನ್ನು ಅಲ್ಲಿ ಇಲ್ಲಿ ಕೂಡಿಡುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳ ಮೇಲಿನ ಪ್ರೀತಿ ದುಪ್ಪಟ್ಟಾಗಿದೆ. ಮಗಳ ಜನನವಾಗ್ತಿದ್ದಂತೆ ಮನೆಯಲ್ಲು ಹಬ್ಬದ ವಾತಾವರಣವಿರುತ್ತದೆ. ಮಗಳಿಗೆ ಒಳ್ಳೆ ಶಿಕ್ಷಣ ನೀಡಬೇಕು, ಆಕೆಯನ್ನು ಒಂದು ಉತ್ತಮ ಹುದ್ದೆಯಲ್ಲಿ ನೋಡಬೇಕು ಎಂದು ಪಾಲಕರು ಕನಸು ಕಾಣ್ತಾರೆ. ಅದಕ್ಕೆ ತಕ್ಕಂತೆ ಹಣವನ್ನು ಎಲ್ಲಿ ಸುರಕ್ಷಿತವಾಗು ಹೂಡಿಕೆ ಮಾಡಬೇಕು ಎನ್ನುವ ಬಗ್ಗೆ ಚಿಂತನೆ ನಡೆಸ್ತಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ,   ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಮಗಳ ಶಿಕ್ಷಣ ಹಾಗೂ ಮದುವೆಗೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.  

ಸುಕನ್ಯಾ ಸಮೃದ್ಧಿ (Sukanya Samriddhi) ಯೋಜನೆ : ಸುಕನ್ಯಾ ಸಮೃದ್ಧಿ ಯೋಜನೆ (SSY) ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ಜಾರಿಗೆ ಬಂದ ಯೋಜನೆ (Plan)ಯಾಗಿದೆ.  2015 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ನೀವು ಈ  ಈ ಯೋಜನೆಯಡಿ ವಾರ್ಷಿಕವಾಗಿ 1.5 ಲಕ್ಷ ರೂಪಾಯಿವರೆಗೆ ಠೇವಣಿ (Deposit) ಇಡಬಹುದು. ಕನಿಷ್ಠ 250 ರೂಪಾಯಿಯನ್ನೂ ಠೇವಣಿ ಇಡಬಹುದು. ಇದು ತೆರಿಗೆ ಮುಕ್ತ ಯೋಜನೆಯಾಗಿದೆ. ನಿಮ್ಮ ಮಗಳು 21ನೇ ವರ್ಷಕ್ಕೆ ಕಾಲಿಟ್ಟಾಗ ಈ ಯೋಜನೆ ಪಕ್ವವಾಗುತ್ತದೆ. ಈ ಯೋಜನೆಯಲ್ಲಿ ಸದ್ಯ ಶೇಕಡಾ 8ರ ದರದಲ್ಲಿ ಬಡ್ಡಿ ಸಿಗ್ತಿದೆ.  

914 ಕೋಟಿ ಮೌಲ್ಯದ ಕಂಪನಿ ನಡೆಸುತ್ತಿರುವ ಮಗಳು, ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಅಪ್ಪನ ಆಸ್ತಿಗೆ ಲೆಕ್ಕವಿಲ್ಲ!

ಚಿನ್ನದ ಹೂಡಿಕೆ : ನಿಮ್ಮ ಮಗಳ ಆರ್ಥಿಕ ಸ್ಥಿತಿಯನ್ನು ಭದ್ರಪಡಿಸಲು ನೀವು ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಬಹುದು. ಚಿನ್ನದ ಮೆಲೆ ಹೂಡಿಕೆ ಮಾಡುವುದು ಈಗ ಸೂಕ್ತವಾಗಿದೆ. ಅನೇಕ ವರ್ಷಗಳಿಂದ ಚಿನ್ನದ ಸರಾಸರಿ ಆದಾಯ ಶೇಕಡಾ 10 ರಷ್ಟಿದೆ. ನೀವು ಮಗಳ ಹೆಸರಿನಲ್ಲಿ ಚಿನ್ನ ಅಥವಾ ಚಿನ್ನದ ಇಟಿಎಫ್ ನಲ್ಲಿ ಹೂಡಿಕೆ ಮಾಡಿದ್ರೆ ಆಕೆ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.  

