Asianet Suvarna News Asianet Suvarna News

ಚಿನ್ನದ ಮೇಲೆ ಹಾಲ್ ಮಾರ್ಕ್‌ ಕಡ್ಡಾಯ, ನಿಮ್ಮ ಬಳಿ ಇರುವ ಆಭರಣದ ಕತೆ ಏನು?

* ಚಿನ್ನದ ಆಭರಣಗಳಿಗೆ ಇನ್ನು ಮುಂದೆ  ಹಾಲ್ ಮಾರ್ಕ್ ಕಡ್ಡಾಯ
* ಈ ಬದಲಾವಣೆಯಿಂದ ಆಭರಣ ಮಾರುಕಟ್ಟೆ ಮೇಲೆ ಪರಿಣಾಮ ಏನು?
* ಗ್ರಾಹಕರ ಹಿತ ಕಾಪಾಡುವುದೇ ಮುಖ್ಯ
* ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಭದ್ರ ಸ್ಥಾನ 

Mandatory Gold Hallmarking Starts in India How It Impacts Your Existing Ornaments Mah
Author
Bengaluru, First Published Jun 16, 2021, 10:09 PM IST

ಬೆಂಗಳೂರು(ಜು.  16) ಚಿನ್ನದ ಆಭರಣಗಳ ಮೇಲೆ ಹಾಲ್‌ಮಾರ್ಕಿಂಗ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ.  ಹಾಗಾದರೆ ಇನ್ನು ಮುಂದೆ ಈ  ಹಾಲ್ ಮಾರ್ಕ್ ಕಡ್ಡಾಯದಿಂದ ಆಗುವ ಬದಲಾವಣೆಗಳು ಏನು?  ಹೊಸ ಮಾರ್ಗಸೂಚಿಯಲ್ಲಿ ಇರುವ ಅಂಶಗಳು ಏನು? ದೇಶದ 256  ಜಿಲ್ಲೆಗಳಲ್ಲಿ ಹಾಲ್ ಮಾರ್ಕಿಂಗ್ ಕೆಲಸ ಆರಂಭವಾಗಲಿದೆ. 

ಗ್ಲೋಬಲ್ ಮಾರ್ಕೆಟಿಂಗ್  ಬೂಸ್ಟ್: ಭಾರತ ಪ್ರಪಂಚದಲ್ಲಿಯೇ ಅತ್ಯುತ್ತಮ ಚಿನ್ನದ ತಯಾರಕನಾಗಿ ಹೊರಹೊಮ್ಮಲು ಈ ಕ್ರಮ ನೆರವಾಗುತ್ತದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್  ಹೇಳಿದ್ದಾರೆ. ಗ್ರಾಹಕರ ಹಿತ ಕಾಪಾಡುವುದು, ಸುರಕ್ಷತೆ ಮತ್ತು ತೃಪ್ತಿಗೆ ಇದು ನೆರವಾಗಲಿದೆ. ಜೂನ್  16  ರಿಂದಲೇ  ಕಡ್ಡಾಯ ಹಾಲ್ ಮಾರ್ಕಿಂಗ್ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಹಳೆ ಚಿನ್ನದ ಕತೆ ಏನು?  ಹಾಗಾದರೆ ಇದೀಗ ಹಾಲ್ ಮಾರ್ಕ್ ಇಲ್ಲದ ಜನರ ಬಳಿ ಇರುವ ಹಳೆಯ ