ಮುಂಬೈ(ಏ.07): ಕಳೆದ 2 ತಿಂಗಳಲ್ಲಿ ಷೇರುಪೇಟೆ ಸಾಕಷ್ಟು ಕುಸಿತ ಕಂಡ ಹಿನ್ನೆಲೆಯಲ್ಲಿ ದೇಶದ ಶತಕೋಟ್ಯಧೀಶರ ಸಂಪತ್ತಿನ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿದಿದೆ. ದೇಶದ ನಂ.1 ಶ್ರೀಮಂತ ಮುಕೇಶ್‌ ಅಂಬಾನಿ ಅವರ ಸಂಪತ್ತು ಶೇ.28ರಷ್ಟು, ಅಂದರೆ .1.44 ಲಕ್ಷ ಕೋಟಿಯಷ್ಟುಕರಗಿದೆ.

ಇದರಿಂದಾಗಿ ವಿಶ್ವದ ನಂ.9ನೇ ಸಿರಿವಂತರಾಗಿದ್ದ ಅಂಬಾನಿ ಈಗ 8 ಸ್ಥಾನಗಳಷ್ಟುಕುಸಿದು 17ನೇ ಸ್ಥಾನಕ್ಕೆ ಇಳಿದಿದ್ದಾರೆ ಎಂದು ‘ಹರೂನ್‌ ಗ್ಲೋಬಲ್‌ ಶ್ರೀಮಂತರ ಪಟ್ಟಿ’ಯಲ್ಲಿ ಇದನ್ನು ತಿಳಿಸಲಾಗಿದೆ.

ಕೊರೋನಾ ಮಣಿಸಲು ಪಿಎಂ ಕೇರ್ಸ್ ನಿಧಿಗೆ 500 ಕೋಟಿ ದೇಣಿಗೆ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್‌

ಅದಾನಿ ಸಮೂಹದ ಗೌತಮ್‌ ಅದಾನಿ ಅವರ ಸಂಪತ್ತು ಶೇ.37ರಷ್ಟು(.45 ಸಾವಿರ ಕೋಟಿ), ಎಚ್‌ಸಿಎಲ್‌ ಮುಖ್ಯಸ್ಥ ಶಿವ ನಾಡಾರ್‌ ಅವರ ಸಂಪತ್ತು ಶೇ.26ರಷ್ಟು(.38 ಸಾವಿರ ಕೋಟಿ) ಹಾಗೂ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಉದಯ ಕೋಟಕ್‌ ಅವರ ಆಸ್ತಿ ಮೌಲ್ಯ ಶೇ.28ರಷ್ಟು(.30 ಸಾವಿರ ಕೋಟಿ) ಇಳಿದಿದೆ.