ರಮ್ಮಿ ಸರ್ಕಲ್, ಡ್ರೀಮ್ ಸೇರಿ ಅನೇಕ ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ 55 ಸಾವಿರ ಕೋಟಿ ರು. ತೆರಿಗೆ ಶಾಕ್
ಇತ್ತೀಚಿನ ಜಿಎಸ್ಟಿ ನಿಯಮದ ಅನ್ವಯ ಪ್ರಿ ಶೋಕಾಸ್ ನೋಟಿಸ್ ಜಾರಿ. ಶೀಘ್ರ ಇನ್ನಷ್ಟು ನೋಟಿಸ್, ಒಟ್ಟು ಮೊತ್ತ ಲಕ್ಷ ಕೋಟಿ ದಾಟುವ ನಿರೀಕ್ಷೆ. ಡ್ರೀಮ್ 11ಗೆ 25 ಸಾವಿರ ಕೋಟಿ ರು. ನೋಟಿಸ್. ಹೊಸ ನಿಯಮದಂತೆ ಬೆಟ್ ಕಟ್ಟಿದ ಪ್ರತಿ ಪೈಸೆಗೂ ತೆರಿಗೆ ಕಟ್ಟಬೇಕು.
ಮುಂಬೈ (ಸೆ.27): ಸಾವಿರಾರು ಕೋಟಿ ರು.ವಹಿವಾಟು ನಡೆಸುತ್ತಿರುವ ಆನ್‌ಲೈನ್ ಗೇಮಿಂಗ್ ಕಂಪನಿಗಳ ಮೇಲೆ ಮುಗಿಬಿದ್ದಿರುವ ಆದಾಯ ತೆರಿಗೆ ಇಲಾಖೆ, ಭರ್ಜರಿ 55 ಸಾವಿರ ಕೋಟಿ ರು. ತೆರಿಗೆ ಪಾವತಿಸುವಂತೆ ‘ಪ್ರಿ ನೋಟಿಸ್’ ಜಾರಿ ಮಾಡಿದೆ. ಈ ಪೈಕಿ ಭಾರತ ಕ್ರಿಕೆಟ್ ತಂಡದ ಜಾಹೀರಾತು ಪಾಲುದಾರನಾಗಿರುವ ‘ಡ್ರೀಮ್ 11’ ಸಂಸ್ಥೆಯೊಂದಕ್ಕೇ 25000 ಕೋಟಿ ರು. ಮೊತ್ತದ ನೋಟಿಸ್ ಜಾರಿ ಮಾಡಲಾಗಿದೆ. ಇದು ದೇಶದ ಇತಿಹಾಸದಲ್ಲೇ ಕಂಪನಿಯೊಂದಕ್ಕೆ ನೀಡಿದ ಗರಿಷ್ಠ ಮೊತ್ತದ ತೆರಿಗೆ ನೋಟಿಸ್ ಎಂದು ವಿಶ್ಲೇಷಿಸಲಾಗಿದೆ.
ಇತ್ತೀಚೆಗೆ ಜಿಎಸ್ಟಿ ಮಂಡಳಿಯು ತೆಗೆದುಕೊಂಡಿದ್ದ ನಿರ್ಧಾರದ ಅನ್ವಯ, ಗೆದ್ದ ಮೊತ್ತಕ್ಕಷ್ಟೇ ಅಲ್ಲ, ಅನ್‌ಲೈನ್ ಗೇಮ್‌ನಲ್ಲಿ ಬೆಟ್ ಮಾಡಲಾದ ಇಡೀ ಮೊತ್ತಕ್ಕೆ ಶೇ.28ರಷ್ಟು ಜಿಎಸ್ಟಿ ವಿಧಿಸಲಾಗುವುದು. ಈ ನಿರ್ಧಾರದ ಅನ್ವಯ ಆನ್‌ಲೈನ್ ಗೇಮಿಂಗ್ ಕಂಪನಿಗಳಲ್ಲಿ ಇದುವರೆಗೆ ಮಾಡಲಾದ ಎಲ್ಲ ಬೆಟ್ ಮೊತ್ತವನ್ನು ಆಧರಿಸಿ ಅವುಗಳಿಗೆ ಪ್ರಿ ಶೋಕಾಸ್ ನೋಟಿಸ್ ನೀಡಲಾಗಿದೆ. ಇದಕ್ಕೆ ಉತ್ತರಿಸಲು ಕಂಪನಿಗಳಿಗೆ ಒಂದು ವಾರದ ಸಮಯ ನೀಡಲಾಗಿದೆ.
