ಮೈಕ್ರೋಸಾಫ್ಟ್‌ನಿಂದ ಭಾರತದಲ್ಲಿ ₹26,000 ಕೋಟಿ ಹೂಡಿಕೆ: ನಾದೆಳ್ಳ
ಮೈಕ್ರೋಸಾಫ್ಟ್ ಭಾರತದಲ್ಲಿ ಕ್ಲೌಡ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಭಾರತದಲ್ಲಿ 3 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ. ಇದು ಭಾರತದಲ್ಲಿ ಮೈಕ್ರೋಸಾಫ್ಟ್ ಮಾಡುತ್ತಿರುವ ಈವರೆಗಿನ ಅತಿದೊಡ್ಡ ಹೂಡಿಕೆ ಆಗಿದೆ ಎಂದ ಸತ್ಯ ನಾದೆಳ್ಳ
ಬೆಂಗಳೂರು(ಜ.08): ಮೈಕ್ರೋಸಾಫ್ಟ್ ಮುಂದಿನ 2 ವರ್ಷಗಳಲ್ಲಿ ಕ್ಲೌಡ್ ಮತ್ತು ಎಐ ಮೂಲಸೌಕರ್ಯಕ್ಕಾಗಿ ಭಾರತದಲ್ಲಿ 3 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ ಎಂದು ಮತ್ತು ಸಿಇಒ ಸತ್ಯ ನಾದೆಳ್ಳ ಪ್ರಕಟಿಸಿದ್ದಾರೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾದೆಳ್ಳ ಭೇಟಿ ಮಾಡಿ ಭಾರತದಲ್ಲಿ ಹೂಡಿಕೆ ಇಂಗಿತ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಹೂಡಿಕೆ ಘೋಷಣೆ ಹೊರಬಿದ್ದಿದೆ. ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ನಾದೆಳ್ಳ ಅವರು, ‘ಮೈಕ್ರೋಸಾಫ್ಟ್ ಭಾರತದಲ್ಲಿ ಕ್ಲೌಡ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಭಾರತದಲ್ಲಿ 3 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ. ಇದು ಭಾರತದಲ್ಲಿ ಮೈಕ್ರೋಸಾಫ್ಟ್ ಮಾಡುತ್ತಿರುವ ಈವರೆಗಿನ ಅತಿದೊಡ್ಡ ಹೂಡಿಕೆ ಆಗಿದೆ’ ಎಂದರು.
ಕ್ರಿಕೆಟರ್ ಕನಸು ಕಂಡಿದ್ದ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಳ್ಲ ಇಂಜಿನೀಯರ್ ಆಗಿದ್ದು ಹೇಗೆ?
‘2030ರ ವೇಳೆಗೆ 1 ಕೋಟಿ ಜನರಿಗೆ ಎಐನಲ್ಲಿ ತರಬೇತಿ ಮತ್ತು ಕೌಶಲ್ಯವನ್ನು ನೀಡುವ ಇರಾದೆ ನಮ್ಮದಾಗಿದೆ’ ಎಂದ ನಾದೆಳ್ಲ, ‘ಕಂಪನಿಯು ಈಗಾಗಲೇ 24 ಲಕ್ಷ ಭಾರತೀಯರನ್ನು ಸಬಲೀಕರಣಗೊಳಿಸಿದೆ, ಇದರಲ್ಲಿ ನಾಗರಿಕ ಸೇವಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ವಿಕಲಚೇತನರು, ಎಐ ಕೌಶಲ್ಯಗಳನ್ನು ಪಡೆದಿದ್ದಾರೆ’ ಎಂದರು.
ಈ ಹೂಡಿಕೆಯು ದೇಶದಲ್ಲಿ ಎಐ ಆವಿಷ್ಕಾರವನ್ನು ವೇಗಗೊಳಿಸುವ ಗುರಿ ಹೊಂದಿದೆ, ಇದು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ (ವಿಕಸಿತ್ ಭಾರತ್) ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಯನ್ನು ಸಾಧಿಸಲು ಪ್ರಮುಖವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಮೈಕ್ರೋಸಾಫ್ಟ್‌ನಿಂದ ವರ್ಷಕ್ಕೆ 665 ಕೋಟಿ ರೂಪಾಯಿ ಸಂಬಳ ಪಡೆದ ಸತ್ಯ ನಾದೆಳ್ಳ!
