ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9.80 ಲಕ್ಷ ಕೋಟಿ ಹೂಡಿಕೆ

ಬೀಳಗಿ(ನ.08): ವಿಶ್ವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸುಮಾರು .9.80 ಲಕ್ಷ ಕೋಟಿ ಹೂಡಿಕೆಯಾಗಿದ್ದು, ಜಗತ್ತಿನಲ್ಲಿರುವ 400 ಕಂಪನಿಗಳು ಸೇರಿ 54 ರಾಷ್ಟ್ರಗಳು ಬಂಡವಾಳ ಹೂಡಿಕೆಯಲ್ಲಿ ಭಾಗವಹಿಸಿದ್ದು, ವಿಶ್ವವೇ ಕರ್ನಾಟಕದತ್ತ ನೋಡುತ್ತಿವೆ ಎಂದು ಕೈಗಾರಿಕಾ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.

ಬೀಳಗಿ ಕ್ರಾಸ್‌ ಹತ್ತಿರ ತಮ್ಮ ಸ್ವಗೃಹ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, .5 ಲಕ್ಷ ಕೋಟಿ ಹೂಡಿಕೆ ಹರಿದುಬರುವ ನಿರೀಕ್ಷೆ ಮಾಡಲಾಗಿತ್ತು. ಆದರೆ, ಗುರಿ ಮೀರಿ .9.81 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ. ಪರಿಣಾಮ ಹೊಸ ಇತಿಹಾಸ ನಿರ್ಮಾಣಗೊಂಡಿದೆ. ಇದರಿಂದ 5ರಿಂದ 6 ಲಕ್ಷ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ. ದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ನಂ.1 ಸ್ಥಾನ ಪಡೆದುಕೊಂಡಿದೆ. ಇದರಿಂದ ರಾಜ್ಯದ ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ. ಬಾಗಲಕೋಟೆಯಲ್ಲಿ ವಿಮಾನ ನಿಲ್ದಾಣ ಹಾಗೂ ಕೈಗಾರಿಕೆ ನಿವೇಶನ ಸ್ಥಾಪನೆ ಆಗುವುದರಿಂದ .15 ಸಾವಿರ ಕೋಟಿ ಬಂಡವಾಳ ಹೂಡಿಕೆ ಜತೆಗೆ 25 ಸಾವಿರ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದರು.

Invest Karnataka 2022: ಮೊದಲ ದಿನವೇ ದಾಖಲೆಯ ₹7.6 ಲಕ್ಷ ಕೋಟಿ ಹೂಡಿಕೆ!

ಬೃಹತ್‌ ಕೈಗಾರಿಕೆಗಳು ಹೆಚ್ಚಾಗುವುದರಿಂದ ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗÜಳಿಗೆ ಆಕ್ಸಿಜನ್‌ ಕೊಟ್ಟಂತೆ ಆಗುತ್ತದೆ. ದೊಡ್ಡ ಹಾಗೂ ಸಣ್ಣ ಕಾರ್ಖಾನೆ ಸೇರಿ, ಐಟಿಬಿಟಿಯಲ್ಲಿ ನಂ.1 ಗ್ರೀನ್‌ ಎನರ್ಜಿ, ಸೋಲಾರ್‌ ವಿಂಡೋ, ಅತಿ ಹೆಚ್ಚು ನೀರಿನಿಂದ ವಿದ್ಯುತ್‌ ತಯಾರಿಕೆ ಮಾಡುವುದು ದೇಶದಲ್ಲಿ ನಮ್ಮ ನಂ.1 ಆಗಿದ್ದು, ಬರುವ 10 ವರ್ಷದಲ್ಲಿ ನಮ್ಮ ದೇಶದಲ್ಲಿ ಡೀಸೆಲ್‌ ಮತ್ತು ಪೆಟ್ರೋಲ್‌ ವಾಹನಗಳು ಇರುವುದಿಲ್ಲ. ಎಥೆನಾಲ್‌ ಮತ್ತು ವಿದ್ಯುತ್‌ ಚಾಲಿತ ವಾಹನಗಳು ಬರಲಿವೆ. ಪ್ರಸ್ತುತ ಎಥೆನಾಲ್‌ ತಯಾರಿಕೆಯಲ್ಲಿ ನಿರಾಣಿ ಗ್ರೂಪ್‌ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಪ್ರಧಾನಮಂತ್ರಿಗಳ ಆತ್ಮನಿರ್ಭರ್‌ ಭಾರತ ಯೋಜನೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಹಲವು ಉದ್ಯಮಗಳು ಅಸ್ತಿತ್ವಕ್ಕೆ ಬರಲಿವೆ ಎಂದರು.

