ರೋಲ್ಸ್ ರಾಯ್ಸ್ ಕಾರಿಗಿಂತ ದುಬಾರಿ ಈ ಚಾಕು! ಅಂಥದ್ದೇನಪ್ಪಾ ಇದೆ ಇದ್ರಲ್ಲಿ?
ನಾವು ನಿತ್ಯ ಬಳಸುವ ಚಾಕುವಿಗೆ ನೂರು ರೂಪಾಯಿ ಕೊಡಲು ಬೇಸರವಾಗುತ್ತೆ. ಇನ್ನು ಬಳಕೆ ಮಾಡದೆ ಶೋಕೇಸ್ ನಲ್ಲಿಡುವ ಚಾಕುವಿಗೆ ಕೋಟಿ ಕೋಟಿ ಹಣ ನೀಡಲು ಯಾರು ಮನಸ್ಸು ಮಾಡ್ತಾರೆ? ನೀವು ಅದನ್ನು ಖರೀದಿ ಮಾಡ್ಬೇಕಾಗಿಲ್ಲ, ಬೆಲೆ ಎಷ್ಟು ಅನ್ನೋದಾದ್ರೂ ತಿಳಿದ್ಕೊಳ್ಳಿ.
ಪ್ರತಿಯೊಬ್ಬರ ಮನೆಯಲ್ಲೂ ಚಾಕು ಇರುತ್ತದೆ. ಅನಾದಿಕಾಲದಿಂದಲೂ ಚಾಕುವಿನ ಬಳಕೆ ಇದೆ. ಹಿಂದೆ ಒಬ್ಬೊಬ್ಬರ ಕೈನಲ್ಲಿ ಒಂದೊಂದು ಚಾಕು ಇರ್ತಾಯಿತ್ತು. ಈಗ ಅದ್ರ ಅನಿವಾರ್ಯತೆ ಅಷ್ಟಿಲ್ಲ. ತರಕಾರಿ, ಹಣ್ಣುಗಳನ್ನು ಕತ್ತರಿಸಲು ಜನರು ಚಾಕು ಬಳಕೆ ಮಾಡುವುದರಿಂದ ಇದನ್ನು ನೀವು ಅಡುಗೆ ಮನೆ ಡ್ರಾನಲ್ಲಿ ಅಥವಾ ಡೈನಿಂಗ್ ಟೇಬಲ್ ಮೇಲೆ ನೋಡ್ಬಹುದು.
ಚಾಕು (Knife) ನಿಮಗೆ ನೂರು ರೂಪಾಯಿ ಒಳಗೆ ಸಿಗುತ್ತದೆ. ನೂರು, ಇನ್ನೂರು ಹೆಚ್ಚು ಅಂದ್ರೆ ಐದು ನೂರು ರೂಪಾಯಿ ನೀಡಿ ಚಾಕು ಖರೀದಿ ಮಾಡುವವರಿದ್ದಾರೆ. ಶ್ರೀಮಂತಿಕೆ, ಐಷಾರಾಮಿ (luxury) ಜೀವನಕ್ಕೆ ತಕ್ಕಂತೆ ಚಾಕು ಬೆಲೆ ಹಾಗೂ ಚಾಕು ವಿನ್ಯಾಸ ಬದಲಾಗುತ್ತದೆ. ಜನರು ತಮ್ಮ ಐಷಾರಾಮಿ ಜೀವನವನ್ನು ತೋರ್ಪಡಿಸಲು ಮನೆಯಲ್ಲು ದುಬಾರಿ ಚಾಕುಗಳನ್ನು ಇಡ್ತಾರೆ. ಬೆಳ್ಳಿ, ಬಂಗಾರ ಅಥವಾ ವಜ್ರದಿಂದ ಮಾಡಿದ ಚಾಕುಗಳನ್ನು ಹಿಂದೆ ರಾಜರುಗಳು ಹೊಂದಿರುತ್ತಿದ್ದರು. ಅದನ್ನು ಬಳಸುವ ಬದಲು ತೋರ್ಪಡಿಕೆಗೆ ಇಡಲಾಗ್ತಿತ್ತು. ನಾನಾ ವಿನ್ಯಾಸಗಳಲ್ಲಿ ದುಬಾರಿ ಬೆಲೆಯ ಚಾಕುಗಳನ್ನು ನೀವಿಗೆ ವಸ್ತುಸಂಗ್ರಹಾಲಯದಲ್ಲಿ ನೋಡ್ಬಹುದು. ಆದ್ರೆ ವಿಶ್ವದಲ್ಲಿ ಅತ್ಯಂತ ದುಬಾರಿ ಚಾಕು ಯಾವುದು ಅಂತಾ ನೀವು ಆಲೋಚನೆ ಮಾಡಿದ್ದೀರಾ? ಇಲ್ಲ ಅಂದ್ರೆ ಅದಕ್ಕೆ ಉತ್ತರ ಇಲ್ಲಿದೆ.