ಡ್ರೀಮ್ 11ನಿಂದ ಬರೋಬ್ಬರಿ 40,000 ಕೋಟಿ ಜಿಎಸ್‌ಟಿ ವಂಚನೆ? ಗೇಮಿಂಗ್ ಕಂಪನಿಗೆ ನೋಟಿಸ್
ಯಾರಿಗೆ ಎಷ್ಟು ಮೊತ್ತದ ನೋಟಿಸ್?: ಈ ಪೈಕಿ ‘ಡ್ರೀಮ್ 11’ಗೆ 25000 ಕೋಟಿ ರು., ‘ರಮ್ಮಿ ಸರ್ಕಲ್’, ‘ಮೈ 11 ಸರ್ಕಲ್’ ಮೊದಲಾದ ಕಂಪನಿಗಳ ಒಡೆತನ ಹೊಂದಿರುವ ‘ಪ್ಲೇ ಗೇಮ್ಸ್ 24*7’ ಗೆ 20000 ಕೋಟಿ ರು. ಮತ್ತು ಇತರೆ ಕೆಲ ಕಂಪನಿಗಳಿಗೆ 10000 ಕೋಟಿ ರು. ಮೊತ್ತದ ನೋಟಿಸ್ ಅನ್ನು ಜಿಎಸ್ಟಿ ಗುಪ್ತಚರ ನಿರ್ದೇಶನಾಲಯದ ಮುಂಬೈ ಕಚೇರಿ ಕಳೆದ ಶುಕ್ರವಾರದಿಂದೀಚೆಗೆ ನೀಡಿದೆ. ಇವುಗಳ ಮೊತ್ತ 55000 ಕೋಟಿ ರು. ನಷ್ಟಿದೆ.
ಮುಂದಿನ ಕೆಲ ದಿನಗಳಲ್ಲಿ ಬೆಂಗಳೂರು, ದೆಹಲಿ, ಹೈದ್ರಾಬಾದ್ ಕಚೇರಿಗಳಿಂದಲೂ ನೋಟಿಸ್ ನೀಡುವ ಸಂಭವವಿದೆ. ಅದಾದ ಬಳಿಕ ನೀಡಲಾದ ತೆರಿಗೆ ನೋಟಿಸ್‌ನ ಮೊತ್ತ 1 ಲಕ್ಷ ಕೋಟಿ ರು. ದಾಟಬಹುದು ಎಂದು ಹೇಳಲಾಗಿದೆ.
ಬಾಲ್ಯವಿವಾಹಕ್ಕೆ ತುತ್ತಾಗಿ ಸ್ಲಂನಲ್ಲಿ ನರಳಿದ ಈಕೆ ಇಂದು ದೇಶದ ಮಿಲಿಯನೇರ್ ಉದ್ಯಮಿ,
ಏನಿದು ಪ್ರಿ ನೋಟಿಸ್?: ತೆರಿಗೆ ವಿಷಯದಲ್ಲಿ ಅಂತಿಮ ನೋಟಿಸ್‌ಗೂ ಮುನ್ನ ಪ್ರಿ ನೋಟಿಸ್ ಅನ್ನು ತೆರಿಗೆ ಇಲಾಖೆ ನೀಡುತ್ತದೆ. ಈ ವೇಳೆ ಕಂಪನಿಗಳಿಂದ ಮಾಹಿತಿ ಪಡೆದು ಅವುಗಳ ಜೊತೆ ಸಂವಾದ ನಡೆಸುತ್ತದೆ. ಒಂದು ವೇಳೆ ಸೂಕ್ತ ಉತ್ತರ ಸಿಗದೆ ಇದ್ದಲ್ಲಿ ಅಂತಿಮ ನೋಟಿಸ್ ನೀಡಲಾಗುತ್ತದೆ. ಅನವಶ್ಯವಾಗಿ ಕೋರ್ಟ್ ಮೆಟ್ಟಿಲೇರುವುದನ್ನು ತಪ್ಪಿಸಲು ಈ ಪ್ರಿ ನೋಟಿಸ್ ನೀಡಲಾಗುತ್ತದೆ. ಈ ನಡುವೆ ನೋಟಿಸ್ ಪ್ರಶ್ನಿಸಿ ಡ್ರೀಮ್ 11 ಕಂಪನಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ.