ಪುಟ್ಟ ಸೋಡಾ ಅಂಗಡಿಯಲ್ಲಿ ಜನ್ಮತಾಳಿದ ಭಾರತದ ಈ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಈಗ ಅಮೆರಿಕದಲ್ಲೂ ಫೇಮಸ್

ವಾಡಿಲಾಲ್ ಇಂದು ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಆಗಿ ಬೆಳೆದಿದೆ.ಆದರೆ, ಈ ಕಂಪನಿ ಹುಟ್ಟಿದ್ದು ಪುಟ್ಟ ಸೋಡಾ ಅಂಗಡಿಯಿಂದ ಎಂಬ ಸತ್ಯ ಬಹುತೇಕರಿಗೆ ತಿಳಿದಿಲ್ಲ. 
 

Meet man who sold fountain soda on street built Rs 1700 crore ice cream empire anu

Business Desk:ವಾಡಿಲಾಲ್ ಭಾರತದ ಅತ್ಯಂತ ದೊಡ್ಡ ಐಸ್ ಕ್ರೀಮ್ ಬ್ರ್ಯಾಂಡ್ ಗಳಲ್ಲೊಂದು. ಇಂದು ಈ ಕಂಪನಿ ಮೌಲ್ಯ ಸಾವಿರಾರು ಕೋಟಿ ರೂ. ಆದರೆ, ಈ ಕಂಪನಿ ಹುಟ್ಟಿನ ಕಥೆ ರೋಚಕವಾಗಿದೆ. ಈ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ 1907ರಲ್ಲಿ ಗುಜರಾತಿನ ಅಹ್ಮದಾಬಾದ್ ಸಣ್ಣ ಗಲ್ಲಿಯ ಸೋಡಾ ಶಾಪ್ ನಲ್ಲಿ ಜನ್ಮ ತಾಳಿತು. ಈ ಐಸ್ ಕ್ರೀಮ್ ಕಂಪನಿ ಸ್ಥಾಪಕರು ವಾಡಿಲಾಲ್ ಗಾಂಧಿ. ಇವರು ಸ್ವಾತಂತ್ರ್ಯ ಪೂರ್ವದಲ್ಲೇ ಸೋಡಾ ಅಂಗಡಿ ಪ್ರಾರಂಭಿಸಿದ್ದರು. ಮಧ್ಯಮ ವರ್ಗದ ಕುಟುಂಬ ಹಿನ್ನೆಲೆ ಹೊಂದಿದ್ದ ವಾಡಿಲಾಲ್ ಅವರು ಶ್ರಮಪಟ್ಟು ಕೆಲಸ ಮಾಡುತ್ತಿದ್ದರು ಕೂಡ. ಪರಿಣಾಮ ಗುಜರಾತ್ ನಲ್ಲಿ ವಾಡಿಲಾಲ್ ಗಾಂಧಿ ಅವರ ಸೋಡಾ ಶಾಪ್ ಸಾಕಷ್ಟು ಜನಪ್ರಿಯತೆ ಗಳಿಸಿತು. ಈ ನಡುವೆ ವಾಡಿಲಾಲ್ ಸೋಡಾವನ್ನು ಐಸ್ ಕ್ರೀಮ್ ಜೊತೆಗೆ ಸೇರಿಸಿ'ಐಸ್ ಕ್ರೀಮ್ ಸೋಡಾ ಪಾಪ್ಸ್' ಮಾರಾಟ ಮಾಡಲು ಪ್ರಾರಂಭಿಸಿದರು. 1926ರಲ್ಲಿ ವಾಡಿಲಾಲ್ ಸಂಸ್ಥೆ ತನ್ನ ಮೊದಲ ಐಸ್ ಕ್ರೀಮ್ ಶಾಪ್ ಪ್ರಾರಂಭಿಸಿತು.  ಹೀಗೆ ಐಸ್ ಕ್ರೀಮ್ ಉದ್ಯಮದಲ್ಲಿ ಒಂದೊಂದೇ ಮೆಟ್ಟಿಲು ಹತ್ತುತ್ತ ಬಂದ ವಾಡಿಲಾಲ್ ಸಂಸ್ಥೆ ಇಂದು ಭಾರತದ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಆಗಿದೆ.

ವಾಡಿಲಾಲ್ ಗಾಂಧಿ ನಿಧನದ ಬಳಿಕ ಅವರ ಪುತ್ರ ರಾಂಚೋಡ್‌ ಲಾಲ್‌ ಗಾಂಧಿ ಐಸ್ ಕ್ರೀಂ ಉದ್ಯಮದ ಜವಾಬ್ದಾರಿ ವಹಿಸಿಕೊಂಡರು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನವೇ ರಾಂಚೋಡ್ ಲಾಲ್ ಗಾಂಧಿ ಜರ್ಮನಿಯಿಂದ ಐಸ್ ಕ್ರೀಮ್ ಮೇಕರ್ ತಂದಿದ್ದರು. ಈ ಮೂಲಕ ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಮುಂದಾದರು.  1970ರ ಹೊತ್ತಿಗೆ ಅಹಮದಾಬಾದ್ ನ ಹತ್ತು ಸ್ಥಳಗಳಲ್ಲಿ ವಾಡಿಲಾಲ್ ಐಸ್ ಕ್ರೀಮ್ ಶಾಪ್ ಗಳು ಪ್ರಾರಂಭವಾಗಿದ್ದವು. ಈ ಶಾಪ್ ಗಳನ್ನು ರಾಂಚೋಡ್‌ ಲಾಲ್‌ ಅವರ ಇಬ್ಬರು ಪುತ್ರರಾದ ರಾಮಚಂದ್ರ ಹಾಗೂ ಲಕ್ಷ್ಮಣ್ಗಾಂದಿ ನಿರ್ವಹಣೆ ಮಾಡುತ್ತಿದ್ದಾರೆ. 