ಹೇಳಿ ಕೇಳಿ ಮುಕೇಶ್ ಅಂಬಾನಿ ಮನೆಯಲ್ಲಿ ಅಡುಗೆ ಕೆಲಸ, ಸಂಬಳ ಎಷ್ಟಿರಬಹುದು ಗೆಸ್ ಮಾಡಿ!
ಈಗ ನಾವು ಹೇಳ್ತಿರೋ ಚಾಕು ಯಾವ ರಾಜ (King) – ಮಹಾರಾಜನದ್ದಲ್ಲ. ಯಾವುದೇ ಆಂಟಿಕ್ ಪೀಸ್ ಕೂಡ ಅಲ್ಲ. ಆದ್ರೂ ಚಾಕು ಬೆಲೆ ಬಹಳ ದುಬಾರಿ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಕೂಡ ಇದನ್ನು ಖರೀದಿ ಮಾಡಲು ಹಿಂದೇಟು ಹಾಕ್ತಾರೆ. ಅಷ್ಟು ದುಬಾರಿ ಈ ಚಾಕುವಿನ ಹೆಸರು ಜೆಮ್ ಆಫ್ ಒರಿಯಂಟ್ (Gem of Orient). ಈ ಜೆಮ್ ಆಫ್ ಒರಿಯಂಟ್ ಚಾಕುವಿನ ಬೆಲೆ 21 ಲಕ್ಷ ಡಾಲರ್. ಭಾರತೀಯ ರೂಪಾಯಿಯಲ್ಲಿ ಇದರ ಬೆಲೆ 17.48 ಕೋಟಿ ರೂಪಾಯಿ ಆಗುತ್ತದೆ. ವಿಶ್ವದ ಅತ್ಯಂತ ದುಬಾರಿ ಕಾರಾದ ರೋಲ್ಸ್ ರಾಯ್ಸ್ ಕಾರಿನ ಬೆಲೆಗಿಂತ ಜೆಮ್ ಆಫ್ ಒರಿಯಂಟ್ ಚಾಕುವಿನ ಬೆಲೆ ಹೆಚ್ಚಿದೆ. ನೀವು ಈ ಬೆಲೆಯಲ್ಲಿ ಮೂರ್ನಾಲ್ಕು ದುಬಾರಿ ಬೆಲೆಯ ಮನೆ ಖರೀದಿ ಮಾಡಬಹುದು.
ಲಕ್ಷ ಲಕ್ಷ ವೇತನ ಬರ್ತಿದ್ದ ವಕೀಲಿಕೆ ಬಿಟ್ಟು, ಪ್ರಾಣಿ ಜೊತೆ ಮಾತನಾಡಿ ಕೋಟಿ ಗಳಿಸ್ತಿದ್ದಾರೆ ಈ ಮಹಿಳೆ!
