Asianet Suvarna News Asianet Suvarna News

ಐಐಟಿ ಸೀಟು ಪಡೆಯಲು ವಿಫಲನಾದ ಈತ 25 ಸಾವಿರ ಕೋಟಿ ಮೌಲ್ಯದ ಕಂಪನಿ ಮಾಲೀಕನಾಗಿದ್ದು ಹೇಗೆ ಗೊತ್ತಾ?

ಐಐಟಿಯಲ್ಲಿ ಓದಬೇಕೆಂಬ ಈತನ ಕನಸು ಈಡೇರಲಿಲ್ಲ. ಆದರೆ, ಐಐಟಿ ಪದವೀಧರರಿಗಿಂತ ತಾನೇನು ಕಡಿಮೆಯಿಲ್ಲ ಎಂಬುದನ್ನು ಉದ್ಯಮ ರಂಗದಲ್ಲಿ ಈತ ಸಾಧಿಸಿ ತೋರಿಸಿದ್ದಾನೆ. 25000 ಕೋಟಿ ಮೌಲ್ಯದ ಗ್ರೋ ಕಂಪನಿಯ ಮಾಲೀಕನಾಗಿದ್ದಾನೆ. 


 

Meet Neeraj Singh who failed to crack IIT co founded Rs 25000 crore company anu
Author
First Published Jan 18, 2024, 5:23 PM IST

Business Desk: ಜೀವನ ಎಲ್ಲಿ ಬೇಕಾದರೂ ತಿರುವು ಪಡೆಯಬಹುದು. ಹಾಗೆಯೇ ಅವಕಾಶಗಳು ಯಾವ ರೂಪದಲ್ಲಿ ಬೇಕಾದರೂ ಸಿಗಬಹುದು. ಆದರೆ, ಅದನ್ನು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಕಲೆ ನಮಗೆ ತಿಳಿದಿರಬೇಕು. ಆಗ ಯಶಸ್ಸು ಸಿಕ್ಕೇಸಿಗುತ್ತದೆ. ಇದಕ್ಕೆ ನೀರಜ್ ಸಿಂಗ್ ಅತ್ಯುತ್ತಮ ನಿದರ್ಶನ. ರಾಜಸ್ಥಾನದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ನೀರಜ್ ಸಿಂಗ್, ತನ್ನ ಜೀವನದ ಬಹುಪಾಲನ್ನು ಆರ್ಮಿ ಸ್ಕೂಲ್ ನಲ್ಲೇ ಕಳೆದರು. 1997ರಲ್ಲಿ ನೀರಜ್ ಸಿಂಗ್ ಅವರಿಗೆ ಮೊದಲ ಬಾರಿಗೆ ಕಂಪ್ಯೂಟರ್ ಪರಿಚಯವಾಯಿತು. ಆ ಸಮಯದಲ್ಲಿ ಕಂಪ್ಯೂಟರ್ ದಾಖಲೆಗಳ ನಿರ್ವಹಣೆಯನ್ನು ಸುಲಭಗೊಳಿಸಿದ ಕಾರಣಕ್ಕೆ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿತ್ತು. ಹೀಗಾಗಿ ಈ ಸಮಯದಲ್ಲಿ ಸಹಜವಾಗಿ ನೀರಜ್ ಸಿಂಗ್ ಕೂಡ ಕಂಪ್ಯೂಟರ್ ಕಡೆಗೆ ಆಕರ್ಷಿತರಾದರು.

ಕೇಂದ್ರ ಸರ್ಕಾರದ ಸೇವೆಗಳಲ್ಲಿ ಕಂಪ್ಯೂಟರ್ ಗಳನ್ನು ಪರಿಚಯಿಸಿದ ಬಳಿಕ ನೀರಜ್ ಅವರ ತಂದೆ ಭಾರತೀಯ ಸೇನೆಗೆ ಕಂಪ್ಯೂಟರ್ ಶಿಕ್ಷಕರಾಗಿ ನೇಮಕಗೊಂಡರು. ಹೀಗಾಗಿ ಕಂಪ್ಯೂಟರ್ ಕುರಿತ ನೀರಜ್ ಆಸಕ್ತಿ ಇನ್ನಷ್ಟು ಬೆಳೆಯಿತು. 11ನೇ ತರಗತಿಯಲ್ಲಿರುವಾಗ ನೀರಜ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಏನಾದರೂ ಸಾಧಿಸಬೇಕೆಂಬ ನಿರ್ಧಾರ ಕೈಗೊಂಡರು. ಹೀಗಾಗಿ ಐಐಟಿ ಪ್ರವೇಶ ಪರೀಕ್ಷೆಗೆ ಕೋಚಿಂಗ್ ಪಡೆಯಲು ಐಐಟಿ ಕಾನ್ಪುರಕ್ಕೆ ತೆರಳಿದರು. ಒಂದು ವರ್ಷಗಳ ಕಾಲ ಕೋಚಿಂಗ್ ಪಡೆದರೂ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ನೀರಜ್ ತೇರ್ಗಡೆ ಹೊಂದಲು ಸಾಧ್ಯವಾಗಲಿಲ್ಲ. ಹೀಗಾಗಿ ಮನೆಗೆ ಮರಳಿದರು. 

