ಗಳಿಸಿದ ಅರ್ಧ ಸಂಬಳದಷ್ಟು ತೆರಿಗೆ ಕಟ್ ಆದ್ರೂ ಚಿಂತಿಸುವುದಿಲ್ಲ ಈ ದೇಶವಾಸಿಗಳು!
ಒಂದು ದೇಶದಲ್ಲಿ ವಾಸ ಆದ್ಮೇಲೆ ಅಲ್ಲಿನ ನಿಯಮಗಳನ್ನು ಪಾಲಿಸಬೇಕು. ಸರ್ಕಾರ ವಿಧಿಸುವ ತೆರಿಗೆಯನ್ನೂ ಪಾವತಿಸಬೇಕು. ಒಂದೊಂದು ದೇಶದಲ್ಲಿ ಒಂದೊಂದು ತೆರಿಗೆ ಪಟ್ಟಿ ಇದೆ. ಕೆಲ ದೇಶದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಿ ಮಾಡಲಾಗುತ್ತೆ. ಅದರ ವಿವರ ಇಲ್ಲಿದೆ.
ಪ್ರತಿಯೊಂದು ಸರ್ಕಾರ ತನ್ನ ನಾಗರಿಕರಿಂದ ತೆರಿಗೆ ವಸೂಲಿ ಮಾಡುತ್ತದೆ. ಈ ತೆರಿಗೆಯನ್ನು ಅದು ತನ್ನ ನಾಗರಿಕರಿಗಾಗಿಯೇ ಖರ್ಚು ಮಾಡುತ್ತದೆ. ಅವರಿಗೆ ಸೌಲಭ್ಯ, ಭದ್ರತೆ ಸೇರಿದಂತೆ ಸುರಕ್ಷಿತ ಜೀವನಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಜನರು ತಾವು ಗಳಿಸಿದ ಆದಾಯದಲ್ಲಿ ಕಾಲು ಭಾಗವನ್ನಾದ್ರೂ ತೆರಿಗೆ ರೂಪದಲ್ಲಿ ನೀಡ್ತಾರೆ. ಆದಾಯಕ್ಕೆ, ಆಸ್ತಿಗೆ ತಕ್ಕಂತೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಸರ್ಕಾರಕ್ಕೆ ನೀಡುವ ತೆರಿಗೆಯನ್ನು ಉಳಿಸಲು ಕೆಲವರು ಸುಳ್ಳು ಲೆಕ್ಕವನ್ನು ಸರ್ಕಾರಕ್ಕೆ ನೀಡಿದ್ರೆ ಮತ್ತೆ ಕೆಲವರು ಬೇರೆ ಕಡೆ ಹಣವನ್ನು ಹೂಡಿಕೆ ಮಾಡಿ ತೆರಿಗೆ ಉಳಿಸುತ್ತಾರೆ. ನಮ್ಮ ದೇಶದಲ್ಲೂ ಜನರು ತೆರಿಗೆ ಪಾವತಿ ಮಾಡ್ತಾರೆ. ಅದೇ ರೀತಿ ವಿಶ್ವದ ಅನೇಕ ದೇಶಗಳು ತೆರಿಗೆ ವಸೂಲಿ ಮಾಡುತ್ತವೆ. ವಿಶ್ವದ ಕೆಲ ದೇಶದಲ್ಲಿ ಜನರು ತಾವು ಸಂಪಾದನೆ ಮಾಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ನೀಡ್ತಾರೆ. ಸರ್ಕಾರಕ್ಕೆ ಟ್ಯಾಕ್ಸ್ ನೀಡ್ತಿದ್ದೇವೆ, ಅದ್ರಿಂದ ನಮ್ಮ ಕೈನಲ್ಲಿ ಹಣ ನಿಲ್ತಿಲ್ಲ ಎನ್ನುವ ನೋವು ಅವರಿಗಿಲ್ಲ. ಸರ್ಕಾರಕ್ಕೆ ಹೆಚ್ಚು ಟ್ಯಾಕ್ಸ್ ನೀಡಿದ್ರೂ ಅವರು ತುಂಬಾ ಖುಷಿಯಾಗಿದ್ದಾರೆ. ನಾವಿಂದು ಹೆಚ್ಚು ಟ್ಯಾಕ್ಸ್ ವಸೂಲಿ ಮಾಡುವ ದೇಶಗಳು ಯಾವುವು ಎಂಬುದನ್ನು ಹೇಳ್ತೇವೆ.
