ಬೆಂಗಳೂರು(ಆ.19): ನಂದಿನಿ ಸಿಹಿ ತಿನಿಸುಗಳೆಂದರೆ ಅಬಾಲವೃದ್ಧರಾದಿಯಾಗಿ ಎಲ್ಲರ ಬಾಯಲ್ಲೂ ನೀರೂರುತ್ತೆ. ಕರ್ನಾಟಕದ ಹೆಮ್ಮೆ ಎನಿಸಿಕೊಂಡಿರುವ ನಂದಿನಿ, ಇದೀಗ ವಿಶ್ವ ಮಾರುಕಟ್ಟೆಯಲ್ಲಿ ರಾರಾಜಿಸಲು ಸಜ್ಜಾಗಿದೆ. 

ಹೌದು, ಇನ್ನು ಮುಂದೆ ವಿದೇಶದಲ್ಲಿಯೂ ನಂದಿನಿ ಸ್ವೀಟ್ಸ್  ರುಚಿಯನ್ನು ಆಸ್ವಾದಿಸಬಹುದಾಗಿದೆ. ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ನಂದಿನಿ ಸ್ವೀಟ್ಸ್ ಮಾರಾಟ ಆರಂಭಿಸಲಾಗುತ್ತಿದೆ.

ಶೀಘ್ರದಲ್ಲೇ ಒಂದು ಟನ್ ಸ್ವೀಟ್ಸ್ ಬಾಕ್ಸ್ ಕರ್ನಾಟಕ ಹಾಲು ಒಕ್ಕೂಟ ಮಹಾ ಮಂಡಳದಿಂದ ಸಿಂಗಾಪುರಕ್ಕೆ ರವಾನೆಯಾಗುತ್ತಿದೆ. ಇದು ಕೆಎಂಎಫ್ ತೆಗೆದುಕೊಂಡಿರುವ ಮಹತ್ವದ ನಿರ್ಧಾರವಾಗಿದೆ.  ಮೈಸೂರು ಪಾಕ್, ಮಿಲ್ಕ್ ಪೇಡಾ, ಕ್ಯಾಶ್ಯೂ ಬರ್ಫಿ,  ಕುಂದಾ, ಧಾರವಾಡ ಪೇಡಾ ಮತ್ತು ಕುಕ್ಕೀಸ್ ಗಳನ್ನು ಕಳುಹಿಸಲಾಗುತ್ತದೆ.

ಅರಬ್ ಏಷ್ಯಾ ಸಿಂಗಾಪೂರ್ ಪ್ರೈವೇಟ್ ಲಿಮಿಟೆಡ್  ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಸಿಂಗಾಪುರನಲ್ಲಿ ನಂದಿನಿ ಸ್ವೀಟ್ಸ್ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಕೆಎಂಎಫ್ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದ್ದಾರೆ.

ಸಿಂಗಾಪುರನಿಂದ ಪ್ರತಿವಾರ ಒಂದೂವರೆ ಟನ್ ಸ್ಟೀಟ್ ಗೆ ಬೇಡಿಕೆಯಿದೆ. ಅದರಂತೆ ಮುಂದಿನ ದಿನಗಳಲ್ಲಿ ಕತಾರ್, ಹಾಗೂ ಮಧ್ಯ ಏಷ್ಯಾ ದೇಶಗಳಿಗೆ ಕೂಡ ನಂದಿನಿ ಸ್ವೀಟ್ಸ್ ಗಳನ್ನು ರಫ್ತು ಮಾಡಲಾಗುತ್ತದೆ. ಏರ್ ಇಂಡಿಯಾ ಕಾರ್ಗೋ ವಿಮಾನದ ಮೂಲಕ ಈ ಸ್ವೀಟ್ಸ್ ಗಳನ್ನು ಸಿಂಗಾಪುರಕ್ಕೆ ಕಳುಹಿಸಲಾಗುವುದು ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.