ಅಮೆರಿಕದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ ಜಯಶ್ರೀ ಉಲ್ಲಾಳ್, 18 ಸಾವಿರ ಕೋಟಿ ರೂ. ಒಡತಿಯಾಗಿದ್ದು ಹೇಗೆ?

ಭಾರತೀಯ ಮೂಲದವರು ಇಂದು ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಂಥವರಲ್ಲಿ ಜಯಶ್ರೀ ಉಲ್ಲಾಳ್ ಕೂಡ ಒಬ್ಬರು. ಅಮೆರಿಕದ  ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ18 ಸಾವಿರ ಕೋಟಿ ರೂ. ನಿವ್ವಳ ಸಂಪತ್ತು ಹೊಂದಿರುವ ಅವರ ಸಾಧನೆಯ ಹಾದಿ ಹೇಗಿತ್ತು? ಇಲ್ಲಿದೆ ಮಾಹಿತಿ. 

Meet Jayshree Ullal CEO with net worth over Rs 18000 crore one of US richest self made women anu

Business Desk: ಇಂದು ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಅವರ ಸಾಲಿನಲ್ಲೇ  ಭಾರತೀಯ ಸಂಜಾತ ಮಹಿಳಾ ಸಿಇಒಯೊಬ್ಬರ ಹೆಸರು ಕೇಳಿಬರುತ್ತದೆ. ಅವರೇ ಜಯಶ್ರೀ ಉಲ್ಲಾಳ್. 2008ನೇ ಸಾಲಿನಿಂದ ಅರಿಸ್ಟಾ ನೆಟ್ ವರ್ಕ್ ಅಧ್ಯಕ್ಷೆ ಹಾಗೂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಅನೇಕ ಮಹಿಳೆಯರಿಗೆ ಸ್ಫೂರ್ತಿಯೂ ಹೌದು. ಜಯಶ್ರೀ ಉಲ್ಲಾಳ್  ಈ ಕಂಪನಿಗೆ ಸೇರಿದ ಪ್ರಾರಂಭದಲ್ಲಿ ಕೇವಲ 50 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲ, ಕಂಪನಿಗೆ ಯಾವುದೇ ಆದಾಯವೂ ಇರಲಿಲ್ಲ.ಇಂಥ ಒಂದು ಕಂಪನಿಯನ್ನು ಜಯಶ್ರೀ ಉಲ್ಲಾಳ್ ಮುನ್ನಡೆಸಿದ ರೀತಿ ನಿಜಕ್ಕೂ ಮಾದರಿ. ಫೋರ್ಬ್ಸ್ ನಿಯತಕಾಲಿಕದ ಪ್ರಕಾರ 2023ರ ಫೆಬ್ರವರಿ 20ಕ್ಕೆ ಅನ್ವಯವಾಗುವಂತೆ  ಇವರ ನಿವ್ವಳ ಸಂಪತ್ತು 18,199 ಕೋಟಿ ರೂ. ಈ ಮೂಲಕ ಇಂದು ಜಯಶ್ರೀ ಉಲ್ಲಾಳ್ ಅಮೆರಿಕದ  ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಅರಿಸ್ಟಾ ನೆಟ್ ವರ್ಕ್ ನಲ್ಲಿ ಜಯಶ್ರೀ ಉಲ್ಲಾಳ್ ಶೇ.5ರಷ್ಟು ಷೇರುಗಳನ್ನು ಹೊಂದಿದ್ದಾರೆ. ಕಳೆದ ಕೆಲವು ದಶಕಗಳಿಂದ ಭಾರತೀಯ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸ್ಥಾನಮಾನಗಳಲ್ಲಿ ಪ್ರಗತಿಯಾಗಿದೆ. ಆದರೆ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಸ್ಥಾನಕ್ಕೇರಿ ಸೆಲ್ಫ್ ಮೇಡ್ ಬಿಲಿಯನೇರ್ ಆದವರ ಸಂಖ್ಯೆ ಬೆರಳೆಣಿಕೆಯಷ್ಟು.ಅಂಥವರಲ್ಲಿ ಜಯಶ್ರೀ ಉಲ್ಲಾಳ್ ಕೂಡ ಒಬ್ಬರು. 

