Asianet Suvarna News Asianet Suvarna News

ಗಾಡಿ ಹೊರ ತೆಗೆಯುವ ಮುನ್ನ: ತೈಲ ನೀತಿ ಬದಲಾಗಿರುವುದು ತಿಳಿದುಕೊಂಡರೆ ಚೆನ್ನ!

ಬದಲಾಗಿದೆ ಭಾರತದ ತೈಲ ಆಮದು ನೀತಿ| ಒಂದೇ ವರ್ಷದಲ್ಲಿ ತೈಲ ಆಮದು ನೀತಿ ಬದಲಾಗಿದ್ದು ಹೇಗೆ?| ಮಧ್ಯಪ್ರಾಚ್ಯದಿಂದ ಕಚ್ಚಾತೈಲ ಆಮದು ಕಡಿಮೆ ಮಾಡಿದ ಭಾರತ| ಅಮೆರಿಕ, ರಷ್ಯಾ ದೇಶಗಳತ್ತ ಭಾರತದ ಚಿತ್ತ| ತೈಲಕ್ಕಾಗಿ ಇತರ ರಾಷ್ಟ್ರಗಳತ್ತ ನೋಡುವ ಕೇಂದ್ರ ಸರ್ಕಾರದ ನೀತಿ| ಭಾರತದ ಕಚ್ಚಾತೈಲದ ಆಮದು ಪ್ರಮಾಣ ಶೇ.60| ಮಧ್ಯಪ್ರಾಚ್ಯದಿಂದ ಕಚ್ಚಾತೈಲ ಆಮದು ಕಡಿಮೆ ಮಾಡಿರುವುದಕ್ಕೆ ಕಾರಣವೇನು?|

Middle Eastern Crude Oil Import To India Slumps to 4-Year Low
Author
Bengaluru, First Published Jan 21, 2020, 2:27 PM IST
  • Facebook
  • Twitter
  • Whatsapp

ನವದೆಹಲಿ(ಜ.21): ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕ ಭಾರತ, ಮಧ್ಯಪ್ರಾಚ್ಯದಿಂದ ತೈಲದ ಆಮದನ್ನು ತಗ್ಗಿಸಿದೆ. 2019ರಲ್ಲಿ ಮಧ್ಯಪ್ರಾಚ್ಯದಿಂದ ಆಮದಾಗಿರುವ ತೈಲ ಪ್ರಮಾಣ ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿರುವುದು ವಿಶೇಷ.

ಅಮೆರಿಕ-ಇರಾನ್ ನಡುವಿನ ಯುದ್ಧದ ಭೀತಿಯ ವಾತಾವರಣ ಸೇರಿದಂತೆ ಜಾಗತಿಕ ಮಟ್ಟದ ವಾಣಿಜ್ಯ ಸಮರದಿಂದ ತೈಲ ಆಮದಿನ ಮೇಲೆ ಪರಿಣಾಮ ಬೀರಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಲ್ಲದೇ ತೈಲಕ್ಕಾಗಿ ಇತರ ರಾಷ್ಟ್ರಗಳತ್ತ ನೋಡುವ ಕೇಂದ್ರ ಸರ್ಕಾರದ ನೀತಿಯೂ ಮಧ್ಯಪ್ರಾಚ್ಯದ ಜೊತೆಗಿನ ವ್ಯಾಪಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.

ಅಮೆರಿಕ ಹಾಗೂ ರಷ್ಯಾದಲ್ಲಿ ದಾಖಲೆ ತೈಲ ಉತ್ಪಾದನೆಯಾಗುತ್ತಿರುವುದು, ಭಾರತದಂತ ಆಮದುದಾರರಿಗೆ ಹೊಸ ಮೂಲವನ್ನು ಒದಗಿಸಿದಂತಾಗಿದೆ. ಇದರ ಪರಿಣಾಮವಾಗಿ ಮಧ್ಯಪ್ರಾಚ್ಯ ದೇಶಗಳ ಮೇಲಿನ ಅವಲಂಬನೆ ಕುಂಠಿತವಾಗುತ್ತಿದೆ.

