BUSINESS
ಗೌತಮ್ ಅದಾನಿ ಮತ್ತು ಇತರ ಏಳು ಹಿರಿಯ ವ್ಯಾಪಾರ ಕಾರ್ಯನಿರ್ವಾಹಕರು ಸೌರಶಕ್ತಿ ಒಪ್ಪಂದಕ್ಕಾಗಿ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು $265 ಮಿಲಿಯನ್ ಲಂಚವನ್ನು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ
ಗೌತಮ್ ಅದಾನಿ ಮೇಲೆ ಮತ್ತೊಮ್ಮೆ ಗಂಭೀರ ಆರೋಪಗಳು ಕೇಳಿಬಂದಿವೆ. ಅವರಲ್ಲದೆ ಇತರೆ 7 ಜನರ ಮೇಲೆ ನ್ಯೂಯಾರ್ಕ್‌ನ ಫೆಡರಲ್ ನ್ಯಾಯಾಲಯದಲ್ಲಿ ವಂಚನೆ ಮತ್ತು ಲಂಚದ ಆರೋಪಗಳಿವೆ.
ಗೌತಮ ಅದಾನಿ ಮೇಲಿನ ಆರೋಪಗಳು ಎಷ್ಟು ನಿಜ? ಅಮೆರಿಕ ಆರೋಪಕ್ಕೆ ಅದಾನಿ ಹೇಳೋದೇನು? ಅದಾನಿ ಕುಟುಂಬದ ವಿರುದ್ಧವೂ ಆರೋಪ ಕೇಳಿಬಂದೆ.
ಗೌತಮ್ ಅದಾನಿ ಜೊತೆಗೆ ಅವರ ಸೋದರಳಿಯ ಸಾಗರ್ ಅದಾನಿ, ವಿನೀತ್ ಎಸ್ ಜೈನ್, ಸೌರಭ್ ಅಗರ್‌ವಾಲ್, ದೀಪಕ್ ಮಲ್ಹೋತ್ರಾ, ರಂಜಿತ್ ಗುಪ್ತಾ, ಸೈರಿಲ್ ಕ್ಯಾಬೆನಿಸ್ ಮತ್ತು ರೂಪೇಶ್ ಅಗರ್‌ವಾಲ್ ಮೇಲೂ ಆರೋಪಗಳಿವೆ.
ಲಂಚದ ಹಣವನ್ನು ಸಂಗ್ರಹಿಸಲು ಅಮೇರಿಕನ್, ವಿದೇಶಿ ಹೂಡಿಕೆದಾರರು ಮತ್ತು ಬ್ಯಾಂಕ್‌ಗಳಿಗೆ ಸುಳ್ಳು ಹೇಳಿದ್ದಾರೆ ಎಂಬ ಆರೋಪ ಅದಾನಿ ಮೇಲಿದೆ. ಸಾಗರ್, ವಿನೀತ್ ಅದಾನಿ ಗ್ರೀನ್ ಎನರ್ಜಿ ಅಧಿಕಾರಿಗಳು.
ರಾಯಿಟರ್ಸ್ ವರದಿಯ ಪ್ರಕಾರ, ಗೌತಮ್ ಅದಾನಿ ಮತ್ತು ಸಾಗರ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ. ಅಮೆರಿಕದ ಹೂಡಿಕೆದಾರರ ಹಣವನ್ನು ಲಂಚ ನೀಡುವುದು ಅಲ್ಲಿನ ಕಾನೂನಿನ ಪ್ರಕಾರ ಅಪರಾಧ.
2020-2024ರ ಅವಧಿಯಲ್ಲಿ ಸೌರಶಕ್ತಿ ಒಪ್ಪಂದ ಪಡೆಯಲು ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್ ಲಂಚ ನೀಡುವುದಾಗಿ ಅದಾನಿ ಭರವಸೆ ನೀಡಿದ್ದರು ಎಂಬ ಆರೋಪವಿದೆ.
ಈ ಯೋಜನೆಯಿಂದ 20 ವರ್ಷಗಳಲ್ಲಿ 2 ಶತಕೋಟಿ ಡಾಲರ್‌ಗೂ ಹೆಚ್ಚು ಲಾಭ ಗಳಿಸಬಹುದಿತ್ತು. ಒಪ್ಪಂದ ಮುಂದುವರೆಸಲು ಭಾರತದ ಅಧಿಕಾರಿಯೊಬ್ಬರನ್ನು ಭೇಟಿಯಾದರು. ಸಾಗರ್-ವಿನೀತ್ ಹಲವು ಸಭೆಗಳನ್ನು ನಡೆಸಿದರು.
ಸೈರಿಲ್, ಸೌರಭ್, ದೀಪಕ್, ರೂಪೇಶ್, ಲಂಚ ಪ್ರಕರಣದಲ್ಲಿ ಗ್ರ್ಯಾಂಡ್ ಜ್ಯೂರಿ, ಎಫ್‌ಬಿಐ ಮತ್ತು ಎಸ್‌ಇಸಿ ತನಿಖೆಯನ್ನು ತಡೆಯಲು ಇಮೇಲ್‌ಗಳು, ಸಂದೇಶಗಳು ಮತ್ತು ವಿಶ್ಲೇಷಣೆಗಳನ್ನು ಅಳಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಒಪ್ಪಂದದ ಪ್ರಕಾರ ಹಣ ಒದಗಿಸಲು ಅದಾನಿ ಗ್ರೀನ್ ಎನರ್ಜಿ ಅಮೇರಿಕನ್ ಹೂಡಿಕೆದಾರರು ಮತ್ತು ಜಾಗತಿಕ ಸಾಲದಾತರಿಂದ ಮೂರು ಶತಕೋಟಿ ಡಾಲರ್ ಸಂಗ್ರಹಿಸಿದೆ.