ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಐಐಟಿ ವಿದ್ಯಾರ್ಥಿನಿ ಪ್ಯಾಕೇಜ್ ಕೇಳಿದ್ರೆ ಶಾಕ್ ಆಗ್ತೀರಾ!
ಇತ್ತೀಚಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು ವಿದ್ಯಾರ್ಥಿಗಳಿಗೆ ದೊಡ್ಡ ಮೊತ್ತದ ಪ್ಯಾಕೇಜ್ ನೀಡುತ್ತಿವೆ. ಐಐಟಿ ಭುವನೇಶ್ವರ್ ವಿದ್ಯಾರ್ಥಿನಿ ಸಾಯಿ ಗಿರಿ ನಂದಿನಿ ಅವರಿಗೆ ಕೂಡ 2022ನೇ ಸಾಲಿನ ಪ್ಲೇಸ್ ಮೆಂಟ್ ಡ್ರೈವ್ ನಲ್ಲಿ 55ಲಕ್ಷ ರೂ. ವಾರ್ಷಿಕ ಪ್ಯಾಕೇಜ್ ಉದ್ಯೋಗ ಆಫರ್ ನೀಡಲಾಗಿದೆ.ಇದು ಐಐಟಿ ಭುವನೇಶ್ವರದ ಮಟ್ಟಿಗೆ ಈ ತನಕದ ದಾಖಲೆಯ ಪ್ಯಾಕೇಜ್ ಆಗಿದೆ.
Business Desk:ಇಂದು ಕ್ಯಾಂಪಸ್ ಸಂದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಅಧಿಕ ವೇತನದ ಉದ್ಯೋಗ ಆಫರ್ ಗಳನ್ನು ನೀಡೋದು ಸಾಮಾನ್ಯ. ಆದರೆ, ಕೆಲವರ ಪ್ಯಾಕೇಜ್ ಕೇಳಿದ್ರೆ ಮಾತ್ರ ಶಾಕ್ ಆಗೋದು ಗ್ಯಾರಂಟಿ. ಐಐಟಿ ಭುವನೇಶ್ವರ್ ವಿದ್ಯಾರ್ಥಿನಿ ಸಾಯಿ ಗಿರಿ ನಂದಿನಿ ಉದಾತು ಅವರಿಗೆ 2022ನೇ ಸಾಲಿನ ಪ್ಲೇಸ್ ಮೆಂಟ್ ಡ್ರೈವ್ ನಲ್ಲಿ 55ಲಕ್ಷ ರೂ. ವಾರ್ಷಿಕ ಪ್ಯಾಕೇಜ್ ನ ಉದ್ಯೋಗ ಆಫರ್ ನೀಡಿದೆ. ಉದಾತು ಐಐಟಿ ಭುವನೇಶ್ವರದ ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ. ಸಾಯಿ ಗಿರಿ ಅವರಿಗೆ ನೀಡಿರುವ ಪ್ಯಾಕೇಜ್ ಈ ಸಂಸ್ಥೆಯಲ್ಲಿಯೇ ವಿದ್ಯಾರ್ಥಿಯೊಬ್ಬರಿಗೆ ನೀಡಿರುವ ಅತ್ಯಧಿಕ ಪ್ರೀ ಪ್ಲೆಸ್ ಮೆಂಟ್ ಆಫರ್ (ಇಪಿಒ) ಆಗಿದೆ. ಸಾಯಿ ಗಿರಿ ಅವರಿಗಿಂತ ಮುನ್ನ ಐಐಟಿ ಭುವನೇಶ್ವರದ ವಿದ್ಯಾರ್ಥಿಗೆ ಆಫರ್ ನೀಡಿರುವ ಅತ್ಯಧಿಕ ವೇತನ ಪ್ಯಾಕೇಜ್ 45ಲಕ್ಷ ರೂ. ಆಗಿತ್ತು.
ಪ್ಲೆಸ್ ಮೆಂಟ್ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ನಿರ್ವಹಣೆ ತೋರಿರುವ ಬಗ್ಗೆ ಐಐಟಿ ಭುವನೇಶ್ವರ್ ನಿರ್ದೇಶಕ ಪ್ರೊ. ಶ್ರೀಪದ್ ಕರ್ಮಲ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವು ವಿಶಿಷ್ಟ ಹುದ್ದೆಗಳಿಗೆ ಅನೇಕ ಕಂಪನಿಗಳು ಮಹಿಳಾ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡಿರೋದಾಗಿ ಕರ್ಮಲ್ಕರ್ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿಗೆ ದೋಷ ಪೂರಿತ ಟ್ಯಾಬ್ ಪೆನ್ ಕಳಿಸಿದ ಅಮೆಜಾನ್ ಕಂಪನಿಗೆ ₹60 ಸಾವಿರ ದಂಡ!