ಉನ್ನತ ಹುದ್ದೆ ತೊರೆದು ಚಹಾ ಮಾರಲು ಪ್ರಾರಂಭಿಸಿದ ಐಐಟಿ ಪದವೀಧರ, ಈಗ ಈತನ ಸಂಸ್ಥೆ ಮೌಲ್ಯ 2,050 ಕೋಟಿ!

ಸಾರ್ವಜನಿಕ ಭವಿಷ್ಯ ನಿಧಿ : ಪಿಪಿಎಫ್ (PPF) ಕೂಡ ಮಕ್ಕಳಿಗೆ ಒಳ್ಳೆಯ ಯೋಜನೆಯಾಗಿದೆ. ಇದು ಮಗಳನ್ನು ಆರ್ಥಿಕವಾಗಿ ಸುರಕ್ಷಿತಗೊಳಿಸುತ್ತದೆ. ನೀವು ಪಿಪಿಎಫ್ ನಲ್ಲಿ ಕನಿಷ್ಠ 500 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಇದರ ಅಂತಿಮ ಮಿತಿ 1.5 ಲಕ್ಷ ರೂಪಾಯಿ ಆಗಿದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಶುರು ಮಾಡಿದ  15 ವರ್ಷಗಳ ನಂತ್ರ ಇದು ಮುಕ್ತಾಯಗೊಳ್ಳಲಿದೆ. ಸದ್ಯ ಶೇಕಡಾ 7.1 ರ ದರದಲ್ಲಿ ಬಡ್ಡಿ ಸಿಗ್ತಿದೆ.   
ಗಿಫ್ಟ್ ಮ್ಯೂಚುವಲ್ ಫಂಡ್ : ಇದು ಕೂಡ ಮಗಳಿಗೆ ಅತ್ಯುತ್ತಮವಾಗಿದೆ. 18 ವರ್ಷಗಳ ಲಾಕಿಂಗ್ ಅವಧಿಯಿದೆ. ಇದ್ರಲ್ಲಿ ಹೆಚ್ಚಿನ ಬಡ್ಡಿ ನಿಮಗೆ ಲಭ್ಯವಿದೆ.   

ಜೀವ ವಿಮೆ : ನೀವು ಮಗಳ ಹೆಸರಿನಲ್ಲಿ ಜೀವ ವಿಮೆ ಪಡೆಯಬಹುದು. ಇದು ಕೂಡ ತುರ್ತು ಪರಿಸ್ಥಿತಿಯಲ್ಲಿ ಮಗಳಿಗೆ ನೆರವಾಗುತ್ತದೆ.  

ಅಂಚೆ ಕಚೇರಿ ಪುನರಾವರ್ತಿತ ಠೇವಣಿ :  ಇದು ಸಹ ಹೆಣ್ಣು ಮಕ್ಕಳಿಗೆ ಒಳ್ಳೆಯ ಹೂಡಿಕೆ ಯೋಜನೆ ಎನ್ನಬಹುದು. ಇದು ಸಣ್ಣ ಉಳಿತಾಯ ಯೋಜನೆಯಾಗಿದೆ. ಇದರಲ್ಲಿ ಪ್ರತಿ ತಿಂಗಳು ನೀವು 100 ರೂಪಾಯಿ ಹೂಡಿಕೆ ಮಾಡಬೇಕು. 5 ವರ್ಷಗಳ ಈ ಯೋಜನೆಯಲ್ಲಿ ನಿಮಗೆ ಶೇಕಡಾ 5.8ರಷ್ಟು ಬಡ್ಡಿ ಸಿಗುತ್ತದೆ. ಇದು ಯಾವುದೇ ಅಪಾಯವಿಲ್ಲದ ಹೂಡಿಕೆ ಯೋಜನೆಯಲ್ಲಿ ಒಂದಾಗಿದೆ.

Latest Videos
Follow Us:
Download App:
  • android
  • ios