ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಕೇರಳ ಮೂಲದ ಮಣಪ್ಪುರಂ ಫೈನಾನ್ಸ್‌ ಕಂಪನಿಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ (ಇಡಿ) ಒಟ್ಟು 143 ಕೋಟಿ ರು. ಬೆಲೆಯ ಆಸ್ತಿಯನ್ನು ಜಪ್ತಿ ಮಾಡಿದೆ.

ಕೊಚ್ಚಿ: ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಕೇರಳ ಮೂಲದ ಮಣಪ್ಪುರಂ ಫೈನಾನ್ಸ್‌ ಕಂಪನಿಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ (ಇಡಿ) ಒಟ್ಟು 143 ಕೋಟಿ ರು. ಬೆಲೆಯ ಆಸ್ತಿಯನ್ನು ಜಪ್ತಿ ಮಾಡಿದೆ. ಇದರಲ್ಲಿ 8 ಬ್ಯಾಂಕ್‌ ಖಾತೆಯಲ್ಲಿನ ಠೇವಣಿ, ಮಣಪ್ಪುರಂ ಫೈನಾನ್ಸ್‌ ಷೇರುಗಳು ಸೇರಿದಂತೆ ಇತರ ಹೂಡಿಕೆಗಳು ಸೇರಿವೆ. ಅಲ್ಲದೇ ಅಕ್ರಮ ಹಣವನ್ನು ವಿ.ಪಿ ನಂದುಮಾರ್‌ (Nandukumar) , ತಮ್ಮ ಹೆಸರಲ್ಲಿ ಸ್ಥಿರಾಸ್ಥಿ ಹಾಗೂ ಪತ್ನಿ ಮತ್ತು ಮಕ್ಕಳ ಹೆಸರಲ್ಲಿ ಮಣಪ್ಪುರಂ ಫೈನಾನ್ಸ್‌ನ ಷೇರುಗಳಾಗಿ ಬದಲಾಯಿಸಿ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ ಎಂದು ಗುರುವಾರ ಇಡಿ ತಿಳಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಂಪನಿಯು 150 ಕೋಟಿ ರು.ಗೂ ಹೆಚ್ಚು ಸಾರ್ವಜನಿಕ ಠೇವಣಿ ಸಂಗ್ರಹಿಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ (Evidence) ದಾಖಲೆಗಳನ್ನು ಸಂಗ್ರಹಿಸಲು ಕೇರಳದ ತ್ರಿಶೂರ್‌ನಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿ ಸೇರಿದಂತೆ 4 ಸ್ಥಳಗಳಲ್ಲಿ ಬುಧವಾರ ಇಡಿ ದಾಳಿ ನಡೆಸಿತ್ತು.

ಮಣಪ್ಪುರಂ ಆಫೀಸ್ ದರೋಡೆ: 19 ಕೆಜಿ ಚಿನ್ನ, 5 ಲಕ್ಷ ದೋಚಿ ಪರಾರಿ