ಭಾರತದ ಮೊದಲ ಖಾಸಗಿ ಗಿರಿಧಾಮ ಲವಾಸಾ ಖರೀದಿಸಿದ ಮುಂಬೈ ಉದ್ಯಮಿ; ಯಾರು ಈ ಅಜಯ್ ಹರಿನಾಥ್ ಸಿಂಗ್?
ಭಾರತದ ಮೊದಲ ಖಾಸಗಿ ಗಿರಿಧಾಮ ಲವಾಸಾ ಈಗ ಮುಂಬೈ ಮೂಲದ ಉದ್ಯಮಿ ಅಜಯ್ ಹರಿನಾಥ್ ಸಿಂಗ್ ಅವರ ಡಾರ್ವಿನ್ ಪ್ಲಾಟ್ ಫಾರ್ಮ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ತೆಕ್ಕೆಗೆ ಬಿದ್ದಿದೆ. 1814 ಕೋಟಿ ರೂ.ಗೆ ಲವಾಸಾವನ್ನು ಸ್ವಾಧೀನಪಡಿಸಿಕೊಂಡಿದೆ. ಹಾಗಾದ್ರೆ ಈ ಅಜಯ್ ಹರಿನಾಥ್ ಸಿಂಗ್ ಯಾರು?
Business Desk:ಮುಂಬೈ ಮೂಲದ ಉದ್ಯಮಿ ಅಜಯ್ ಹರಿನಾಥ್ ಸಿಂಗ್ ಅವರ ಡಾರ್ವಿನ್ ಪ್ಲಾಟ್ ಫಾರ್ಮ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಡಿಪಿಐಎಲ್) ಭಾರತದ ಮೊದಲ ಖಾಸಗಿ ಗಿರಿಧಾಮ ಲವಾಸಾವನ್ನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸುವ ಬಿಡ್ ಜಯಿಸಿದೆ. ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರ (ಎನ್ ಸಿಎಲ್ ಟಿ) ಡಾರ್ವಿನ್ ಪ್ಲ್ಯಾಟ್ ಫಾರ್ಮ್ ಇನ್ಫ್ರಾಸ್ಟ್ರಚರ್ ಲಿಮಿಟೆಡ್ (ಡಿಪಿಐಎಲ್) ಲವಾಸಾಕ್ಕೆ ಸಂಬಂಧಿಸಿ ಸಿದ್ಧಪಡಿಸಿರುವ 1,814 ಕೋಟಿ ರೂ. ಅಭಿವೃದ್ಧಿ ಯೋಜನೆಗೆ ಅನುಮೋದನೆ ಕೂಡ ನೀಡಿದೆ. ಲವಾಸಾವನ್ನು ಈ ಹಿಂದೆ ಹಿಂದೂಸ್ತಾನ್ ಕನ್ ಸ್ಟ್ರಕ್ಷನ್ ಕಂಪನಿ (ಎಚ್ ಸಿಸಿ) ಅಭಿವೃದ್ಧಿಪಡಿಸಿತ್ತು. ಆದರೆ, ಈ ಸಂಸ್ಥೆ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿ ದಿವಾಳಿಯಾಗಿದ್ದು, ಕೆಲವೊಂದು ಬಾಧ್ಯತೆಗಳನ್ನು ಪೂರೈಸಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಎನ್ ಸಿಎಲ್ ಟಿ ಡಾರ್ವಿನ್ ರೆಸಲ್ಯೂಶನ್ ಯೋಜನೆಗೆ ಅನುಮೋದನೆ ನೀಡಿದೆ. ಸಾಲದಾತರು, ಮನೆ ಖರೀದಿದಾರರಿಗೆ ಸೂಕ್ತ ಹಣಕಾಸಿನ ಭದ್ರತೆ ನೀಡುವ ಭರವಸೆಯನ್ನು ಕೂಡ ಡಿಪಿಐಎಲ್ ನೀಡಿದೆ. ಲವಾಸಾ ಯೋಜನೆಯನ್ನು ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿ (ಎಚ್ ಸಿಸಿ) ಅಭಿವೃದ್ಧಿಪಡಿಸಿದೆ. ಪುಣೆ ಸಮೀಪದ ಪಶ್ಚಿಮ ಘಟ್ಟಗಳ ಕಣಿವೆಯಲ್ಲಿ 25,000 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಯುರೋಪಿಯನ್ ಶೈಲಿಯ ನಗರ ನಿರ್ಮಿಸುವ ಗುರಿಯನ್ನು ಈ ಸಂಸ್ಥೆ ಹೊಂದಿತ್ತು.
ಪುಣೆಯಿಂದ 65ಕಿ.ಮೀ. ದೂರದಲ್ಲಿರುವ ಲವಾಸಾ ಪಶ್ಚಿಮ ಘಟ್ಟಗಳ ಶ್ರೇಣೆಯಿಂದ ಆವೃತ್ತವಾಗಿರುವ ಮುಲ್ಶಿ ಕಣಿವೆಯಲ್ಲಿದೆ. ವಾರ್ಸ್‌ಗಾಂವ್ ನದಿ ದಡದಲ್ಲಿರುವ ಕಾರಣ ಜಲಕ್ರೀಡೆಗಳಿಗೆ ಕೂಡ ಇದು ಜನಪ್ರಿಯ ತಾಣವಾಗಿದೆ. ಉತ್ತಮ ಯೋಜನೆಯ ಹೊರತಾಗಿ ಕೂಡ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ ಕಾರಣಕ್ಕೆ ಈ ನಗರದ ಯೋಜನೆಯನ್ನು ಸಮರ್ಪಕವಾಗಿ ಪೂರ್ಣಗೊಳಿಸಲು ಎಚ್ ಸಿಸಿಗೆ ಸಾಧ್ಯವಾಗಿಲ್ಲ.
