* ಅತ್ಯಂತ ವ್ಯವಸ್ಥಿತ ಕೈಗಾರಿಕಾ ಪ್ರದೇಶವಾಗಿ ಮೇಲ್ದರ್ಜೆಗೆ* ಯುವ ಉದ್ಯಮಿಗಳಿಗೆ ನೆರವು ನೀಡುವ ಭರವಸೆ ನೀಡಿದ ಸಚಿವ ಎಂಟಿಬಿ* ಅತ್ಯಂತ ವ್ಯವಸ್ಥಿತವಾಗಿ ರೂಪುಗೊಳ್ಳಲಿರುವ ಪೀಣ್ಯ ಕೈಗಾರಿಕಾ ಪ್ರದೇಶ
ಬೆಂಗಳೂರು(ಮಾ.22): ಕೃಷಿ ನಂತರ ಸಣ್ಣ ಕೈಗಾರಿಕೆಗಳು ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಲಿದ್ದು, ರಾಜ್ಯದಲ್ಲಿ ಉತ್ಸಾಹಿ ಯುವ ಉದ್ಯಮಿಗಳಿಗೆ ಕೈಗಾರಿಕೆ ಸ್ಥಾಪಿಸಲು ಎಲ್ಲಾ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪೌರಾಡಳಿ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ವಲಯದ ಕೈಗಾರಿಕೆಗಳ ಸಚಿವ ಎಂಟಿಬಿ ನಾಗರಾಜು(MTB Nagaraj) ತಿಳಿಸಿದರು.
ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಿಳಾ ಒಕ್ಕೂಟ(CWCCI) ನಗರದ ವಲ್ಡ್‌ರ್ ಟ್ರೇಡ್ ಸೆಂಟರ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಗ್ಲೋಬಲ್‌ಸ್ಪಿನ್’ (GlobalSpin) ವ್ಯಾಪಾರ ಸಮಾವೇಶವನ್ನು ಉದ್ಘಾಟಿಸಿದ ಅವರು, ಹೊಸದಾಗಿ ತಮ್ಮ ಊರುಗಳಲ್ಲಿ ಸಣ್ಣ, ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು(Industry) ಆರಂಭಿಸಲು ಯುವ ಉದ್ಯಮಿಗಳು ಮುಂದಾದರೆ ರಾಜ್ಯ ಸರ್ಕಾರ(Government of Karnataka) ನೆರವು ನೀಡಲಿದೆ ಎಂದು ಭರವಸೆ ನೀಡಿದರು.
ಪಕ್ಷ ಬಿಡೋದಾದ್ರೆ ಕಾಂಗ್ರೆಸ್‌ಗೆ ಹೋಗಲ್ಲ, ಮನೆಗೆ ಹೋಗುತ್ತೇನೆ: ಎಂಟಿಬಿ ನಾಗರಾಜ್
ಪೀಣ್ಯಗೆ 100 ಕೋಟಿ:
ಏಷ್ಯಾದ(Aisa) ಅತಿದೊಡ್ಡ ಕೈಗಾರಿಕಾ ಪ್ರದೇಶದವಾದ ಪೀಣ್ಯ ಕೈಗಾರಿಕಾ ಪ್ರದೇಶದ(Peenya Industrial Area) ಮೂಲ ಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರವು 100 ಕೋಟಿ ರು. ಮೀಸಲಿಟ್ಟಿದ್ದು, ಯೋಜನೆ ರೂಪಿಸಲಾಗುತ್ತಿದೆ. ಪ್ರದೇಶದ ಸ್ವಚ್ಛತೆ, ವಾಹನ ಸಂಚಾರಕ್ಕೆ ಸುಗಮ ರಸ್ತೆಗಳು, ಸುಸಜ್ಜಿತ ಕಟ್ಟಡಗಳು, ಸುರಕ್ಷತೆ ಆದ್ಯತೆ ನೀಡಿದ್ದು, ಅತ್ಯಂತ ವ್ಯವಸ್ಥಿತವಾದ ಕೈಗಾರಿಕಾ ಪ್ರದೇಶವಾಗಿ ಪೀಣ್ಯ ರೂಪುಗೊಳ್ಳಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಡಬ್ಲ್ಯೂಸಿಸಿಐ ರಾಷ್ಟ್ರೀಯ ಅಧ್ಯಕ್ಷೆ ಐಶ್ವರ್ಯಾ ನಂದ್ಯಪ್ಪ, ಕೇಂದ್ರ ರೇಷ್ಮೆ ಮಂಡಳಿ ಸಿಇ ರಜಿತ್ ಒಖಂಡಿಯಾರ್, ಐ ಆ್ಯಮ್ ಖಾದಿ ಮತ್ತು ಉಡಾನ್ ಸಂಸ್ಥಾಪಕ ಯಶ್ ಆರಾರಯ, ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೋದ್ಯಮಗಳ ರಾಷ್ಟ್ರೀಯ ಸಂಸ್ಥೆ ಮಹಾನಿರ್ದೇಶಕ ಗ್ಲೋರಿ ಸ್ವರೂಪ ಸುಂಚು ಭಾಗವಹಿಸಿದ್ದರು.