ಇದನ್ನು ಬಸ್ಟರ್ ವಾರೆನ್ಸ್ಕಿ ಹೆಸರಿನ ವ್ಯಕ್ತಿ ನಿರ್ಮಿಸಿದ್ದಾರೆ. ಅವರು ಅಮೆರಿಕಾದ ಚಾಕು ತಯಾರಕನಾಗಿದ್ದಾರೆ. ಇದೊಂದು ಕಲಾಕೃತಿಯಂತೆ ರಚನೆಯಾಗಿದೆ. ನೀವಿದನ್ನು ಶೋಕೇಸ್ ನಲ್ಲಿ ಇಡಬಹುದು. ಈ ಚಾಕುವನ್ನು ಬಸ್ಟರ್ ವಾರೆನ್ಸ್ಕಿ, ರತ್ನಗಳಿಂದ ನಿರ್ಮಿಸಿದ್ದಾರೆ. 153 ಪಚ್ಚೆಗಳನ್ನು ಹೊಂದಿರುವ ಈ ಚಾಕು 10 ಕ್ಯಾರೆಟ್ ತೂಕ ಹೊಂದಿದೆ. ಇದ್ರಲ್ಲಿರುವ ಒಂಭತ್ತು ವಜ್ರಗಳೇ ಐದು ಕ್ಯಾರೆಟ್ ತೂಕ ಹೊಂದಿವೆ. ಬಸ್ಟರ್ ವಾರೆನ್ಸ್ಕಿ ಇದನ್ನು ತಯಾರಿಸಲು ಹತ್ತು ವರ್ಷಗಳನ್ನು ತೆಗೆದುಕೊಂಡಿದ್ದರು. ಹಾಗಾಗಿಯೇ ಈ ಚಾಕು 17.48 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಬಸ್ಟರ್ ವಾರೆನ್ಸ್ಕಿ 2005 ರಲ್ಲಿ ನಿಧನರಾಗಿದ್ದಾರೆ.
ವಿಶ್ವದ ದುಬಾರಿ ಚಾಕುಗಳು : ಜೆಮ್ ಆಫ್ ಒರಿಯಂಟ್ ಹೊರತುಪಡಿಸಿ ವಿಶ್ವದಲ್ಲಿ ಇನ್ನೂ ಅನೇಕ ದುಬಾರಿ ಚಾಕುಗಳಿವೆ. ಅದರಲ್ಲಿ ನೆಸ್ಮುಕ್ ಜಹರ್ಹಂಡರ್ಟ್ ಮೆಸ್ಸರ್ ಸೇರಿದೆ. ಅದ್ರ ಬೆಲೆ 70,41,577.98 ರೂಪಾಯಿ. ಇದು 5000 ವರ್ಷ ಹಳೆಯ ಬಾಗ್ ಓಕ್ ಮರದಿಂದ ಮಾಡಲಾಗಿದೆ. ಫ್ಲಾಟಿನಂ ಕಾರ್ನರ್ ಹೊಂದಿದ್ದು 25 ಕಟ್ ವಜ್ರಗಳಿಂದ ಇದನ್ನು ತಯಾರಿಸಲಾಗಿದೆ.
ಇನ್ನೊಂದು ನೆಸ್ಮುಕ್ ಡೈಮಂಡ್ ಸ್ಟಡೆಡ್ ನೈಫ್. ಇದ್ರ ಬೆಲೆ 28,19,856.60 ರೂಪಾಯಿ. ಈ ಚಾಕುವಿನ ಬ್ಲೇಡ್ ಇಂಗಾಲದ ಉಕ್ಕಿನಿಂದ ಮಾಡಲ್ಪಟ್ಟಿದೆ. ಹ್ಯಾಂಡಲ್ ಅನ್ನು ಎಂಟು ವಜ್ರಗಳಿಂದ ತುಂಬಿದ ಸ್ಟರ್ಲಿಂಗ್ ಸಿಲ್ವರ್‌ನಿಂದ ಮಾಡಲಾಗಿದೆ.