ನವದೆಹಲಿ[ಮಾ.17]: ಕೊರೋನಾದ ಭೀಕರ ಹೊಡೆತಕ್ಕೆ ತತ್ತರಿಸಿರುವ ವಿಮಾನಯಾನ ಸಂಸ್ಥೆಗಳ ಪರಿಸ್ಥಿತಿ ಹೀಗೆ ಮುಂದುವರಿದರೆ ಮೇ ಅಂತ್ಯದೊಳಗೆ ಅವೆಲ್ಲಾ ದಿವಾಳಿಯಾಗಲಿದೆ ಎಂದು ಜಾಗತಿಕ ವಿಮಾನಯಾನ ಸಲಹಾ ಸಂಸ್ಥೆ ಸಿಎಪಿಎ ಎಚ್ಚರಿಸಿದೆ.

ವ್ಯಾಧಿ ಮತ್ತಷ್ಟುಹೆಚ್ಚಾಗುವ ಆತಂಕದಿಂದ ಹಲವು ರಾಷ್ಟ್ರಗಳು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿವೆ. ಹೀಗಾಗಿ ಕಂಪನಿಗಳು ಅನಿವಾರ್ಯವಾಗಿ ವಿಮಾನ ಹಾರಾಟವನ್ನು ನಿಲ್ಲಿಸಿದೆ. ಇದರಿಂದ ಶೇ.40ರಷ್ಟುವಿಮಾನಗಳು ರದ್ದಾಗಿದೆ.

ಕಾರ್ಯಾಚರಣೆ ನಡೆಸುತ್ತಿರುವ ವಿಮಾನಗಳಲ್ಲಿ ಪ್ರಯಾಣಿಕರ ಕೊರತೆ ಇದೆ. ಇದರಿಂದ ವಿಮಾನ ಕಂಪನಿಗಳಿಗೆ ಹೊಡೆತ ಬಿದ್ದಿದ್ದು, ಈಗಾಗಲೇ ತಾಂತ್ರಿಕವಾಗಿ ದಿವಾಳಿಯಾಗಿದೆ. ಇದು ಮುಂದುವರಿದರೆ ಮೇ ಅಂತ್ಯದ ವೇಳೆಗೆ ವಿಮಾನ ಕಂಪನಿಗಳು ದಿವಾಳಿಯಾಗಲಿದೆ. ಹಾಗಾಗಿ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಅದು ಕೋರಿದೆ.