ಒಂದಲ್ಲ,ಎರಡಲ್ಲ17 ಉದ್ಯಮ ಪ್ರಾರಂಭಿಸಿದ್ರೂ ಸಿಗದ ಗೆಲುವು;ಆದ್ರೂ ಛಲ ಬಿಡದ ಈತ ಈಗ ಶತಕೋಟಿ ಕಂಪನಿ ಒಡೆಯ

ಇನ್ನು ನೀರಜ್ ಅವರ ತಂದೆ ಭಾರತದ ಹೊರಗೆ ಕೆಲಸಕ್ಕೆ ನಿಯೋಜನೆಗೊಳಿಸಲಾಯಿತು. ಈ ಸಮಯದಲ್ಲಿ ನೀರಜ್ ಕುಟುಂಬಕ್ಕೆ ಹತ್ತಿರವಾಗಲು ನಿರ್ಧರಿಸಿ ಗ್ವಾಲಿಯರ್ ಐಪಿಎಂ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್ ನಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನಕ್ಕೆ ಪ್ರವೇಶ ಪಡೆದರು. 

ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ ನೀರಜ್ ಸೆಂಟರ್ ಫಾರ್ ಡಿಪ್ಲೊಮಾ ಇನ್ ಅಡ್ವಾನ್ಸಡ್ ಕಂಪ್ಯೂಟಿಂಗ್  (CDAC) ಸೇರಿದರು. ಭಾರತದ ಮೊದಲ ಸೂಪರ್ ಕಂಪ್ಯೂಟರ್ ಪರಂ ನಿರ್ಮಾಣದಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿತ್ತು. 

ಕೋರ್ಸ್ ಅವಧಿಯಲ್ಲಿ ಅಗಾಧವಾದ ಜ್ಞಾನವನ್ನು ಗಳಿಸಿದ ಬಳಿಕ ನೀರಜ್ ಜೆಡಿಎ ಸಾಫ್ಟ್ ವೇರ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಅಲ್ಲಿ ಕೆಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ ಐವಿವೈ ಕಾಪ್ ಟೆಕ್ಸೇರಿದರು. ಇದು ಆನ್ ಲೈನ್ ಗೇಮಿಂಗ್ ಸ್ಟಾರ್ಟ್ ಅಪ್. ಆ ಬಳಿಕ ಅವರು ಕ್ಯಾಸಿನೋ ಗೇಮ್ಸ್ ನಲ್ಲಿ ಕಾರ್ಯನಿರ್ವಹಿಸಿದರು ಹಾಗೂ ಜಾಕ್ ಪಾಟ್ ಗೇಮ್ ರೂಪಿಸಿದರು. ಅಲ್ಲಿ ಕೆಲವು ಕಾಲ ಕಾರ್ಯನಿರ್ವಹಿಸಿದ ಬಳಿಕ ಒಂದು ದಿನ ನೀರಜ್ ಅವರಿಗೆ ಫ್ಲಿಪ್ ಕಾರ್ಟ್ ನಿಂದ ಕರೆ ಬಂದಿತ್ತು. ಆದರೆ, ಅವರು ಈ ಉದ್ಯೋಗ ಅವಕಾಶವನ್ನು ನಿರಾಕರಿಸಿದರು. ಆದರೆ, ಅವರ ಸ್ನೇಹಿತ ಈ ಕಂಪನಿಯಲ್ಲಿ ಅವರಿಗೆ ಉತ್ತಮ ಉದ್ಯೋಗಾವಕಾಶಗಳಿರುವ ಬಗ್ಗೆ ತಿಳಿಸಿದ್ದರು. ಹಾಗೆಯೇ ಉದ್ಯೋಗ ಕೈಗೊಳ್ಳುವಂತೆ ಉತ್ತೇಜಿಸಿದ್ದರು. ಹೀಗಾಗಿ ಅವರಿಗೆ ಮುಂದಿನ ಬಾರಿ ಕರೆ ಬಂದಾಗ ಅವರು ಜಾಬ್ ಆಫರ್ ಅನ್ನು ಸ್ವೀಕರಿಸಿದರು. 

ಕೊರೊನಾ ನಂತ್ರ ಬದಲಾಯ್ತು ಲಕ್, ಬ್ಯುಸಿನೆಸ್ ಆರಂಭಿಸಿದ ಕೂಲಿ ಯಶಸ್ವಿ!

ಫ್ಲಿಪ್ ಕಾರ್ಟ್ ನಲ್ಲಿ ನೀರಜ್ ಸಿಂಗ್ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ಅವರು ಲಲಿತ್ ಕೆಶ್ರಿ, ಹರ್ಷ್ ಜೈನ್ ಹಾಗೂ ಇಶಾನ್ ಬನ್ಸಾಲ್ ಅವರ ಜೊತೆಗೆ ಗ್ರೋ ಸಹಸಂಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. 2017ರಲ್ಲಿ ನಾಲ್ಕು ಸದಸ್ಯರು ಒಟ್ಟಾಗಿ ಗ್ರೋ (Groww) ಅಪ್ಲಿಕೇಷನ್ ಪ್ರಾರಂಭಿಸಿದರು. ನೀರಜ್ ಸಿಂಗ್ ಈ ಕಂಪನಿಯ ಸಿಟಿಒ ಆಗಿ ಕಾರ್ಯನಿರ್ವಹಿಸಿದರು. ಇಂದು ಈ ಕಂಪನಿಯ ಮೌಲ್ಯ 25,000 ಕೋಟಿ ರೂ. ಗ್ರೋ ಷೇರುಪೇಟೆ ಹೂಡಿಕೆಗೆ ಸಂಬಂಧಿಸಿದ ಅಪ್ಲಿಕೇಷನ್ ಆಗಿದೆ. 

Follow Us:
Download App:
  • android
  • ios