ಶರತ್ ಬಚ್ಚೇಗೌಡ, ಎಂಟಿಬಿ ನಾಗರಾಜ್ ನಡುವೆ ಗಲಾಟೆ, ಮಧ್ಯಪ್ರವೇಶಿಸಿದ ಪೊಲೀಸ್ರು
ಹೊಸಕೋಟೆ: ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ (Sharath Bachegawda) ಹಾಗೂ ನಗರಾಭಿವೃದ್ಧಿ ಸಚಿವ ಎಂಟಿಬಿ ನಾಗರಾಜ್ (MTB Nagaraj) ನಡುವೆ ಕಟ್ಟಡ ಉದ್ಘಾಟನೆ ವಿಚಾರಕ್ಕಾಗಿ ಜಟಾಪಟಿ ನಡೆದ ಘಟನೆ , (ಫೆ.10 ರಂದು ನಡೆದಿತ್ತು.
ಹೌದು...ಟೆಪ್ ಕಟ್ ಮಾಡಲು ನಾ ಮುಂದು ತಾ ಮುಂದು ಅಂತಾ ಇಬ್ಬರ ನಡುವೆ ಕಿತ್ತಾಟವಾಗಿದೆ. ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ವೇಳೆ ಈ ಘಟನೆ ನಡೆದಿತ್ತು. ಉದ್ಘಾಟನೆಗೆ ತಂದಿದ್ದ ಕತ್ತರಿಯನ್ನ ಶಾಸಕ ಶರತ್ ಎತ್ತಿಕೊಂಡು ಟೇಪ್ ಕಟ್ ಮಾಡಲು ಮುಂದಾದಾಗ ಎಂಟಿಬಿ ಗರಂ ಆಗಿದ್ದಾರೆ. ಸಚಿವ ಎಂಟಿಬಿ ಗರಂ ಆದರೂ ತಲೆಕೆಡಿಸಿಕೊಳ್ಳದೇ ಶಾಸಕ ಶರತ್ ಟೆಪ್ ಕಟ್ ಮಾಡಿದ್ದಾರೆ. ಕಟ್ ಮಾಡಿ ಒಳಗೆ ಹೋಗುತ್ತಿದ್ದಂತೆ ಬಚ್ಚೇಗೌಡ ನಿಂದು ಇದೇ ಆಗೋಯ್ತು ಅಂತ ಶರತ್ ಬಗ್ಗೆ ಎಂಟಿಬಿ ಗರಂ ಆಗಿ ಹೇಳಿದ್ದರು.
District In-charge: ಬೆಂಗಳೂರು ಗ್ರಾಮಾಂತರ ಉಸ್ತುವಾರಿಗೆ ಎಂಟಿಬಿ ಪಟ್ಟು
ಈ ವೇಳೆ ಸಚಿವರಿಗೆ ಗೌರವ ಕೊಡುವಂತೆ ಎಂಟಿಬಿ ನಾಗರಾಜ್ ವಾರ್ನ್ ಮಾಡಿದ್ದಾರೆ. ಆಗ ಸಚಿವ ಎಂಟಿಬಿಯನ್ನು ಒಂದುಕಡೆ ತಳ್ಳಿ ಶಾಸಕ ಶರತ್ ಒಳನುಗ್ಗಿದ್ದಾರೆ. ಪಕ್ಕಕ್ಕೆ ಎಡವಿದ ಎಂಟಿಬಿ ನಾಗರಾಜ್, ತಂದೆ, ಮಗನ ದಬ್ಬಾಳಿಕೆ ಹೆಚ್ಚಾಯಿತೆಂದು ಗರಂ ಆಗಿದ್ದಾರೆ. ಗರಂ ನಡುವೆ ಕೈ ಬೆರಳು ತೋರಿಸಿ ಮಾತನಾಡದಂತೆ ಎಂಟಿಬಿಗೆ ಶಾಸಕ ಶರತ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು ಮಾತಿನ ಚಕಮಕಿ ತಾರಕಕ್ಕೇರಿತ್ತು.
ಹೀಗೆ ಶರತ್ ಬಚ್ಚೇಗೌಡ ಹಾಗೂ ಶಾಸಕ ಎಂಟಿಬಿ ನಾಗರಾಜ್ ನಡುವೆ ಟಾಕ್ ವಾರ್ ಶುರುವಾಗಿದ್ದು, ಟಾಕ್ ವಾರ್ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಶಾಸಕರು ಹಾಗೂ ಸಚಿವರನ್ನು ಶಾಂತಗೊಳಿಸಿದ್ದರು.
