15 ನೇ ಹಣಕಾಸು ಆಯೋಗವು 2021-22 ರಿಂದ 2025-26 ರ ಅವಧಿಯಲ್ಲಿ ಕೇಂದ್ರದ ತೆರಿಗೆ ಸಂಗ್ರಹದ 41% ಅನ್ನು ರಾಜ್ಯಗಳಿಗೆ ನೀಡಬೇಕೆಂದು ಶಿಫಾರಸು ಮಾಡಿದೆ.

ನವದೆಹಲಿ (ಜು.25): ಹಾಲಿ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ವರ್ಗಾಯಿಸಲು ಇಟ್ಟಿರುವ 10.21 ಲಕ್ಷ ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಜುಲೈ ವೇಳೆಗೆ 3.09 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಂಗಳವಾರ ಹೇಳಿದ್ದಾರೆ. 2023-24ನೇ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ ವರ್ಗಾಯಿಸಲು ಅಂದಾಜಿಸಲಾದ 10.21 ಲಕ್ಷ ಕೋಟಿಯಲ್ಲಿ 2023-24ರ ಹಣಕಾಸು ವರ್ಷದಲ್ಲಿ ಜೂನ್‌'23ರಲ್ಲಿ ಸಾಮಾನ್ಯ ಮೊತ್ತಕ್ಕಿಂತ ದ್ವಿಗುಣವಾಗಿ 4 ಕಂತುಗಳಲ್ಲಿ ₹ 3,09,521.22 ಕೋಟಿಯನ್ನು ವಿನಿಯೋಗಿಸಲಾಗಿದೆ. ರಾಜ್ಯಗಳಿಗೆ ನೀಡಲಾಗುವ ಧನಸಹಾಯದಲ್ಲಿ ಕೇಂದ್ರ ಸರ್ಕಾರ ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ಲೋಕಸಭೆಯಲ್ಲಿ ಪಂಕಜ್‌ ಚೌಧರಿ ತಿಳಿಸಿದ್ದಾರೆ. ರಾಜ್ಯಗಳಿಗೆ ಹಂಚಿಕೆ ಮಾಡಬಹುದಾದ ಒಕ್ಕೂಟ ತೆರಿಗೆಗಳು ಮತ್ತು ಸುಂಕಗಳ ₹ 3.09 ಲಕ್ಷ ಕೋಟಿ ನಿವ್ವಳ ಆದಾಯದಲ್ಲಿ, ಜುಲೈವರೆಗೆ ಕೇಂದ್ರ ಜಿಎಸ್‌ಟಿ ಸಂಗ್ರಹ ವಿಕೇಂದ್ರೀಕರಣವು ₹ 94,368 ಕೋಟಿಗಳಷ್ಟಿದೆ.

"ಭಾರತದ ಕನ್ಸಾಲಿಡೇಟೆಡ್ ಫಂಡ್‌ಗೆ ಸಂಗ್ರಹಿಸಿದ ಮತ್ತು ಜಮಾ ಮಾಡಲಾದ ಸಿಜಿಎಸ್‌ಟಿಯ ಭಾಗವನ್ನು ಹಣಕಾಸು ಆಯೋಗದ ಅಂಗೀಕರಿಸಿದ ಶಿಫಾರಸುಗಳ ಪ್ರಕಾರ ರಾಜ್ಯಗಳಿಗೆ ವಿತರಿಸಲಾಗುತ್ತದೆ. 2022-23 ಹಣಕಾಸು ವರ್ಷದ ಅವಧಿಯಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಅಂತಹ ಸಿಜಿಎಸ್‌ಟಿ ಹಂಚಿಕೆಯ ಒಟ್ಟು ಮೊತ್ತವು ₹ 2,68,334.19 ಕೋಟಿಗಳು; ಇದನ್ನು 14 ಕಂತುಗಳಲ್ಲಿ ಬಿಡುಗಡೆ ಮಾಡಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದ್ದಾರೆ.

15ನೇ ಹಣಕಾಸು ಆಯೋಗವು 2021-22 ರಿಂದ 2025-26 ರ ಅವಧಿಯಲ್ಲಿ ಕೇಂದ್ರದ ತೆರಿಗೆ ಪೂಲ್‌ನ ಶೇಕಡಾ 41 ರಷ್ಟು ರಾಜ್ಯಗಳಿಗೆ ನೀಡಬೇಕೆಂದು ಶಿಫಾರಸು ಮಾಡಿದೆ, ಇದು 14 ನೇ ಹಣಕಾಸು ಆಯೋಗವು ಶಿಫಾರಸು ಮಾಡಿದ ಮಟ್ಟದಲ್ಲಿದೆ. ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಚೌಧರಿ ಅವರು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತೆರಿಗೆಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ ಮತ್ತು ಒಟ್ಟಾರೆ ತೆರಿಗೆ ಹೊರೆಯನ್ನು ಗಣನೀಯವಾಗಿ ಪಾರದರ್ಶಕತೆಯನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳಿಂದ 2.09 ಲಕ್ಷ ಕೋಟಿ ಬ್ಯಾಡ್‌ ಲೋನ್‌ ರೈಟ್‌ ಆಫ್‌!

"ಇದರಿಂದಾಗಿ ನೋಂದಾಯಿತ ತೆರಿಗೆದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಜಿಎಸ್‌ಟಿ ಆಡಳಿತದ ಮೊದಲು ನೋಂದಾಯಿತ ತೆರಿಗೆದಾರರ ಸಂಖ್ಯೆ ಸುಮಾರು 54 ಲಕ್ಷಗಳಷ್ಟಿತ್ತು, ಇದು ಈಗ ಜಿಎಸ್‌ಟಿ ಆಡಳಿತದ ನಂತರ ಸುಮಾರು 1.46 ಕೋಟಿಗೆ ಏರಿಕೆಯಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಕೋಟಿ ಕೋಟಿ ಆಸ್ತಿಯಿದ್ರೂ 5 ರೂ. ಪಾಕೆಟ್​ ಮನಿ ಪಡೀತಿದ್ರಾ ಅನಂತ್ ಅಂಬಾನಿ!