ರೈತರಿಲ್ಲಿ ತಿಂಗಳಿಗೆ MNC ಉದ್ಯೋಗಿಗಳಂತೆ ಲಕ್ಷಗಟ್ಟಲೆ ಸಂಪಾದಿಸ್ತಾರೆ!

ಭಾರತ ಆರ್ಥಿಕವಾಗಿ ಹಿಂದುಳಿತ ರೈತ ವರ್ಗವನ್ನು ಮಾತ್ರ ಹೊಂದಿಲ್ಲ. ನಮ್ಮ ನೆಲದಲ್ಲೂ ಶ್ರೀಮಂತ ಕೃಷಿಕರ ಸಂಖ್ಯೆ ಇದೆ. ಸರಿಯಾದ ಮಾರ್ಗದಲ್ಲಿ ಕೃಷಿ ಮಾಡಿದ್ರೆ ಹೆಚ್ಚಿನ ಹಣ ಗಳಿಕೆ ಸಾಧ್ಯ ಎಂಬುದನ್ನು ಅವರು ಸಾಭೀತುಪಡಿಸಿದ್ದಾರೆ.
 

Meghalaya Farmers Earn So Much Money In A Month Even Those Working In MNC  roo

ಭಾರತದ ಬೆನ್ನೆಲುಬು ರೈತರು. ಭಾರತ ಕೃಷಿ ಜೀವನವನ್ನು ನಂಬಿದೆ. ಆದ್ರೆ ನಮಗೆ ಅನ್ನ ನೀಡುವ ರೈತರ ಜೀವನ ಹಸನಾಗಿಲ್ಲ. ದೇಶದಲ್ಲಿ ರೈತರ ಸ್ಥಿತಿ ತುಂಬಾ ಹೀನಾಯವಾಗಿದೆ. ಒಂದು ಬಾರಿ ಅತಿವೃಷ್ಟಿ, ಇನ್ನೊಂದು ಬಾರಿ ಅನಾವೃಷ್ಟಿ ಮಧ್ಯೆ ಬೆಲೆ ಏರಿಳಿತಗಳು ರೈತರನ್ನು ತತ್ತರಿಸುವಂತೆ ಮಾಡಿವೆ. ಬೆಳೆಗಳ ಬೆಲೆ ಇಳಿಯುತ್ತಿದ್ದಂತೆ ರೈತರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸ್ತಾರೆ. ವರ್ಷವಿಡಿ ದುಡಿದ್ರೂ ಸಾಫ್ಟ್ ವೇರ್ ಇಂಜಿನಿಯರ್ ಗಳ ಒಂದು ತಿಂಗಳ ಸಂಬಳದಷ್ಟು ಹಣ ಉಳಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈಗಿನ ಯುವಕರು ಕೃಷಿ ಬಿಟ್ಟು ಬೇರೆ ಕ್ಷೇತ್ರಗಳಿಗೆ ಕಾಲಿಡ್ತಿದ್ದಾರೆ. ಹಾಗಾಗಿಯೇ ಹಳ್ಳಿಗಳು ಖಾಲಿಯಾಗ್ತಿವೆ. 

ಹಾಗಂತ ದೇಶದ ಎಲ್ಲ ರೈತರ ಪರಿಸ್ಥಿತಿ ದಯನೀಯವಾಗಿದೆ ಎಂದಲ್ಲ. ಭಾರತ (India) ದಲ್ಲಿ ಸಮೃದ್ಧ ಜೀವನ ನಡೆಸುತ್ತಿರುವ ರೈತರ ಸಂಖ್ಯೆಯೂ ಸಾಕಷ್ಟಿದೆ. ಈಶಾನ್ಯ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ರೈತರು ತಮ್ಮ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ. ಇಲ್ಲಿನ ರೈತರು ಆರ್ಥಿಕವಾಗಿ ಸದೃಢವಾಗಿದ್ದು, ಎಂಎನ್ ಸಿ (MNC) ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಿಂತ ಹೆಚ್ಚು ಹಣವನ್ನು ಇಲ್ಲಿನ ರೈತರು ಸಂಪಾದನೆ ಮಾಡ್ತಿದ್ದಾರೆ. ರೈತ (Farmer) ರು ತಂಪಾಗಿರುವ ಆ ರಾಜ್ಯದ ವಿವರ ಇಲ್ಲಿದೆ.

Free Sewing Machine Scheme : ಮಹಿಳೆಯರು ಸ್ವಾವಲಂಬಿಯಾಗಲು ಇದೇ ಬೆಸ್ಟ್ ವೇ!

ಈ ರಾಜ್ಯದ ರೈತರಿಗಿದೆ ಆರ್ಥಿಕ  ಬಲ : ಸುಖಿ ರೈತರನ್ನು ಹೊಂದಿರುವ ನಮ್ಮ ದೇಶದ ಆ ರಾಜ್ಯದ ಹೆಸರು ಮೇಘಾಲಯ. ಅಂಕಿ ಅಂಶದ ಪ್ರಕಾರ, ಮೇಘಾಲಯದಲ್ಲಿರುವ ರೈತರು, ಭಾರತದ ಉಳಿದ ಎಲ್ಲ ರಾಜ್ಯಗಳ ರೈತರಿಗಿಂತ ಶ್ರೀಮಂತರು. ಮೇಘಾಲಯದ ರೈತರ ಮಾಸಿಕ ಆದಾಯ 2019 ರಲ್ಲಿ ಸುಮಾರು 29,348 ರೂಪಾಯಿಯಿತ್ತು.