ಅತಿ ಹೆಚ್ಚು ತೆರಿಗೆ (Income Tax) ವಸೂಲಿ ಮಾಡುವ ದೇಶಗಳು : ವಿಶ್ವದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಿ ಮಾಡುವ ದೇಶಗಳ ಪಟ್ಟಿಯಲ್ಲಿ ಐವರಿ ಕೋಸ್ಟ್ (Ivory Coast) ಮೊದಲ ಸ್ಥಾನದಲ್ಲಿದೆ. ಇಲ್ಲಿ ಶೇಕಡಾ 60ರಷ್ಟು ತೆರಿಗೆಯನ್ನು ವಸೂಲಿ ಮಾಡಲಾಗುತ್ತದೆ. ಎರಡನೇ ಸ್ಥಾನದಲ್ಲಿ ಫಿನ್ಲ್ಯಾಂಡ್ ಇದೆ. ಇಲ್ಲಿ ಶೇಕಡಾ 56.95ರಷ್ಟು ತೆರಿಗೆ ವಸೂಲಿ ಮಾಡಲಾಗುತ್ತಿದೆ. ಜಪಾನ್ ಮೂರನೇ ಸ್ಥಾನದಲ್ಲಿದೆ. ಜಪಾನ್ ಶೇಕಡಾ 55.97 ತೆರಿಗೆ ವಿಧಿಸುತ್ತದೆ. ಫಿನ್‌ಲ್ಯಾಂಡ್ ನಂತ್ರದ ಸ್ಥಾನದಲ್ಲಿದೆ. ಅಲ್ಲಿನ ಸರ್ಕಾರ, ಶೇಕಡಾ 56.95ರಷ್ಟು ತೆರಿಗೆ ವಿಧಿಸುತ್ತದೆ. ಡೆನ್ಮಾರ್ಕ್‌ನಲ್ಲಿ ಶೇಕಡಾ 55.90 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇನ್ನು ಆಸ್ಟ್ರಿಯಾದಲ್ಲಿ ಶೇಕಡಾ 55 ಮತ್ತು ಸ್ವೀಡನ್‌ನಲ್ಲಿ ಶೇಕಡಾ 52.90ರಷ್ಟು ಟ್ಯಾಕ್ಸ್ ವಸೂಲಿ ಮಾಡಲಾಗುತ್ತದೆ. ಇನ್ನು ಬೆಲ್ಜಿಯಂನಲ್ಲಿ ಶೇಕಡಾ 50ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತದೆ. ಇಸ್ರೇಲ್ ಮತ್ತು ಸ್ಲೊವೇನಿಯಾದಲ್ಲಿ ಕೂಡ ಶೇಕಡಾ 50ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಅಬ್ಬಬ್ಬಾ..ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾಗಿಂತಲೂ ದುಬಾರಿ ಮುಕೇಶ್ ಅಂಬಾನಿಯ ಆಂಟಿಲಿಯಾ!
ಇಷ್ಟು ತೆರಿಗೆ ವಿಧಿಸುವ ಸರ್ಕಾರಗಳು ತಮ್ಮ ನಾಗರಿಕರಿಗೆ ಸೀಮಿತ ಸೌಲಭ್ಯವನ್ನು ನೀಡುತ್ವೆ. ಫಿನ್ ಲ್ಯಾಂಡ್ ರಾಷ್ಟ್ರೀಯ ಪಿಂಚಣಿಯನ್ನು ಸಾಮಾಜಿಕ ಭದ್ರತೆಯ ಅಡಿಯಲ್ಲಿ ನೀಡುತ್ತದೆ. 16 ವರ್ಷ ಮೇಲ್ಪಟ್ಟ ಎಲ್ಲರಿಗೂ ಇದು ಪಿಂಚಣಿ ನೀಡುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಪಿಂಚಣಿ ಯೋಜನೆಯಲ್ಲಿ ಹಣವನ್ನು ನೀಡುತ್ತದೆ. ಆರೋಗ್ಯ ವಿಮೆ ಕೂಡ ಹೊಂದಿದ್ದು, ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತದೆ. ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದ ಪಾಲಕರ ಜವಾಬ್ದಾರಿಯನ್ನು ಸರ್ಕಾರ ಹೊತ್ತುಕೊಳ್ಳುತ್ತದೆ. ಮಕ್ಕಳನ್ನು ಬೆಳೆಸುವ ಹೊಣೆಯನ್ನು ಸರ್ಕಾರ ಹೊರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು ಸರ್ಕಾರ ನೀಡುತ್ತದೆ. ಅಂಗವಿಕಲರಿಗೂ ಸರ್ಕಾರದಿಂದ ನೆರವು ಸಿಗುತ್ತಿದೆ. ಸರ್ಕಾರ ವಿಕಲಾಂಗರ ವಸತಿ, ಚಿಕಿತ್ಸೆ, ಆಹಾರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸುವ ಹೊಣೆಯನ್ನು ಸರ್ಕಾರ ಹೊರುತ್ತದೆ. ಸರ್ಕಾರ, ಜನಸಾಮಾನ್ಯರಿಗೆ ಉತ್ತಮ ಜೀವನ ಒದಗಿಸಲು ಎಲ್ಲ ವ್ಯವಸ್ಥೆ ಮಾಡುವ ಕಾರಣ ಜನರು ಹೆಚ್ಚಿನ ತೆರಿಗೆ ನೀಡಿದ್ರೂ ಟೆನ್ಷನ್ ಇಲ್ಲದೆ ಜೀವನ ನಡೆಸುತ್ತಾರೆ.
ನಿಮ್ಮಇಪಿಎಫ್ ಖಾತೆಗೆ 2023-24ನೇ ಸಾಲಿನ ಬಡ್ಡಿ ಯಾವಾಗ ಕ್ರೆಡಿಟ್ ಆಗುತ್ತೆ? ಬ್ಯಾಲೆನ್ಸ್ ಚೆಕ್ ಹೇಗೆ?
ಭಾರತದಲ್ಲಿ ಅತಿ ಹೆಚ್ಚು ಟ್ಯಾಕ್ಸ್ ವಸೂಲಿ ಮಾಡುವ ರಾಜ್ಯ : ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. 2019-20 ರ ಹಣಕಾಸು ವರ್ಷದಿಂದ, ಭಾರತದ ಆದಾಯ ತೆರಿಗೆ ಇಲಾಖೆಯು ಮಹಾರಾಷ್ಟ್ರದಿಂದ ಅತಿ ಹೆಚ್ಚು ತೆರಿಗೆಯನ್ನು ಸಂಗ್ರಹಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಮಹಾರಾಷ್ಟ್ರದಿಂದ ಸರ್ಕಾರ 5,24,498 ಕೋಟಿ ರೂಪಾಯಿ ನೇರ ತೆರಿಗೆ ಸಂಗ್ರಹಿಸಿತ್ತು.