ಮತಕ್ಷೇತ್ರದಲ್ಲಿ ಈಗಾಗಲೇ .1.25 ಲಕ್ಷ ಸಾವಿರ ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. .400 ಕೋಟಿ ವೆಚ್ಚದಲ್ಲಿ ಮತಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ ಜೊತೆ ಶಿಕ್ಷಣ, ವಿದ್ಯುತ್‌, ಆರೋಗ್ಯ, 400 ದೆವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಪ್ರತಿಯೊಂದು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬೀಳಗಿಯ ಬಸ್ಸಮ್ಮ ದ್ಯಾಮನಗೌಡ ಜಕ್ಕನಗೌಡರ ಸರ್ಕಾರಿ ಬಾಲಕಿಯ ಪ್ರೌಢಶಾಲೆಗೆ ಪ್ರೊಜೆಕ್ಟರ್‌ ಅನ್ನು ದೇಣಿಗೆ ನೀಡಲಾಯಿತು. ಸುದ್ದಿಗೋಷ್ಠಿಯಲ್ಲಿ ಪ.ಪಂ ಅಧ್ಯಕ್ಷ ವಿಠಲ ಬಾಗೇವಾಡಿ, ಬಿಜೆಪಿ ಮಾಜಿ ಅಧ್ಯಕ್ಷ ಮಲ್ಲಪ್ಪ ಶಂಭೋಜಿ, ವಿ.ಜಿ.ರೇವಡಿಗಾರ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ನಿರಾಣಿ ಗ್ರೂಪ್‌ನಿಂದ .1700 ಕೋಟಿ ಹೂಡಿಕೆ

ದೇಶ ಹಾಗೂ ರಾಜ್ಯಅಭಿವೃದ್ಧಿಯಾಗಬೇಕಾದರೆ ಕೈಗಾರಿಕೆಗಳು ಹೆಚ್ಚು ಬರಬೇಕು. ಹೆಚ್ಚು ಕೈಗಾರಿಕೆ ಬರಬೇಕಾದರೆ ಮೂಲಸೌಲಭ್ಯಗಳು ದೊರೆಯಬೇಕು. ಬೀಳಗಿ ಮತಕ್ಷೇತ್ರದಲ್ಲಿ ಒಂದು ವಿಮಾನ ನಿಲ್ದಾಣ ಹಾಗೂ ಕೈಗಾರಿಕಾ ಕ್ಷೇತ್ರ ಬೇಕು. ಬೀಳಗಿ ಮತಕ್ಷೇತ್ರ ಎಲ್ಲ ಕ್ಷೇತ್ರದಲ್ಲಿ ಮುಂದೆ ಇದೆ. ಇನ್ನೂ ಹೆಚ್ಚು ಅಭಿವೃದ್ಧಿ ಆಗಲಿದ್ದು. ಪುತ್ರ ವಿಜಯ ನಿರಾಣಿ ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ಅವನಿಗೆ ಜಗತ್ತಿನ ಟಾಪ್‌ ಟೆನ್‌ ಉದ್ಯಮಿದಾರರ ಸಂಪರ್ಕ ಇದೆ. ಬಂಡವಾಳ ಹೊಡಿಕೆದಾರರ ಸಮಾವೇಶದಲ್ಲಿ ನಿರಾಣಿ ಗ್ರೂಪ್‌ನಿಂದ .1700 ಕೋಟಿ ಹೂಡಿಕೆ ಮಾಡಲಾಗಿದೆ ಅಂತ ಕೈಗಾರಿಕಾ ಸಚಿವ ಡಾ.ಮುರುಗೇಶ ನಿರಾಣಿ ತಿಳಿಸಿದ್ದಾರೆ.