More Profitable Business Idea: ದಿನಕ್ಕೆ 5-6 ಗಂಟೆ ಕೆಲಸ ಮಾಡಿ, ಈ ಬ್ಯುಸಿನೆಸ್ ಮೂಲಕ ಮೂರೇ ವರ್ಷದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳಿ. ಕಡಿಮೆ ಬಂಡವಾಳ, ಹೆಚ್ಚು ಲಾಭ ಗಳಿಸುವ ಈ ಬ್ಯುಸಿನೆಸ್ ಬಗ್ಗೆ ತಿಳಿಯಿರಿ.
Business Idea: ಪ್ರತಿದಿನ 9 ಗಂಟೆ ದುಡಿಯುವ ಉದ್ಯೋಗಿಗಳ ಆದಾಯದ ಮೂಲ ಒಂದೇ ಆಗಿರುತ್ತದೆ. ಬೆಳಗ್ಗೆ 9 ಗಂಟೆಗೆ ಹೊರಟರೆ ಮನೆ ತಲಪೋದು ಸಂಜೆ 6 ಗಂಟೆಯಾಗುತ್ತದೆ. ಇಡೀ ದಿನ ದುಡಿದ ದೇಹ ವಿಶ್ರಾಂತಿ ಕೇಳಲು ಆರಂಭಿಸುತ್ತದೆ. ಹಾಗಾಗಿ ಮತ್ಯಾವ ಕೆಲಸ ಮಾಡಲು ಸಹ ಆಗಲ್ಲ. ತಿಂಗಳ ಸಂಬಳವೊಂದೇ ಆದಾಯ ಮೂಲವಾದ್ರೆ, ಹಣ ಖರ್ಚು ಆಗಲು ನೂರಾರು ಕಾರಣಗಳಿರುತ್ತದೆ. ಖಾಸಗಿ ಕಂಪನಿ ಕೆಲ ಉದ್ಯೋಗಿಗಳು ದಿನಕ್ಕೆ 9 ರಿಂದ 10 ಗಂಟೆ ಕೆಲಸ ಮಾಡೋರು ಇದ್ದಾರೆ. ಆದರೂ ತಿಂಗಳಾಂತ್ಯಕ್ಕೆ ಪರ್ಸ್ ಖಾಲಿಯಾಗುತ್ತದೆ. ಆದರೆ ಇಂದು ನಾವು ಹೇಳುವ ಬ್ಯುಸಿನೆಸ್ ಮಾಡಿದರೆ ಮೂರರಿಂದ ನಾಲ್ಕು ವರ್ಷದಲ್ಲಿ ಸುಂದರ ಮನೆಯನ್ನು ಕಟ್ಟಿಸಿಕೊಳ್ಳುವಷ್ಟು ಆರ್ಥಿಕವಾಗಿ ಸಬಲರಾಗುತ್ತೀರಿ. ಇಂದು ಈ ಬ್ಯುಸಿನೆಸ್ ಮೂಲಕ ಹಲವರು ಬದುಕು ಕಟ್ಟಿಕೊಂಡಿದ್ದಾರೆ.
ಈ ಬ್ಯುಸಿನೆಸ್‌ನಲ್ಲಿ ನೀವು ದಿನಕ್ಕೆ 5 ರಿಂದ 6 ಗಂಟೆ ಮಾತ್ರ ಕೆಲಸ ಮಾಡಬಹುದು. ಈ ಬ್ಯುಸಿನೆಸ್ ಸಣ್ಣ ಪ್ರಮಾಣದಲ್ಲಿಯೂ ಆರಂಭಿಸಬಹುದು. ಆದ್ರೆ ಲಾಭದ ಪ್ರಮಾಣ ಸಹ ಚಿಕ್ಕದಾಗಿರುತ್ತದೆ. ಹೆಚ್ಚು ಲಾಭಕ್ಕಾಗಿ ದೊಡ್ಡ ಪ್ರಮಾಣದಲ್ಲಿಯೇ ಈ ಬ್ಯುಸಿನೆಸ್ ಆರಂಭಿಸಬೇಕಾಗುತ್ತದೆ. ಹಾಗಾದ್ರೆ ಮಾತ್ರ ಬ್ಯುಸಿನೆಸ್ ಆರಂಭಿಸಿದ ಮೂರರಿಂದ ನಾಲ್ಕು ವರ್ಷದೊಳಗೆ ನಿಮ್ಮದೇ ಆದ ಸುಂದರ ಸೂರು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಯಾವುದು ಈ ಬ್ಯುಸಿನೆಸ್?
ಈ ಬ್ಯುಸಿನೆಸ್ ಜನಸಂದಣಿ ಅಧಿಕವಾಗಿರುವ ಪ್ರದೇಶದಲ್ಲಿಯೇ ಆರಂಭಿಸಬೇಕಾಗುತ್ತದೆ. ಉದಾಹರಣೆಗೆ ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಕಾಲೇಜು ಕ್ಯಾಂಪಸ್ ಸುತ್ತಮುತ್ತ ಈ ವ್ಯಾಪಾರ ಆರಂಭಿಸಬಹುದು. ಎಗ್ ರೈಸ್ ಆಂಡ್ ಚಿಕನ್ ಕಬಾಬ್ ಅಂಗಡಿ ಇಂದು ಹಲವು ನಿರುದ್ಯೋಗಿಗಳ ಬದುಕಿಗೆ ಆಸರೆಯಾಗಿದೆ. ಈ ವ್ಯಾಪಾರ ಆರಂಭಿಸಲು ಹೆಚ್ಚಿನ ವಿದ್ಯಾರ್ಹತೆಯ ಅಗತ್ಯವೂ ಇಲ್ಲ. ಹೋಟೆಲ್‌ಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರೆ ಸುಲಭವಾಗಿ ಈ ವ್ಯವಹಾರವನ್ನು ಆರಂಭಿಸಬಹುದು. ಚಿಕ್ಕ ಪ್ರಮಾಣದಲ್ಲಿ ಆರಂಭಿಸಿ, ಕಡಿಮೆ ಸಮಯದಲ್ಲಿಯೇ ವ್ಯಾಪಾರದ ವಿಸ್ತರಣೆಯಾಗುತ್ತದೆ.