ಮೇಘಾಲಯದ ರೈತರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಇಲ್ಲಿನ ರೈತರು ತಮ್ಮ ಹೊಲಗಳಲ್ಲಿ ಯೂರಿಯಾ ಗೊಬ್ಬರವನ್ನು ಬಳಸುವುದಿಲ್ಲ ಎಂಬುದು ಒಂದು ವಿಶೇಷ. ಇಲ್ಲಿನ ರೈತರು ಸಾಂಪ್ರದಾಯಿಕ ಬೀಜಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ತೋಟಗಾರಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಮೇಘಾಲಯದ ರೈತರು ಅಕ್ಕಿ ಮತ್ತು ಜೋಳವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ. ತೋಟಗಾರಿಕಾ ಬೆಳೆಯಾದ (Horticulture Crops) ಅನಾನಸ್, ಹಲಸು, ಬಾಳೆ ಮತ್ತು ಕಿತ್ತಳೆ ಇತ್ಯಾದಿ ಬೆಳೆಗಳಿಗಿಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಶುಂಠಿ ಮತ್ತು ಅರಿಶಿನವನ್ನು ಸಹ ಮೇಘಾಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಮೇಘಾಲಯದ ಅರಿಶಿನಕ್ಕೆ ಭಾರತದಲ್ಲಿ ವಿಶೇಷ ಸ್ಥಾನವಿದೆ. 

Personal Finance : ಶೇ. 7.5ರಷ್ಟು ಬಡ್ಡಿ ಬೇಕಾ? ಈ ಸೇವಿಂಗ್ಸ್ ಟಿಪ್ಸ್ ಟ್ರೈ ಮಾಡಿ

ಮೇಘಾಲಯದ ರೈತರಿಗೆ ಪ್ರಕೃತಿ ನೆರವು : ಕೃಷಿಗೆ ನೀರು ಮತ್ತು ಉತ್ತಮ ಹವಾಮಾನ ಬಹಳ ಮುಖ್ಯ. ಮೇಘಾಲಯದ ರೈತರಿಗೆ ಅಲ್ಲಿನ ಮಳೆ ಹಾಗೂ ವಾತಾವರಣ ಕೈ ಹಿಡಿದಿದೆ. ಉತ್ತಮ ಬೆಳೆ ಬೆಳೆದು ಕೈತುಂಬ ಹಣ ಸಂಪಾದನೆ ಮಾಡಲು ಅಲ್ಲಿನ ಹವಾಮಾನ ನೆರವಾಗಿದೆ. ಮೇಘಾಲಯದಲ್ಲಿ ಹೆಚ್ಚು ಮಳೆ ಬೀಳುವ ಕಾರಣ ಅಲ್ಲಿನ ರೈತರಿಗೆ ನೀರಿನ ಸಮಸ್ಯೆ ಕಾಡುವುದಿಲ್ಲ.  

ಅತ್ಯಂತ ಶ್ರೀಮಂತ ರೈತರ ಪಟ್ಟಿಯಲ್ಲಿದೆ ಈ ರಾಜ್ಯ : ಮೇಘಾಲಯದ ನಂತ್ರ ಅತ್ಯಂತ ಶ್ರೀಮಂತ ರೈತರನ್ನು ಹೊಂದಿರುವ ರಾಜ್ಯವೆಂದ್ರೆ ಪಂಜಾಬ್. ಅದ್ರ ನಂತ್ರ ಹರ್ಯಾಣ ಬರುತ್ತದೆ. ಪಂಜಾಬ್‌ನಲ್ಲಿ ಅವರ ಮಾಸಿಕ ಆದಾಯ 26,701 ರೂಪಾಯಿ ಮತ್ತು ಹರಿಯಾಣದಲ್ಲಿ ರೈತರ ಮಾಸಿಕ ಆದಾಯ  22,841 ರೂಪಾಯಿ ಆಗಿದೆ. 2019ರಲ್ಲಿ ನಡೆದ ಸಮೀಕ್ಷೆ ಪ್ರಕಾರ, ಅರುಣಾಚಲ ಪ್ರದೇಶ ರೈತರ ಮಾಸಿಕ ಆದಾಯ 19,225 ರೂಪಾಯಿ ಇದ್ರೆ ಸಿಕ್ಕಿಂ ರೈತರ ಆದಾಯ 12,447 ರೂಪಾಯಿಯಿದೆ.
 
ಹೆಚ್ಚು ಶ್ರೀಮಂತ ರೈತರೇ ಸರ್ಕಾರದ ಕೆಲ ಯೋಜನೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಾರೆ. ದೆಹಲಿಯಲ್ಲಿ ಕೂಡ ಮೇಘಾಲಯ ಸೇರಿದಂತೆ ಅನೇಕ ರಾಜ್ಯಗಳ ರೈತರು ಹಿಂದಿನ ವರ್ಷ ಕೃಷಿ ಕಾನೂನು ವಿರೋಧಿಸಿ ಹೋರಾಟ ನಡೆಸಿದ್ದರು. 
 

Latest Videos
Follow Us:
Download App:
  • android
  • ios