ಎಂಜಿನಿಯರ್ ವೃತ್ತಿ ಬಿಟ್ಟು ಲಕ್ಷ ಲಕ್ಷ ದುಡಿಯೋ ಈತನ ಬ್ಯಸಿನೆಸ್ ಯಾವ್ದು?
ವಾರ್ಸ್‌ಗಾಂವ್ ನದಿಗೆ ಅಣೆಕಟ್ಟು ನಿರ್ಮಿಸಲು ಹಾಗೂ ನಗರದ ಅಭಿವೃದ್ಧಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಲವಾಸಾ ಕಾರ್ಪೋರೇಷನ್ ಗೆ ಅನುಮತಿ ನೀಡಲಾಗಿತ್ತು. ಈ ಯೋಜನೆಯನ್ನು 2000ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಹಾಗೆಯೇ 2021ರ ವೇಳೆಗೆ ಪೂರ್ಣಗೊಳಿಸುವ ಗುರಿ ಇತ್ತು. ಆದರೆ, ಪರಿಸರ ಕ್ಲಿಯರೆನ್ಸ್ ಸಮಸ್ಯೆಗಳು, ಭೂಸ್ವಾಧೀನ ವಿವಾದಗಳು, ಹಣಕಾಸಿನ ಮುಗ್ಗಟ್ಟು ಹಾಗೂ ಕಾನೂನು ತೊಡಕುಗಳಂತಹ ಅನೇಕ ಸವಾಲುಗಳು ನಂತರ ದಿನಗಳಲ್ಲಿ ಎದುರಾದವು. ರಾಜ್ ಇನ್ಫ್ರಾಸ್ಟ್ರಚರ್ ಡೆವಲಪ್ ಮೆಂಟ್ ಇಂಡಿಯಾ ಎಂಬ ಕ್ರೆಡಿಟರ್ಸ್ ಕಂಪನಿ ಲವಾಸಾ ವಿರುದ್ಧ ವಂಚನೆ ಪ್ರಕರಣವನ್ನು 2018ರ ಆಗಸ್ಟ್ ನಲ್ಲಿ ದಾಖಲಿಸಿತ್ತು ಕೂಡ.
ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟೋದು ಈ ವ್ಯಕ್ತಿ, ಅಂಬಾನಿ-ಅದಾನಿ, ಟಾಟಾ ಯಾವುದೇ ಉದ್ಯಮಿ ಅಲ್ಲ!
ಯಾರು ಈ ಅಜಯ್ ಹರಿನಾಥ್ ಸಿಂಗ್?
ಅಜಯ್ ಹರಿನಾಥ್ ಸಿಂಗ್ ಮುಂಬೈ ಮೂಲದ ಉದ್ಯಮಿಯಾಗಿದ್ದು, ಡಾರ್ವಿನ್ ಪ್ಲಾಟ್ ಫಾರ್ಮ್ ಗ್ರೂಪ್ ಆಫ್ ಕಂಪನಿಗಳ ಮುಖ್ಯಸ್ಥ ಹಾಗೂ ಎಂಡಿ ಆಗಿದ್ದಾರೆ. ಈ ಉದ್ಯಮ ಸಂಸ್ಥೆ ರಿಯಾಲ್ಟಿ, ಅಟೋ, ರಿಟೇಲ್, ಇನ್ಫ್ರಾ, ಶಿಪ್ಪಿಂಗ್, ಮೈನಿಂಗ್, ರಿಫೈನರೀಸ್ ಹಾಗೂ ಹಣಕಾಸು ಸೇರಿದಂತೆ ವಿವಿಧ ವಲಯಗಳಲ್ಲಿ ಉದ್ಯಮ ಹೊಂದಿದೆ. ಹಾಗೆಯೇ ಈ ಸಂಸ್ಥೆ ನಿವ್ವಳ ಸಂಪತ್ತು 68,000 ಕೋಟಿ ರೂ. ಈ ಗ್ರೂಪ್ 11 ರಾಷ್ಟ್ರಗಳಲ್ಲಿ ಕನಿಷ್ಠ 21 ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಹಾಗೂ ಉದ್ಯಮಗಳನ್ನುಹೊಂದಿದೆ. ಇನ್ನು ಹರಿನಾಥ್ ಸಿಂಗ್ ಮುಂಬೈ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. ಇವರು 2009ರಲ್ಲಿ ಡಾರ್ವಿನ್ ಗ್ರೂಪ್ ಸ್ಥಾಪಿಸಿದರು. ಲವಾಸಾದ ಹೊರತಾಗಿ ಸಿಂಗ್ ನೇತೃತ್ವದ ಡಾರ್ವಿನ್ ಪ್ಲಾಟ್ ಫಾರ್ಮ್ ಗ್ರೂಪ್ ಜೆಟ್ ಏರ್ ವೈಸ್, ಏರ್ ಇಂಡಿಯಾ ಹಾಗೂ ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾದಂತಹ ಹೈ ಪ್ರೋಫೈಲ್ ಸಂಸ್ಥೆಗಳ ಬಿಡ್ಡಿಂಗ್ ನಲ್ಲಿ ಪಾಲ್ಗೊಂಡಿತ್ತು. 2022ರಲ್ಲಿ ಸಿಂಗ್ ಅನಿಲ್ ಅಂಬಾನಿ ಅವರ ನಷ್ಟದಲ್ಲಿದ್ದ ರಿಲಯನ್ಸ್ ಕ್ಯಾಪಿಟಲ್ ಅನ್ನು ಖರೀದಿಗೆ ಇತರ ಸಂಸ್ಥೆಗಳಿಗೆ ಪೈಪೋಟಿ ನೀಡಿತ್ತು.