Asianet Suvarna News Asianet Suvarna News

ಏಕಾಏಕಿ ರಕ್ಷಣಾ ಸಾಮಗ್ರಿ ಖರೀದಿ: ಏನ್ ನಡೀತಿದೆ ಮೋದಿ?

ರಕ್ಷಣಾ ಸಾಮಾಗ್ರಿ ಖರೀದಿಗೆ ಕೇಂದ್ರದ ಒಪ್ಪಿಗೆ! 9,100 ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿ! ಡಿಫೆನ್ಸ್ ಆಕ್ವಿಝಿಶನ್ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ! ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಸಭೆ
 

Military Equipment Worth Rs. 9,100 Crore Gets Defence Ministry Nod
Author
Bengaluru, First Published Sep 19, 2018, 2:55 PM IST

ನವದೆಹಲಿ(ಸೆ.19): ಮಹತ್ವದ ಬೆಳವಣಿಗೆಯೊಂದರಲ್ಲಿ 9,100 ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಾಗ್ರಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. 

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಇಂದು ನಡೆದ ಡಿಫೆನ್ಸ್ ಆಕ್ವಿಝಿಶನ್ ಕೌನ್ಸಿಲ್ (ಡಿಎಸಿ) ಸಭೆಯಲ್ಲಿ 9,100 ಕೋಟಿ ರೂ. ಮೌಲ್ಯದ ಸಾಮಾಗ್ರಿಗಳನ್ನು ರಕ್ಷಣಾ ಪಡೆಗಳಿಗಾಗಿ ಖರೀದಿ ಮಾಡಲು ಅನುಮೋದನೆ ನೀಡಲಾಯಿತು. 

9,100 ಕೋಟಿ ರೂ.ದಲ್ಲಿ ದೇಶೀಕರಣ ಮತ್ತು ಸ್ವಾವಲಂಬನೆಯ ಗುರಿಯೊಂದಿಗೆ ರಕ್ಷಣಾ ಸಾಮಾಗ್ರಿಗಳನ್ನು ಖರೀದಿ ಮಾಡಲಾಗುತ್ತದೆ. ಇದಲ್ಲದೆ, ಭಾರತ್ ಡೈನಾಮಿಕ್ಸ್ ಲಿಮಿಟೆಡ್'ನಿಂದ 2 ರಿಜಿಮೆಂಟ್ ಗಳಿಗೆ ಆಕಾಶ್ ಮಿಸೈಲ್ ಸಿಸ್ಟಮ್ ಹಾಗೂ ಇತರ ಶಕ್ತಿಶಾಲಿ ರಕ್ಷಣಾ ಸಾಮಾಗ್ರಿಗಳನ್ನು ಖರೀದಿ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

Follow Us:
Download App:
  • android
  • ios