ಲಂಡನ್ ನಲ್ಲಿ (London) ಹುಟ್ಟಿ ಭಾರತದಲ್ಲಿ ಬೆಳೆದ ಜಯಶ್ರೀ ಉಲ್ಲಾಳ್ ( Jayshree Ullal),ಸ್ಯಾನ್ ಫ್ರಾನ್ಸಿಕೋ ಸ್ಟೇಟ್ ಯುನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಸಾಂತಾ ಕ್ಲಾರ ಯುನಿವರ್ಸಿಟಿಯಿಂದ ಇಂಜಿನಿಯರಿಂಗ್ ಮ್ಯಾನೇಜ್ ಮೆಂಟ್ ಪದವಿ ಪಡೆದಿದ್ದಾರೆ. ಗ್ರಾಫಿಕ್ ಕಾರ್ಡ್ ಕಂಪನಿಗಳಲ್ಲಿ ಜನಪ್ರಿಯತೆ ಗಳಿಸಿರುವ ಅಡ್ವಾನ್ಡ್ ಮೈಕ್ರೋ ಡೆವೈಸ್ಸ್ (ಎಎಂಡಿ) ಮೂಲಕ ಉಲ್ಲಾಳ್ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಆ ಬಳಿಕ ಕೆಲವು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಉಲ್ಲಾಳ್, ಸಿಸ್ಕೋನಲ್ಲಿ 15ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಆ ಬಳಿಕ 2008ರಲ್ಲಿ ಅರಿಸ್ಟಾಕ್ಕೆ ಸೇರಿದ್ದರು. ಒಂದು ದಶಕಕ್ಕೂ ಅಧಿಕ ಸಮಯದಿಂದ ಅರಿಸ್ಟಾ ಅಧ್ಯಕ್ಷೆ ಹಾಗೂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು, ಈ ಸಂಸ್ಥೆಯ ಉದ್ಯಮವನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. 

ಭಾರತೀಯ ಶ್ರೀಮಂತರು ಭಾರತ ಪೌರತ್ವ ತ್ಯಜಿಸ್ತಿರೋದು ಯಾಕೆ ಗೊತ್ತಾ?

2014ರ ಜೂನ್ ನಲ್ಲಿ ಜಯಶ್ರೀ ಉಲ್ಲಾಳ್ ( Jayshree Ullal) ಅರಿಸ್ಟಾ ನೆಟ್ ವರ್ಕ್ ಕಂಪನಿಯ ಐತಿಹಾಸಿಕ ಹಾಗೂ ಯಶಸ್ವಿ ಐಪಿಒ (IPO) ನಡೆಸುವ ಮೂಲಕ ಶೂನ್ಯದಿಂದ ಮಲ್ಟಿ ಬಿಲಿಯನ್ ಡಾಲರ್ ತನಕ ವ್ಯವಹಾರ ವಿಸ್ತರಿಸುವಂತೆ ಮಾಡಿದ್ದಾರೆ. 30 ವರ್ಷಗಳಿಗೂ ಅಧಿಕ ನೆಟ್ ವರ್ಕಿಂಗ್ ಅನುಭವ ಹೊಂದಿರುವ ಜಯಶ್ರೀ ಉಲ್ಲಾಳ್, 2015ರಲ್ಲಿ ಇ & ವೈ 'ಎಂಟರ್ ಪ್ರಿನರ್ ಆಫ್ ದಿ ಇಯರ್', 2018ರಲ್ಲಿ ಬ್ಯಾರ್ರನ್ಸ್ 'ಜಗತ್ತಿನ ಅತ್ಯುತ್ತಮ ಸಿಇಒ' ಹಾಗೂ 2019ರಲ್ಲಿ ಫಾರ್ಚೂನ್ 'ಅಗ್ರ 20 ಉದ್ಯಮ ವ್ಯಕ್ತಿಗಳು' ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 

ಯುಪಿಐ ಪಾವತಿ ಅಪ್ಲಿಕೇಷನ್ ಬಳಸುತ್ತಿದ್ದೀರಾ? ಹಾಗಾದ್ರೆ ಮರೆಯದೆ ಈ 5 ಟಿಪ್ಸ್ ಫಾಲೋ ಮಾಡಿ

ಜಯಶ್ರೀ ಉಲ್ಲಾಳ್ ವಿಜಯ್ ಉಲ್ಲಾಳ್ ಎಂಬುವರನ್ನು ವಿವಾಹವಾಗಿದ್ದು, ಅವರು ಕೂಡ ಈ ಹಿಂದೆ ಟೆಕ್ ಎಕ್ಸಿಕ್ಯುಟಿವ್ ಆಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ವೆಂಚರ್ಸ್ ಕ್ಯಾಪಿಟಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಪ್ರಸ್ತುತ ಸರಟೋಗ ಹಾಗೂ ಕ್ಯಾಲಿಫೋರ್ನಿಯಾದಲ್ಲಿ (California) ನೆಲೆ ನಿಂತಿದ್ದಾರೆ. ಉಲ್ಲಾಳ್ ಅವರ ಸಹೋದರಿ ದಿವಂಗತ ಸುಸಿ ನಾಗ್ಪಲ್ (Susie Nagpal) ಈ ಹಿಂದೆ ಅಮೆರಿಕದ ಸರಟೋಗ ಸಿಟಿ ಕೌನ್ಸಿಲ್ ಗೆ ( Saratoga City council) ಆಯ್ಕೆಯಾಗಿದ್ದರು. 

Latest Videos
Follow Us:
Download App:
  • android
  • ios