ಅಪ್ಪನ ಪಾದರಕ್ಷೆಉದ್ಯಮ ಮುನ್ನಡೆಸಲು ಅಮೆರಿಕ ಬಿಟ್ಟು ಭಾರತಕ್ಕೆ ಮರಳಿದ ಮಗಳು ಇಂದು ಬಿಲಿಯನೇರ್ ಉದ್ಯಮಿ

1,933 ಕೋಟಿ ರೂ. ಮಾರುಕಟ್ಟೆ ಮೌಲ್ಯ
ವಾಡಿಲಾಲ್ ಅವರ ಸೋಡಾ ಉದ್ಯಮ ಇಂದು 1,933 ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿರುವ ಬೃಹತ್ ಐಸ್ ಕ್ರೀಮ್ ಕಂಪನಿಯಾಗಿ ಬೆಳೆದು ನಿಂತಿದೆ. ವಾಡಿಲಾಲ್ ಇಂದು ಭಾರತದ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಆಗಿ ಮಾತ್ರ ಬೆಳೆದು ನಿಂತಿಲ್ಲ. ಬದಲಿಗೆ ಇನ್ನೂ ಹಲವಾರು ಉದ್ಯಮಗಳನ್ನು ಈ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಈ ಎಲ್ಲ ಉದ್ಯಮ ಸಸ್ಯಹಾರಿಯಾಗಿರೋದು ವಾಡಿಲಾಲ್ ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ. ವಾಡಿಲಾಲ್ ಸಂಸ್ಥೆ ಪ್ರೀ-ಕುಕ್ಕಡ್ ಕರೀಸ್, ಬ್ರೆಡ್ ಹಾಗೂ ಇತರ ಸಸ್ಯಹಾರಿ ಉತ್ಪನ್ನಗಳು ಸೇರಿದಂತೆ ಅನೇಕ ಪ್ರೊಸೀಡ್ ಫುಡ್ ಗಳನ್ನು ಉತ್ಪಾದಿಸುವ ಸಂಸ್ಥೆಯಾಗಿ ಬೆಳೆದು ನಿಂತಿದೆ.

ತಂದೆ ಕಿರಾಣಿ ಅಂಗಡಿಯನ್ನೇ ಮಸಾಲ ಕಂಪನಿಯನ್ನಾಗಿ ಬದಲಾಯಿಸಿದ ಮಗ ಇಂದು ಬಹುಕೋಟಿ ಒಡೆಯ

ಪ್ರಸ್ತುತ ಕಲ್ಪಿತ್ ಗಾಂಧಿ ಅವರು ವಾಡಿಲಾಲ್ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ (CFO) ಆಗಿದ್ದಾರೆ. ಕಲ್ಪಿತ್ ಗಾಂದಿ ಅವರು ವಾಡಿಲಾಲ್ ಕುಟುಂಬದ ಆರನೇ ತಲೆಮಾರಿನವರಾಗಿದ್ದಾರೆ. ಇನ್ನು  ವಾಡಿಲಾಲ್ ಅಮೆರಿಕದಲ್ಲಿ ಅತ್ಯುತ್ತಮವಾಗಿ ಮಾರಾಟವಾಗುತ್ತಿರುವ ಭಾರತದ ಐಸ್ ಕ್ರೀಮ್ ಬ್ರ್ಯಾಂಡ್ ಆಗಿದೆ.  ಇನ್ನು ವಾಡಿಲಾಲ್ ಬ್ರ್ಯಾಂಡ್ ಅನೇಕ ದಾಖಲೆಗಳನ್ನು ಕೂಡ ಬರದಿದೆ. 2001ರ ನವೆಂಬರ್  ನಲ್ಲಿ 'ದ ಲಾರ್ಜೆಸ್ಟ್ ಐಸ್ ಕ್ರೀಮ್ ಸಂಡೇ' ಅನ್ನು ತಯಾರಿಸುವ ಮೂಲಕ ಕಂಪನಿಯು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು. ಈ ಬೃಹತ್ ಐಸ್ ಕ್ರೀಮ್ ತಯಾರಿಗೆ 4,950 ಲೀಟರ್ ಐಸ್ ಕ್ರೀಮ್, 125 ಕೆಜಿ ಡ್ರೈ ಫ್ರೂಟ್ಸ್, 255 ಕೆಜಿ ತಾಜಾ ಹಣ್ಣುಗಳು ಮತ್ತು 390 ಲೀಟರ್ ವಿವಿಧ ಸಾಸ್‌ಗಳನ್ನು ಬಳಸಲಾಗಿತ್ತು. ಒಟ್ಟು 180 ಜನರು ಈ ಐಸ್ ಕ್ರೀಮ್ ಸಿದ್ಧಪಡಿಸುವ ಕಾರ್ಯದಲ್ಲಿ ಕೈಜೋಡಿಸಿದ್ದರು. 

Latest Videos
Follow Us:
Download App:
  • android
  • ios