Asianet Suvarna News Asianet Suvarna News

ಟಾಟಾ ಗ್ರೂಪ್‌ನ 3 ಲಕ್ಷ ಕೋಟಿ ರೂ. ಮೌಲ್ಯದ ಈ ಲಾಭದಾಯಕ ಕಂಪನಿಯ ಎಂ.ಡಿ ಇವರೇ ನೋಡಿ..!

ಸಿ.ಕೆ. ವೆಂಕಟರಾಮನ್ ಅವರು ಟೈಟಾನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇದು 1984 ರಲ್ಲಿ TIDCO ನೊಂದಿಗೆ ಜಂಟಿ ಉದ್ಯಮವಾಗಿ ಪ್ರಾರಂಭವಾದ ಟಾಟಾ-ಬೆಂಬಲಿತ ಕಂಪನಿಯಾಗಿದೆ.

meet iim alumnus who leads rs 296000 crore rs company backed by ratan tata ck venkataraman titan company md ash
Author
First Published Sep 18, 2023, 10:59 PM IST

ನವದೆಹಲಿ (ಸೆಪ್ಟೆಂಬರ್ 18, 2023): ಟಾಟಾ ಗ್ರೂಪ್ ಕಂಪನಿಗಳಲ್ಲಿ ಟೈಟಾನ್‌ ಪ್ರಮುಖ ಸ್ಥಾಣ ಪಡೆದುಕೊಂಡಿದೆ. ಇದರ ಷೇರು ಬೆಲೆ ಇತ್ತೀಚೆಗೆ ಜಿಗಿಯುತ್ತಲೇ ಇದ್ದು, ಹಲವು ಹೂಡಿಕೆದಾರರಿಗೆ ಸಾಕಷ್ಟು ಲಾಭ ತಂದುಕೊಟ್ಟಿದೆ. ವಾಚ್‌ ಪ್ರಿಯರಿಗೆ ಫೇವರಿಟ್‌ ಕಂಪನಿಗಳಲ್ಲಿ ಒಂದು ಟೈಟಾನ್‌ ಕಂಪನಿ. ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಂದ್ರೆ ಎಂ.ಡಿ. ಇವರೇ ನೋಡಿ..

ಸಿ.ಕೆ. ವೆಂಕಟರಾಮನ್ ಅವರು ಟೈಟಾನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇದು 1984 ರಲ್ಲಿ TIDCO ನೊಂದಿಗೆ ಜಂಟಿ ಉದ್ಯಮವಾಗಿ ಪ್ರಾರಂಭವಾದ ಟಾಟಾ-ಬೆಂಬಲಿತ ಕಂಪನಿಯಾಗಿದೆ. ವೆಂಕಟರಾಮನ್ ಅಕ್ಟೋಬರ್ 2019 ರಿಂದ ಕಂಪನಿಯನ್ನು MD ಆಗಿ ಮುನ್ನಡೆಸುತ್ತಿದ್ದು, 1990 ರಲ್ಲಿ ಜೀವನಶೈಲಿ ಕಂಪನಿಗೆ ಜಾಹೀರಾತು ವ್ಯವಸ್ಥಾಪಕರಾಗಿ ಸೇರುವ ಮೂಲಕ ತಮ್ಮ ಕೆಲಸ ಆರಂಭಿಸಿದ್ದರು.

ಇದನ್ನು ಓದಿ: 9ನೇ ಕ್ಲಾಸ್‌ ಫೇಲ್‌ ಆದ ವ್ಯಕ್ತಿ ಈಗ 1,843 ಕೋಟಿ ಮೌಲ್ಯದ ಐಸ್‌ಕ್ರೀಂ ಕಂಪನಿಯ ಬಾಸ್‌!

ಅಂದ್ರೆ, ಇವರು ಉದ್ಯಮದಲ್ಲಿ ಸುಮಾರು 30 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಈ ಪೈಕಿ, ಟೈಟಾನ್ ಕಂಪನಿಯ ವಾಚ್‌ ವಿಭಾಗದಲ್ಲಿ 14 ವರ್ಷಗಳನ್ನು ಕಳೆದಿದ್ದು, ಇದರಲ್ಲಿ ಹೆಚ್ಚಾಗಿ ಮಾರ್ಕೆಟಿಂಗ್ ಮತ್ತು ನಂತರ ಮಾರಾಟ ಹಾಗೂ ಚಿಲ್ಲರೆ ವ್ಯಾಪಾರ ನೋಡಿಕೊಳ್ತಿದ್ರು. ಬಳಿಕ ಅವರು 2005 ರಲ್ಲಿ ಟೈಟಾನ್‌ನ ಆಭರಣ ವಿಭಾಗಕ್ಕೆ ಶಿಫ್ಟ್‌ ಆಗಿದ್ದು, ಅಲ್ಲಿ ಅವರು ಮುಂದಿನ 14 ವರ್ಷಗಳ ಕಾಲ ಈ ವಿಭಾಗದ ಮುಖ್ಯಸ್ಥರಾಗಿದ್ದರು. 

