Asianet Suvarna News Asianet Suvarna News

ದಂತ ಚಿಕಿತ್ಸೆಯ ಕಹಿ ಅನುಭವವೇ ಇವರಿಗೆ ಡೆಂಟಲ್ ಕ್ಲಿನಿಕ್ ಸ್ಥಾಪಿಸಲು ಪ್ರೇರಣೆ;ಇಂದು ಈ ಸಂಸ್ಥೆ ವಹಿವಾಟು 140 ಕೋಟಿ 

ದಂತ ಚಿಕಿತ್ಸೆಗೆಂದು ವೈದ್ಯರ ಬಳಿ ತೆರಳಿದ ಅಮರಿಂದರ್ ಸಿಂಗ್ ಅಲ್ಲಿನ ಕೊಳಕು,ಅನಾರೋಗ್ಯಕರ ಪರಿಸರದಿಂದ ಬೇಸರಗೊಳ್ಳುತ್ತಾರೆ. ತಾವೇ ಕ್ಲೋವ್ ಡೆಂಟಲ್ ಕೇರ್ ಎಂಬ ಕ್ಲಿನಿಕ್ ಪ್ರಾರಂಭಿಸುತ್ತಾರೆ. ಇದು ಇಂದು ಭಾರತದ ಅತೀದೊಡ್ಡ ಡೆಂಟಲ್ ಕ್ಲಿನಿಕ್ ಚೈನ್ ಆಗಿ ಬೆಳೆದು ನಿಂತಿದೆ. 

Meet Harvard graduate whose bad experience with dentist drove him to build Indias largest dental chain anu
Author
First Published Dec 6, 2023, 5:28 PM IST

Business Desk: ಯಾವುದೋ ಒಂದು ಸಂದರ್ಭದಲ್ಲಾದ ಕಹಿ ಅನುಭವ ಜೀವನದಲ್ಲಿ ಮಹತ್ವದ ಸಾಧನೆಗೆ ಕಾರಣವಾಗಬಲ್ಲದು. ಇದಕ್ಕೆ ಭಾರತದ ಅತೀದೊಡ್ಡ ದಂತ ವೈದ್ಯಕೀಯ ಕ್ಲಿನಿಕ್ ಗಳ ಚೈನ್  ಕ್ಲೋವ್  ಡೆಂಟಲ್ ಸ್ಥಾಪಕ ಅಮರಿಂದರ್ ಸಿಂಗ್ ಅವರೇ ನಿದರ್ಶನ. 2010ರಲ್ಲಿ ಪತ್ನಿಯ ಜೊತೆಗೆ ದೆಹಲಿಯ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದ ಅಮರಿಂದರ್ ಅವರಿಗೆ ಅಲ್ಲೊಂದು ಕೆಟ್ಟ ಅನುಭವವಾಯಿತು. ಅಲ್ಲಿನ ಸ್ವಚ್ಛತೆ ಕೊರತೆ ಅವರಿಗೆ ಭಾರತದಲ್ಲಿ ಸ್ವಚ್ಛ, ವ್ಯವಸ್ಥಿತ ದಂತ ಚಿಕಿತ್ಸಾಲಯಗಳ ಅಗತ್ಯವನ್ನು ಮನವರಿಕೆ ಮಾಡಿತು. ಪರಿಣಾಮ 2011ರಲ್ಲಿ ಸಿಂಗ್ ಕ್ಲೋವ್ ಡೆಂಟಲ್ ಪ್ರಾರಂಭಿಸಿದರು. ಇಂದು ಈ ಸಂಸ್ಥೆ ದೇಶಾದ್ಯಂತ 350ಕ್ಕೂ ಅಧಿಕ ಕ್ಲಿನಿಕ್ ಗಳನ್ನು ಹೊಂದಿದೆ. 35 ಸಾವಿರಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಸಂಸ್ಥೆ 140 ಕೋಟಿ ರೂ.ಗಿಂತಲೂ ಅಧಿಕ ವಹಿವಾಟು ನಡೆಸುತ್ತಿದೆ. 

