Asianet Suvarna News Asianet Suvarna News

ಜನಸಾಮಾನ್ಯರಿಗೆ ನಿರಾಸೆ; ಉಳಿತಾಯದ ಮೇಲಿನ ಬಡ್ಡಿ ಕಡಿತಗೊಳಿಸಿದ ಕೇಂದ್ರ!

ಕೇಂದ್ರ ಹಣಕಾಸು ಸಚಿವಾಲಯ ಹೊಸ ಆರ್ಥಿಕ ವರ್ಷದ ಸಣ್ಣ ಉಳಿತಾಯದ ಮೇಲಿನ ಬಡ್ಡಿದರ ಘೋಷಣೆ ಮಾಡಿದೆ. ಆದರೆ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎಲ್ಲಾ ಸುಕನ್ಯ ಸಮೃದ್ಧಿ ಸೇರಿದಂತೆ ಎಲ್ಲಾ ಉಳಿತಾಯದ ಮೇಲಿನ ಬಡ್ಡಿ ದರ ಕಡಿತಗೊಳಿಸಿದೆ. ಹೆಚ್ಚಿನ ವಿವರ ಇಲ್ಲಿದೆ

Ministry of Finance annocues reduction of small savings rate from april 1 ckm
Author
Bengaluru, First Published Mar 31, 2021, 10:13 PM IST

ನವದೆಹಲಿ(ಮಾ.31): ಹೊಸ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಎಪ್ರಿಲ್ 1, 2021ರಿಂದ ಆರಂಭಗೊಳ್ಳುತ್ತಿರುವ ಹೊಸ ಆರ್ಥಿಕ ವರ್ಷದಲ್ಲಿ ಉಳಿತಾಯ, ಸಣ್ಣ ಉಳಿತಾಯದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಆಧಾರ್-ಪಾನ್ ಕಾರ್ಡ್ ಲಿಂಕ್ ಗಡುವು ವಿಸ್ತರಿಸಿದ ಕೇಂದ್ರ!..

2021 ರ ಏಪ್ರಿಲ್ 1 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ1 ವರ್ಷದ ಠೇವಣಿ ಉಳಿತಾಯಕ್ಕೆ ಶೇಕಡಾ 4 ರಷ್ಟಿದ್ದ ಬಡ್ಡಿದರವನ್ನು ಇದೀಗ 3.5ಕ್ಕೆ ಇಳಿಸಲಾಗಿದೆ. 2 ವರ್ಷದ ಅವಧಿಯ ಉಳಿತಾಯದ ಮೇಲಿನ ಬಡ್ಡಿಯನ್ನು ಶೇಕಡಾ 5.5 ರಿಂದ ಶೇಕಾಡ 4.4ಕ್ಕೆ ಇಳಿಸಲಾಗಿದೆ. 

3, 5 ವರ್ಷದ ಉಳಿಯಾ, RD ಸ್ಕೀಮ್, ಹಿರಿಯ ನಾಗರೀಕರ ಉಳಿತಾಯ, ಮಾಸಿಕ ಆದಾಯ ಖಾತೆ, ರಾಷ್ಟ್ರೀಯ ಉಳಿತಾಯ ಪತ್ರ, ಪಬ್ಲಿಕ್ ಪ್ರೊವಿಡೆಂಟ್ ಫಂಡ್(PPF), ಕಿಸಾನ್ ವಿಕಾಸ್ ಪತ್ರ ಹಾಗೂ ಸುಕನ್ಯ ಸಮೃದ್ಧಿ ಯೋಜನೆಯ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿದೆ.

Ministry of Finance annocues reduction of small savings rate from april 1 ckm

Follow Us:
Download App:
  • android
  • ios