ಲಾಭದ ಪ್ರಮಾಣ ಹೆಚ್ಚಳ ಮಾಡಿಕೊಳ್ಳೋದು ಹೇಗೆ?
ಇಂದು ಆಹಾರ ಅಂದರೆ ಜನರು ಮೊದಲಿ ಸ್ವಚ್ಛತೆ ಬಗ್ಗೆ ಗಮನ ನೀಡುತ್ತಾರೆ. ಹಾಗಾಗಿ ಆಹಾರ ತಯಾರಿಸುವ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಮೊದಲು ಕುಡಿಯುವ ಶುದ್ಧವಾದ ನೀರಿನ ವ್ಯವಸ್ಥೆ ಮಾಡಬೇಕು. ಒಮ್ಮೆ ನಿಮ್ಮ ಅಂಗಡಿಗೆ ಬಂದವರು ಪದೇ ಪದೇ ಬರುವಂತೆ ರುಚಿಯಾಗಿ ಆಹಾರ ತಯಾರಿಸಬೇಕಾಗುತ್ತದೆ. ಮನೆಯಲ್ಲಿಯೇ ಎಲ್ಲಾ ಮಸಾಲೆಗಳನ್ನು ಸಿದ್ಧಪಡಿಸಿಕೊಂಡರೆ ಲಾಭದ ಪ್ರಮಾಣ ಏರಿಕೆಯಾಗುತ್ತದೆ. ಹಾಗೆ ಬೇಕಾಗುವ ಆಹಾರ ಸಾಮಾಗ್ರಿಗಳನ್ನು ಹೋಲ್‌ಸೇಲ್ ದರದಲ್ಲಿ ಖರೀದಿಸಿದರೆ ಕಡಿಮೆ ದರದಲ್ಲಿ ಸಿಗುತ್ತವೆ. ಹಾಗೆ ನಿಮ್ಮ ಅಂಗಡಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಮಾಡಲು ಹೆಚ್ಚು ವಿದ್ಯುತ್ ದೀಪಗಳಿಂದ ಅಲಂಕರಿಸಬಹುದು.
ಸಂಜೆಯಾದ್ಮೇಲೆ ರಸ್ತೆಬದಿಯ ತಿಂಡಿಗಳನ್ನು ತಿನ್ನಲು ಜನರು ದಾಂಗುಡಿ ಇಡುತ್ತಾರೆ. ಹಾಗಾಗಿ ಈ ವ್ಯಾಪಾರವನ್ನು ಜನಸಂದಣಿ ಇರೋ ರಸ್ತೆಬದಿಯಲ್ಲಿಯೇ ಆರಂಭಿಸೋದು ಉತ್ತಮ ಆಯ್ಕೆಯಾಗುತ್ತದೆ. ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಈ ಆಹಾರ ಸಿಕ್ಕರೂ ಇಷ್ಟೊಂದು ಡಿಮ್ಯಾಂಡ್ ಸಿಗಲ್ಲ. ಜನರ ಬಳಿ ಹಣವಿದ್ರೂ ರಸ್ತೆಬದಿಯಲ್ಲಿ ಸಿಗುವ ಆಹಾರವನ್ನು ಇಷ್ಟಪಡುತ್ತಾರೆ. ಒಮ್ಮೆ ನಿಮ್ಮಲ್ಲಿ ಮಾರಾಟ ಮಾಡುವ ಆಹಾರದ ರುಚಿಗೆ ಜನರು ಫಿದಾ ಆದ್ರೆ ಜನರಿಂದಲೇ ನಿಮಗೆ ಉಚಿತವಾಗಿ ಪ್ರಚಾರ ಸಿಗುತ್ತದೆ. ವಿಶೇಷ ದಿನಗಳಲ್ಲಿ ರಿಯಾಯ್ತಿ ನೀಡುವ ಮೂಲಕವೂ ಗ್ರಾಹಕರನ್ನು ಸೆಳೆಯಬಹುದು. ಕೇವಲ ಎಗ್ ರೈಸ್ ಮತ್ತು ಕಬಾಬ್ ಮಾತ್ರವಲ್ಲದೇ ಇನ್ನಿತರ ಫುಡ್ ಐಟಂಗಳ ಮೂಲಕ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವ ಆಯ್ಕೆಗಳು ಇದರಲ್ಲಿವೆ. ಹಾಗೆ ಮಾರಾಟ ಹೆಚ್ಚಾದಂತೆ ಲಾಭದ ಪ್ರಮಾಣ ಏರಿಕೆಯಾಗುತ್ತದೆ.
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