'ಹಲ್ಲಿನ ಫಿಲ್ಲಿಂಗ್ ನಡೆಸಲು ನಾನು ದೆಹಲಿಯ ಒಂದು ಡೆಂಟಲ್ ಕ್ಲಿನಿಕ್ ಗೆ ಭೇಟಿ ನೀಡಿದ್ದೆ. ಅಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಯಾವಾಗ ಬಾಯಿ ಸ್ವಚ್ಛಗೊಳಿಸಿ ಉಗುಳಲು ಹೋದೆನೋ ಆಗ ಅಲ್ಲಿನ ಕೊಳಕು ಹಾಗೂ ಅನಾರೋಗ್ಯಕರ ಸಿಂಕ್ ನೋಡಿ ನನಗೆ ಅಸಹ್ಯವಾಯಿತು. ಈ ಕೆಟ್ಟ ಅನುಭವವೇ ನನ್ನನ್ನು ದಂತ ಚಿಕಿತ್ಸಾಲಯ ಸ್ಥಾಪಿಸಲು ಪ್ರೇರಣೆ ನೀಡಿತು' ಎನ್ನುತ್ತಾರೆ ಅಮರಿಂದರ್ ಸಿಂಗ್. ಅಮೆರಿಕ ಹಾಗೂ ಕೆನಡಾದಲ್ಲಿ ಸುದೀರ್ಘ ಕಾಲ ನೆಲೆಸಿದ್ದ ಸಿಂಗ್ ಭಾರತಕ್ಕೆ ಹಿಂತಿರುಗಿದ ಕೆಲವೇ ಸಮಯದಲ್ಲಿ ಈ ಅನುಭವ ಆಗಿತ್ತು. ಇದೇ ಅವಧಿಯಲ್ಲಿ ಅವರು ಆರೋಗ್ಯಸೇವಾ ವಲಯದಲ್ಲಿ ಹೂಡಿಕೆ ಮಾಡಲು ಅವಕಾಶವಿದೆಯಾ ಎಂದು ಎದುರು ನೋಡುತ್ತಿದ್ದರು ಕೂಡ. ಹೀಗಾಗಿ ಈ ಒಂದು ಘಟನೆ ಅವರು ದಂತ ಆರೋಗ್ಯ ಕ್ಷೇತ್ರ ಪ್ರವೇಶಿಸಲು ಕಾರಣವಾಯಿತು.

ಹೋಳಿಗೆ ಮಾರಿ ಕೋಟ್ಯಧೀಶನಾದ ಕನ್ನಡಿಗ;ಹೋಟೆಲ್ ವೇಟರ್ ಆಗಿದ್ದಈತನೀಗ 18 ಕೋಟಿ ವಹಿವಾಟು ನಡೆಸೋ ಸಂಸ್ಥೆ ಒಡೆಯ

ಆರಂಭಿಕ ಜೀವನ
ಅಮರಿಂದರ್ ಸಿಂಗ್ ದೆಹಲಿಯಲ್ಲಿ ತಮ್ಮ ಆರಂಭಿಕ ಶಿಕ್ಷಣ ಮುಗಿಸಿದ್ದರು. ಆ ಬಳಿಕ ಡೆಹ್ರಾಡೂನ್ ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಗೆ ತೆರಳಿದರು. ಅದಾದ ಬಳಿಕ ನೈಜೀರಿಯಾಕ್ಕೆ ತೆರಳಿದರು. ಸಿಂಗ್ ಅವರ ತಂದೆ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಅವರ ತಾಯಿ ಶಿಕ್ಷಕಿಯಾಗಿದ್ದರು. ಹೀಗೆ ಶಿಕ್ಷಿತ ಕುಟುಂದ ಹಿನ್ನೆಲೆ ಹೊಂದಿದ್ದ ಸಿಂಗ್ ಅವರಿಗೆ ಉತ್ತಮ ಶಿಕ್ಷಣವೇ ದೊರಕಿತು

ನೈಜೀರಿಯಾದಲ್ಲಿ ಇಂಜಿನಿಯರಿಂಗ್ 
ಅಮರಿಂದರ್ ಸಿಂಗ್ ನೈಜೀರಿಯಾದಲ್ಲಿ ಶಿಕ್ಷಣ ಮುಂದುವರಿಸಿದ್ದರು. ಪ್ರತಿಭಾವಂತರಾಗಿದ್ದ ಸಿಂಗ್ 15ನೇ ವಯಸ್ಸಿನಲ್ಲೇ ವಿಶ್ವವಿದ್ಯಾಲಯದಲ್ಲಿ 5 ವರ್ಷಗಳ ಇಂಜಿನಿಯರಿಂಗ್ ಪದವಿಗೆ ಸೇರ್ಪಡೆಗೊಂಡಿದ್ದರು. ನೈಜೀರಿಯಾದ ಆ ವಿಶ್ವವಿದ್ಯಾಲಯದಲ್ಲಿನ 12 ವಿದೇಶಿ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದ ಅವರು, ಸಾಕಷ್ಟು ಟೀಕೆ ಹಾಗೂ ಅವಮಾನಗಳನ್ನು ಅನುಭವಿಸಿದ್ದರು. ಈ ಕಾರಣದಿಂದ ವಿಶ್ವವಿದ್ಯಾಲಯದಲ್ಲಿ ಪೂರ್ಣ ಗಮನವನ್ನು ಅಧ್ಯಯನದ ಕಡೆಗೆ ಕೇಂದ್ರೀಕರಿಸಿದರು. ಇಂಜಿನಿಯರಿಂಗ್ ಪೂರ್ಣಗೊಳಿಸಿದ ಬಳಿಕ 1989ರಲ್ಲಿ ಪ್ಲ್ಯಾಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಕೆನಡಾದ ವಾಟರ್ ಲೂ ಯುನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1998ರಲ್ಲಿ ಹಾರ್ವರ್ಡ್ ಯುನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದರು. 