ಟೈಟಾನ್ ಸೆಪ್ಟೆಂಬರ್ 18, 2023 ರ ಹೊತ್ತಿಗೆ 2,96,000 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಸೋಮವಾರದಂದು NSE ಯಲ್ಲಿ ಕಂಪನಿಯ ಪ್ರತಿ ಷೇರಿನ ಮೌಲ್ಯ 3,335 ರೂ. ಟೈಟಾನ್ ವಾಚ್‌ಗಳು, ಆಭರಣಗಳು, ಸನ್‌ಗ್ಲಾಸ್‌ಗಳು, ವಜ್ರಗಳು ಇತ್ಯಾದಿಗಳನ್ನು ಮಾರಾಟ ಮಾಡುತ್ತದೆ.

ಇದನ್ನೂ ಓದಿ: ಟಾಟಾ ಗ್ರೂಪ್‌ ಒಡೆತನದ ಈ ಷೇರಿನಿಂದ ಒಂದು ತಿಂಗಳಲ್ಲಿ 1390 ಕೋಟಿ ರೂ. ಲಾಭ ಗಳಿಸಿದ ಜುಂಜುನ್ವಾಲಾ ಪತ್ನಿ

ವೆಂಕಟರಾಮನ್ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬೆಳೆದಿದ್ದು, ಅವರು ಗಣಿತಶಾಸ್ತ್ರದಲ್ಲಿ ತಮ್ಮ ಪದವಿ ಪೂರ್ಣಗೊಳಿಸಿದರು. ಒಂದೆರಡು ವರ್ಷಗಳ ಕೆಲಸದ ನಂತರ, ಅವರು 1985 ರಲ್ಲಿ IIM ಅಹಮದಾಬಾದ್‌ನಿಂದ PGDM ಅನ್ನು ಪಡೆದರು. 5 ವರ್ಷಗಳ ಜಾಹೀರಾತು ಉದ್ಯಮದಲ್ಲಿ (MAA ಮತ್ತು ಮುದ್ರಾ ಕಮ್ಯುನಿಕೇಷನ್ಸ್) ಕೆಲಸ ಮಾಡಿದ ನಂತರ, ಅವರು 1990 ರಲ್ಲಿ ಟೈಟಾನ್‌ಗೆ ಸೇರಿದರು. ಅವರ ಆಸಕ್ತಿಗಳು ಹಾಡುಗಾರಿಕೆ, ಓಟ, ಸೈಕ್ಲಿಂಗ್ ಮತ್ತು ಅಡುಗೆ ಮುಂತಾದವು ಆಗಿದೆ. ಟೈಟಾನ್ 1984 ರಿಂದ ಬಹಳ ದೂರ ಸಾಗಿದೆ. ಇದು ಒಂದು ಉತ್ಪನ್ನ ವರ್ಗದೊಂದಿಗೆ ಪ್ರಾರಂಭವಾಗಿದ್ದು, ಇಂದು, 8,000 ಉದ್ಯೋಗಿಗಳು ಮತ್ತು 16 ಬ್ರ್ಯಾಂಡ್‌ಗಳೊಂದಿಗೆ, 2,000 ಕ್ಕೂ ಹೆಚ್ಚು ಚಿಲ್ಲರೆ ಅಂಗಡಿಗಳನ್ನು ಹೊಂದಿದೆ.

ಇದನ್ನೂ ಓದಿ: TATA ಗ್ರೂಪ್‌ನ ಈ ಷೇರಿಂದ ಜುಂಜುನ್ವಾಲಾ ಪತ್ನಿಗೆ ಒಂದೇ ದಿನದಲ್ಲಿ 315 ಕೋಟಿ ಲಾಭ: ನೀವು ಯಾಕೆ ಟ್ರೈ ಮಾಡ್ಬಾರ್ದು!

Follow Us:
Download App:
  • android
  • ios