ಭಾರತ ತನ್ನ ತೈಲ ಅಗತ್ಯದ ಸುಮಾರು ಶೇ.84ರಷ್ಟನ್ನು ಆಮದು ಮಾಡಿಕೊಳ್ಳುತ್ತಿದ್ದು, ಸಾಂಪ್ರದಾಯಿಕವಾಗಿ ಮಧ್ಯಪ್ರಾಚ್ಯ ದೇಶಗಳೇ ಭಾರತಕ್ಕೆ ಪ್ರಮುಖ ತೈಲ ಸರಬರಾಜು ದೇಶಗಳಾಗಿ ಹೊರಹೊಮ್ಮಿದ್ದವು.2019ರಲ್ಲಿ ಭಾರತ ಮಧ್ಯಪ್ರಾಚ್ಯದಿಂದ ದಿನಕ್ಕೆ 2.68 ಮಿಲಿಯನ್ ಬ್ಯಾರೆಲ್ ಕಚ್ಚಾತೈಲವನ್ನು ಆಮದು ಮಾಡಿಕೊಂಡಿದ್ದು ಇದಕ್ಕೆ ಉದಾಹರಣೆ.

ಆದರೆ ಸದ್ಯ ಭಾರತದ ಕಚ್ಚಾತೈಲದ ಆಮದು ಪ್ರಮಾಣ ಶೇ.60ರಷ್ಟಿದ್ದು, 2018ರಲ್ಲಿ ಇದು ಶೇ.65ರಷ್ಟಿತ್ತು ಎಂಬುದು ಅಂಕಿ ಅಂಶಗಳಿಂದ ದೃಢಪಟ್ಟಿದೆ. ಇದು ತೈಲಕ್ಕಾಗಿ ಬೇರೆ ರಾಷ್ಟ್ರಗಳತ್ತ ನೋಡುವ ನೀತಿಯನ್ನು ತೋರಿಸುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಒಪೆಕ್ ಮತ್ತು ಮಿತ್ರರಾಷ್ಟ್ರಗಳ ನಿರೀಕ್ಷಿತ ತೈಲ ಉತ್ಪಾದನೆ ಕಡಿತ ಮತ್ತು ಅಮೆರಿಕದ ನಿರ್ಬಂಧಗಳಿಂದಾಗಿ ಇರಾನ್‌ನಿಂದ ಕಡಿಮೆ ಪೂರೈಕೆ ಕೂಡ ಮಧ್ಯಪ್ರಾಚ್ಯ ತೈಲದ ಅವಲಂಭನೆಯನ್ನು ದುರ್ಬಲಗೊಳಿಸಿದೆ ಎನ್ನಲಾಗಿದೆ. ಕಳೆದ ವರ್ಷ ಒಪೆಕ್ ಪ್ಲಸ್ ಎಂದು ಕರೆಯಲ್ಪಡುವ ಒಪೆಕ್ ಮತ್ತು ಮಿತ್ರರಾಷ್ಟ್ರಗಳ ನಿರ್ಬಂಧಗಳು ಮತ್ತು ಕಡಿತದ ಪರಿಣಾಮವಾಗಿ 2018 ರಿಂದ 1.9 ಮಿಲಿಯನ್ ಬಿಪಿಡಿ ಸರಬರಾಜು ಕಡಿಮೆಗೊಳಿಸಲಾಗಿದೆ.

ಸಿಐಎಸ್ ರಾಷ್ಟ್ರಗಳಿಂದ 2019 ರಲ್ಲಿ ತೈಲ ಆಮದು ಸುಮಾರು ಶೇ.65ರಷ್ಟು ಏರಿಕೆಯಾಗಿ 171,000 ಬಿಪಿಡಿ ತಲುಪಿದೆ. ಅದರಂತೆ ಆಫ್ರಿಕನ್ ದೇಶಗಳಿಂದ ಆಮದು ಪ್ರಮಾಣ ಶೇ.7.3ರಷ್ಟು ಏರಿಕೆಯಾಗಿ, ಸುಮಾರು 713,000 ಬಿಪಿಡಿ ತಲುಪಿದೆ.

ಆದರೆ ಅಮೆರಿಕದಿಂದ ಸರಬರಾಜು ಕಚ್ಚಾತೈಲದ ಪ್ರಮಾಣದಲ್ಲಿ ಶೇ.63% ರಷ್ಟು ಏರಿಕೆಯಾಗಿ 181,000 ಬಿಪಿಡಿ ತಲುಪಿದೆ. 2019 ರಲ್ಲಿ ಅಮೆರಿಕದಿಂದ ಆಮದಾಗುವ ತೈಲ ಭಾರತದ ಒಟ್ಟಾರೆ ಆಮದುಗಳಲ್ಲಿ ಸುಮಾರು ಶೇ.4ರಷ್ಟಾಗಿದೆ. ಒಂದು ವರ್ಷದ ಹಿಂದೆ ಇದು ಕೇವಲ ಶೇ. 2.5ರಷ್ಟಿತ್ತು ಎಂಬುದು ವಿಶೇಷ.

Follow Us:
Download App:
  • android
  • ios