ವಿದೇಶದಲ್ಲಿ ಉದ್ಯಮ
ಹಾರ್ವರ್ಡ್ ಯುನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದ ಬಳಿಕ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿದ ಅಮರಿಂದರ್ ಸಿಂಗ್ ಇಬ್ಬರು ಸ್ನೇಹಿತರ ಜೊತೆಗೆ ಸೇರಿ ಅಲ್ಲಿ 'ಸಿಂಪ್ಲೆಕ್ಸಿಸ್' ಎಂಬ ಸಂಸ್ಥೆ ಪ್ರಾರಂಭಿಸುತ್ತಾರೆ. ಇದು B2B ಶಿಕ್ಷಣ ಸಂಸ್ಥೆಯಾಗಿತ್ತು.  2000ನೇ ಮಾರ್ಚ್ ನಲ್ಲಿ ಈ ಸಂಸ್ಥೆಗಾಗಿ 35 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಸಂಗ್ರಹಿಸುವಲ್ಲಿ ಕೂಡ ಸಿಂಗ್ ಯಶಸ್ವಿಯಾಗುತ್ತಾರೆ. ಇವರ ಉದ್ಯಮದ ಬಗ್ಗೆ 'ಟೈಮ್ಸ್ ಮ್ಯಾಗಝೀನ್' ನಲ್ಲಿ ಲೇಖನ ಕೂಡ ಪ್ರಕಟವಾಗಿತ್ತು. ಆದರೆ, ಆ ಕಂಪನಿಯನ್ನು 2002ರಲ್ಲಿ ಮಾರಾಟ ಮಾಡಿದ್ದರು.

ತೆಂಗಿನ ಚಿಪ್ಪಿಂದಲೇ ತಿಂಗಳಿಗೆ ಲಕ್ಷಾಂತರ ಸಂಪಾದಿಸ್ತಾರೆ ಕೇರಳದ ಈ ಹುಡುಗಿ!

ಭಾರತಕ್ಕೆ ವಾಪಸ್
2010ರಲ್ಲಿ ಅಮರಿಂದರ್ ಸಿಂಗ್ ಭಾರತಕ್ಕೆ ಹಿಂತಿರುಗಿದರು. ಆ ಸಂದರ್ಭದಲ್ಲಿ ಅವರಿಗೆ ಐದು ಹಾಗೂ ಒಂಭತ್ತು ವಯಸ್ಸಿನ ಇಬ್ಬರು ಹೆಣ್ಣುಮಕ್ಕಳಿದ್ದರು. ದೆಹಲಿಯಲ್ಲಿ ತಂದೆ-ತಾಯಿ ಜೊತೆಗೆ ನೆಲೆಸುವ ನಿರ್ಧಾರ ಮಾಡಿದ್ದ ಸಿಂಗ್, ಉದ್ಯಮ ಪ್ರಾರಂಭಿಸುವ ಯೋಚನೆಯಲ್ಲಿದ್ದರು. ದಂತ ವೈದ್ಯರ ಬಳಿಯಾದ ಅನುಭವ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದರು. ಈ ವರ್ಷದ ನವೆಂಬರ್ ನಲ್ಲಿ ಕತಾರ್ ಹೂಡಿಕೆ ಪ್ರಾಧಿಕಾರ ಕ್ಲೋವ್ ಡೆಂಟಲ್ ನಲ್ಲಿ 417 ಕೋಟಿ ರೂ. ಹೂಡಿಕೆ ಮಾಡಿದೆ.

Follow Us:
Download App:
  • android
  • ios