ಇನ್ನು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಆಂಡ್ ಟೆಕ್ನಾಲಜಿ ಅಲಹಬಾದ್ ಎಂ.ಟೆಕ್ ವಿದ್ಯಾರ್ಥಿನಿ ಪ್ರಥಮ್ ಪ್ರಕಾಶ್ ಗುಪ್ತ ಗೂಗಲ್ ಸಂಸ್ಥೆಯಿಂದ 1.4 ಕೋಟಿ ರೂ. ವಾರ್ಷಿಕ ಪ್ಯಾಕೇಜ್ ಜಾಬ್ ಆಫರ್ ಸ್ವೀಕರಿಸಿದ್ದರು. ಈ ರೆಕಾರ್ಡ್ ಬ್ರೇಕಿಂಗ್ ಉದ್ಯೋಗಾವಕಾಶವನ್ನು ಗೂಗಲ್ 2022ರಲ್ಲಿ ನೀಡಿತ್ತು. ಅಂದರೆ ಪ್ರಥಮ್ ಗುಪ್ತ ಅವರಿಗೆ ತಿಂಗಳಿಗೆ ಅಂದಾಜು 11.6ಲಕ್ಷ ರೂ. ವೇತನ. ಪ್ರಥಮ್ ಗುಪ್ತ ಅವರನ್ನು ಗೂಗಲ್ ಲಂಡನ್ ಶಾಖೆಗೆ ಸಾಫ್ಟವೇರ್ ಇಂಜಿನಿಯರ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ. ಪ್ರಥಮ್ ಗುಪ್ತ 2022ರ ಆಗಸ್ಟ್ ನಲ್ಲಿ ಗೂಗಲ್ ಸೇರಿದ್ದರು.
'ಕಳೆದ ಕೆಲವು ತಿಂಗಳಲ್ಲಿ ವಿಶ್ವದ ಅತೀದೊಡ್ಡ ಸಂಸ್ಥೆಗಳಿಂದ ಅತ್ಯದ್ಭುತ ಉದ್ಯೋಗಾವಕಾಶಗಳು ದೊರಕಿರೋದಕ್ಕೆ ನಾನು ಪುಣ್ಯ ಮಾಡಿದ್ದೆ. ಗೂಗಲ್ ನಿಂದ ಸಿಕ್ಕ ಅವಕಾಶವನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ನಿಮಗೆಲ್ಲ ತಿಳಿಸಲು ನಾನು ಸಂತೋಷ ಪಡುತ್ತೇನೆ. ನಾನು ಈ ವರ್ಷ ನನ್ನ ಪದವಿ ಪೂರ್ಣಗೊಳ್ಳುತ್ತಿದ್ದಂತೆ ಶೀಘ್ರದಲ್ಲೇ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಅವರ ಲಂಡನ್ ಕಚೇರಿಗೆ ಸೇರ್ಪಡೆಗೊಳ್ಳಲಿದ್ದೇನೆ. ನನ್ನ ವೃತ್ತಿ ಬದುಕಿನ ಈ ಹೊಸ ಹಂತದ ಬಗ್ಗೆ ತುಂಬಾ ಕಾತರನಾಗಿದ್ದೇನೆ' ಎಂದು ಲಿಂಕ್ಡ್ಇನ್ ನಲ್ಲಿ ಪ್ರಥಮ್ ಗುಪ್ತ ಗೂಗಲ್ ಆಫರ್ ಒಪ್ಪಿಕೊಂಡ ಬಳಿಕ ಬರೆದುಕೊಂಡಿದ್ದರು.
ಆದಾಯದ ಬಹುಪಾಲು ದಾನ ಮಾಡುವ ನಿರ್ಧಾರ ಮಾಡಿದ ಜಿರೋಧಾ ಸಂಸ್ಥಾಪಕ ನಿಖಿಲ್ ಕಾಮತ್!
ಐಐಟಿ ಮದ್ರಾಸ್ ಸಾಧನೆ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್ 2021-22ರ ಶೈಕ್ಷಣಿಕ ವರ್ಷದಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಭರ್ಜರಿ ರೆಕಾರ್ಡ್ ಮಾಡಿದೆ. ಕ್ಯಾಂಪಸ್ ಪ್ಲೇಸ್ಮೆಂಟ್ನಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗ ಕೊಡುಗೆಗಳನ್ನು ದಾಖಲಿಸಿದೆ. IIT ಮದ್ರಾಸ್ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳ 1 ಮತ್ತು 2 ನೇ ಹಂತಗಳಲ್ಲಿ 380 ಕಂಪನಿಗಳಿಂದ 1,199 ಉದ್ಯೋಗ ಆಫರ್‌ಗಳನ್ನು ಪಡೆದುಕೊಂಡಿದೆ. ಈ ಪೈಕಿ ಸರಾಸರಿ ವೇತನವು 21.48 ಲಕ್ಷ ರೂ. ಹಾಗೂ ಅತ್ಯಧಿಕ ವೇತನವು 2,50,000 ಅಮೆರಿಕನ್ ಡಾಲರ್ ಅಂದ್ರೆ 19,851,700 ರೂ. ಆಗಿದೆ! ಈ ಮೂಲಕ ಜಾಬ್ ಪ್ಲೇಸ್ಮೆಂಟ್ನಲ್ಲಿ ಐಐಟಿ ಮದ್ರಾಸ್ ಸಾರ್ವಕಾಲಿಕ ದಾಖಲೆಗೆ ಸಾಕ್ಷಿಯಾಗಿದೆ. ಐಐಟಿ ಮದ್ರಾಸ್ ಸಂಸ್ಥೆಯ ಪ್ರಕಾರ, ಉದ್ಯೋಗಕ್ಕಾಗಿ ನೋಂದಾಯಿಸಿದ ಶೇಕಡಾ 80 ರಷ್ಟು ವಿದ್ಯಾರ್ಥಿಗಳು ಜಾಬ್ ಆಫರ್ ಪಡೆದುಕೊಂಡಿದ್ದಾರೆ.