ದುಡ್ಡು ಮಾಡೋದು ಹೇಗೆ? ಮಿಡಲ್ ಕ್ಲಾಸಿನವರೇಕೆ ಸಿರಿವಂತರಾಗೋಲ್ಲ?
ಮಧ್ಯಮ ವರ್ಗದ ಜನರು ಶ್ರೀಮಂತರಾಗೋದು ಬಹಳ ಅಪರೂಪ. ಎಷ್ಟೇ ದುಡಿದ್ರೂ ಅವರ ಕೈನಲ್ಲಿ ಹಣ ನಿಲ್ಲೋದಿಲ್ಲ. ಅದನ್ನು ಹೇಗೆ ಖರ್ಚು ಮಾಡ್ಬೇಕು ಎಂಬುದು ಅವರಿಗೆ ಗೊತ್ತಿಲ್ಲ ಎನ್ನುತ್ತಾರೆ ಈ ಶ್ರೀಮಂತ.
ಆರಕ್ಕೇರದ, ಮೂರಕ್ಕಿಳಿಯದ ಮಧ್ಯಮ ವರ್ಗದವರ, ಕನಸು ಮಾತ್ರ ಯಾವಾಗ್ಲೂ ದೊಡ್ಡದಿರುತ್ತೆ. ಶ್ರೀಮಂತರಾಗ್ಬೇಕು, ಐಷಾರಾಮಿ ಜೀವನ ನಡೆಸಬೇಕು ಎನ್ನುವ ಕನಸಿನಲ್ಲೇ ಅವರು ದುಡಿಮೆ ಶುರು ಮಾಡ್ತಾರೆ. ಹಗಲಿರುಳು ಕೆಲಸ ಮಾಡಿ ಒಂದಿಷ್ಟು ಹಣ ಸಂಪಾದನೆ ಕೂಡ ಮಾಡ್ತಾರೆ. ಆದ್ರೆ ಸಂಪಾದನೆ ಮಾಡಿದ ಹಣ ಹೇಗೆ ಖರ್ಚಾಗುತ್ತೆ ಎಂಬುದೇ ಅವರಿಗೆ ಗೊತ್ತಾಗೋದಿಲ್ಲ. ತಿಂಗಳ ಕೊನೆಯಲ್ಲಿ ಮತ್ತದೇ ಖಾಲಿ ಕೈನಲ್ಲಿ ಓಡಾಡುತ್ತಾರೆ. ಮಧ್ಯಮ ವರ್ಗದ ಜನರು ಗಳಿಸಸಿದ ಸಂಪತ್ತನ್ನು ಅನುಭವಿಸಲು ಸಾಧ್ಯವಾಗೋದಿಲ್ಲ. ಇದಕ್ಕೆ ಅವರು ಮಾಡುವ ಒಂದು ತಪ್ಪೇ ಕಾರಣ. ಅಮೆರಿಕಾದ ಶ್ರೀಮಂತ ವ್ಯಕ್ತಿಯೊಬ್ಬ, ಮಧ್ಯಮ ವರ್ಗದ ಜನರು ಶ್ರೀಮಂತರಾಗದಿರಲು ಏನು ಕಾರಣ ಎಂಬುದನ್ನು ಹೇಳಿದ್ದಾರೆ. ಅವರು ಮಾಡುವ ಯಾವ ತಪ್ಪು ಅವರನ್ನು ಮೇಲಕ್ಕೇರಲು ಬಿಡೋದಿಲ್ಲ ಎಂಬುದನ್ನು ವಿವರಿಸಿದ್ದಾರೆ. ನೀವೂ ಮಧ್ಯಮವರ್ಗದವರಾಗಿದ್ದು, ಶ್ರೀಮಂತಿಕೆ ಆಸೆ ಹೊಂದಿದ್ದರೆ ಇವರು ಏನು ಹೇಳ್ತಾರೆ ಅನ್ನೋದನ್ನು ಸ್ವಲ್ಪ ಕೇಳಿ.
ಅಮೆರಿಕಾ (America) ದ ಶ್ರೀಮಂತ ವ್ಯಕ್ತಿ ಟೇಲರ್ ಮನಿ ಹೆಸರಿನಲ್ಲಿ ಟಿಕ್ ಟಾಕ್ (Tik Tok) ನಲ್ಲಿ ಖಾತೆ ರಚಿಸಿದ್ದಾರೆ. ಅಲ್ಲಿ ಅವರು ಶ್ರೀಮಂತರಾಗೋದು ಹೇಗೆ ಎನ್ನುವ ಬಗ್ಗೆ ಅನೇಕ ಸಲಹೆಗಳನ್ನು ನೀಡ್ತಾರೆ. ಇತ್ತೀಚಿಗೆ ಅವರ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ಮಧ್ಯಮ ವರ್ಗ (Middle Class) ದವರು ಏಕೆ ಶ್ರೀಮಂತರಾಗೋದಿಲ್ಲ ಎನ್ನುವ ವಿಷ್ಯವನ್ನು ಅವರು ಹೇಳಿದ್ದಾರೆ. ಅವರ ಪ್ರಕಾರ, ಮಧ್ಯಮ ವರ್ಗದವರ ಮನಸ್ಥಿತಿಯೇ ಅವರು ಶ್ರೀಮಂತರಾಗದಿರಲು ಕಾರಣವಂತೆ.
ಅಂಬಾನಿ ಕುಟುಂಬದ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳೋ ಬ್ಯೂಟಿ ಕ್ವೀನ್ ದಿಯಾ ಮೆಹ್ತಾ, ಯಾರು ಈ ಲೇಡಿ ಓರಿ?