ಬೆಂಗಳೂರು: ಮೈಕ್ರೋಸಾಫ್ಟ್ ಕಂಪನಿಯ ಭಾರತೀಯ ಮೂಲದ ಸಿಇಒ ಸತ್ಯ ನಾದೆಳ್ಳ ಅವರ ವೇತನವನ್ನು ಶೇ.63ರಷ್ಟು ಹೆಚ್ಚಿಸಿದೆ. 2024ರ ಹಣಕಾಸು ವರ್ಷದಲ್ಲಿ ಅವರು ಮೈಕ್ರೋಸಾಫ್ಟ್‌ನಿಂದ ಒಟ್ಟು 79.1 ಮಿಲಿಯನ್ ಯುಎಸ್ ಡಾಲರ್ (ಅಂದಾಜು 665 ಕೋಟಿ ರೂಪಾಯಿ) ವೇತನ ಪಡೆದುಕೊಂಡಿದ್ದಾರೆ. 2023 ರ ಆರ್ಥಿಕ ವರ್ಷದಲ್ಲಿ, ನಾದೆಲ್ಲಾ ಅವರ ವೇತನ $ 48.5 ಮಿಲಿಯನ್ ಡಾಲರ್ ಆಗಿತ್ತು (ಪ್ರಸ್ತುತ ಮೌಲ್ಯ ಸುಮಾರು 408 ಕೋಟಿ ರೂ). ಕಂಪನಿ ಸೇರಿದ ನಂತರ ನಾದೆಳ್ಳ ಪಡೆದ ಎರಡನೇ ಅತಿ ಹೆಚ್ಚು ಸಂಭಾವನೆ ಇದಾಗಿದೆ. ಇದಕ್ಕೂ ಮುನ್ನ 2014ರಲ್ಲಿ ಅವರು 84 ಮಿಲಿಯನ್ ಡಾಲರ್ ವೇತನ ಪಡೆದಿದ್ದರು. ಕಂಪನಿಯು ಷೇರು ಫೈಲಿಂಗ್‌ನಲ್ಲಿ ಈ ಕುರಿತು ಮಾಹಿತಿ ನೀಡಿತ್ತು.
ಪತ್ನಿಗಾಗಿ ಅಮೆರಿಕದ ಗ್ರೀನ್ ಕಾರ್ಡ್‌ಅನ್ನೇ ತ್ಯಜಿಸಿದ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಾದೆಳ್ಳ!
ನಾದೆಳ್ಳ ಅವರ ಷೇರು ಆಧಾರಿತ ಆದಾಯ $71 ಮಿಲಿಯನ್‌ಗೆ ಏರಿಕೆ:
ಸ್ಟಾಕ್ ಅವಾರ್ಡ್ಸ್‌ಗಳ ಹೆಚ್ಚಳದಿಂದಾಗಿ ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕೃತಕ ಬುದ್ಧಿಮತ್ತೆಯ ಬೆಳವಣಿಗೆ ಮತ್ತು ಮುಕ್ತ AI ನಲ್ಲಿ ಹೂಡಿಕೆ ಕಂಪನಿಯ ಮಾರುಕಟ್ಟೆ ಸ್ಥಾನವನ್ನು ಬಲಪಡಿಸಿದೆ. ಈ ಅವಧಿಯಲ್ಲಿ, ಕಂಪನಿಯ ಮೌಲ್ಯಮಾಪನವು 31.2% ರಷ್ಟು ಏರಿಕೆಯಾಗಿ $3 ಟ್ರಿಲಿಯನ್ (ರೂ. 252 ಲಕ್ಷ ಕೋಟಿ) ಗಿಂತಲೂ ಹೆಚ್ಚಿದೆ. ಇದು ಕಳೆದ ವರ್ಷ 39 ಮಿಲಿಯನ್ ಡಾಲರ್ (328 ಕೋಟಿ ರೂ.) ಇದ್ದ ಸತ್ಯ ನಾದೆಳ್ಳ ಅವರ ಷೇರು ಆಧಾರಿತ ಆದಾಯವನ್ನು 71 ಮಿಲಿಯನ್ ಡಾಲರ್ (ರೂ. 597 ಕೋಟಿ)ಗೆ ಹೆಚ್ಚಿಸಿದೆ.
ಆಪಲ್ ಸಿಇಒ ಟಿಮ್ ಕುಕ್‌ಗೆ 2023 ರಲ್ಲಿ $ 63.2 ಮಿಲಿಯನ್ ಸಂಬಳ:
ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಆಪಲ್‌ನ ಟಿಮ್ ಕುಕ್, ಅವರು 2023 ರಲ್ಲಿ $63.2 ಮಿಲಿಯನ್ ಸಂಬಳವನ್ನು ಪಡೆದುಕೊಂಡಿದ್ದರು. ಅದೇ ಸಮಯದಲ್ಲಿ, ಎನ್ವಿಡಿಯಾದ ಸಿಇಒ 2024 ರ ಆರ್ಥಿಕ ವರ್ಷದಲ್ಲಿ $31.2 ಮಿಲಿಯನ್ ಸಂಬಳವನ್ನು ಪಡೆದಿದ್ದರು.