ಈ ವ್ಯಕ್ತಿ ಪ್ರಕಾರ, ಬಡವರು ವಾರದಲ್ಲಿ ಐದು ದಿನ ಕೆಲಸ ಮಾಡ್ತಾರೆ. ಅವರು ಇಡೀ ದಿನ ಕಷ್ಟಪಟ್ಟು ದುಡಿದು ಹಣ ಸಂಪಾದನೆ ಮಾಡ್ತಾರೆ. ಐದು ದಿನ ದುಡಿದ ಹಣವನ್ನು ಬಿಲ್ ಪಾವತಿ, ಆಹಾರಕ್ಕೆ ಖರ್ಚು ಮಾಡ್ತಾರೆ. ಹಾಗಾಗಿ ಅವರು ಮೇಲೆ ಬರಲು ಸಾಧ್ಯವೇ ಇಲ್ಲ. ಇನ್ನು ಮಧ್ಯಮ ವರ್ಗದ ಜನರು ಹಣ ಸಂಪಾದನೆ ಮಾಡಿ ಅದನ್ನು ಕೂಡಿಡುತ್ತಾರೆ. ನಂತ್ರ ಆ ಹಣವನ್ನು ಮನೆ, ವಾಹನ ಸೇರಿದಂತೆ ದೊಡ್ಡ ವಸ್ತುಗಳ ಖರೀದಿಗೆ ಬಳಸ್ತಾರೆ. ಈ ವಸ್ತುಗಳಿಂದ ಅವರಿಗೆ ಹಣ ಹೆಚ್ಚಿಸಲು ಸಾಧ್ಯವಾಗೋದಿಲ್ಲ.
ಮಧ್ಯಮ ವರ್ಗದ ವ್ಯಕ್ತಿ ಹಣ ಸಂಪಾದನೆ ಮಾಡ್ತಾನೆಯೇ ಹೊರತು ಹಣವನ್ನು ಹೆಚ್ಚಿಸೋದಿಲ್ಲ. ಅದೇ ಶ್ರೀಮಂತ ವ್ಯಕ್ತಿ ಹಣ ಸಂಪಾದನೆ ಮಾಡುವ ಬದಲು ಹಣವನ್ನು ಹೆಚ್ಚಿಸುವ ಕೆಲಸ ಮಾಡ್ತಾನೆ. 25ರಿಂದ 28ರ ಹರೆಯದಲ್ಲಿ ಜನರು ಲಕ್ಷಾಧಿಪತಿಯಾಗಲು ಹಣ ಸಂಪಾದನೆ ಮಾಡಬೇಕೆ ವಿನಃ ಅದನ್ನು ಖರ್ಚು ಮಾಡುವ ಆಲೋಚನೆ ಮಾಡಬಾರದು ಎನ್ನುತ್ತಾರೆ ಟೇಲರ್. ಹಣ ಸಂಪಾದನೆಗೆ ತಲೆಕೆಡಿಸಿಕೊಳ್ಳುವ ಬದಲು ಹಣ ಹೆಚ್ಚಿಸಲು ಬುದ್ದಿ ಉಪಯೋಗಿಸಿ ಎನ್ನುತ್ತಾರೆ.
ಮನೆ ಮುಖ್ಯ ದ್ವಾರದಲ್ಲಿ ಈ ಸಣ್ಣ ವಸ್ತು ನೇತು ಹಾಕಿದ್ರೆ ಕೈ ತುಂಬಾ ಹಣ ಇರುತ್ತೆ!
ಕೈಗೆ ಹಣ ಬರ್ತಿದ್ದಂತೆ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವವರೇ ಹೆಚ್ಚು. ಮನೆ, ವಾಹನ ಖರೀದಿ ಗುರಿಯನ್ನೇ ಮಧ್ಯಮ ವರ್ಗದ ಜನರು ಹೊಂದಿರುತ್ತಾರೆ. ಐಷಾರಾಮಿ ವಸ್ತುಗಳಿದ್ದರೆ ಅದೇ ಶ್ರೀಮಂತಿಕೆ ಎಂದು ಭಾವಿಸುತ್ತಾರೆ. ಆದ್ರೆ ಮನೆಯಲ್ಲಿರುವ ವಸ್ತುಗಳು ಧೂಳು ಹಿಡಿಯುತ್ವೆ ವಿನಃ ಅದರಿಂದ ನೀವು ಮತ್ತೆ ಹಣ ಸಂಪಾದನೆ ಮಾಡಲು ಸಾಧ್ಯವಿಲ್ಲ. ಅದೇ ಆ ಹಣವನ್ನು ನೀವು ಬುದ್ಧಿವಂತಿಕೆಯಿಂದ ಬಳಸಿದ್ರೆ ಹಣದಿಂದ ಹಣ ಸಂಪಾದಿಸಬಹುದು. ಮಧ್ಯಮವರ್ಗದ ಜನರು ಹಣವನ್ನು ಒಳ್ಳೆ ಕಡೆ ಹೂಡಿಕೆ ಮಾಡಬೇಕು. ಬಂದ ಹಣವನ್ನು ಪ್ಲಾನ್ ಪ್ರಕಾರ ಖರ್ಚು ಮಾಡಬೇಕು. ನೀವು ಹೂಡಿದ ಹಣ ಮತ್ತಷ್ಟು ಹಣ ಸಂಪಾದನೆ ಮಾಡುತ್ತದೆ ಎನ್ನುವ ಜಾಗದಲ್ಲಿ ಮಾತ್ರ ಹಣ ಹಾಕಬೇಕು ಎನ್ನುತ್ತಾರೆ ಟೇಲರ್.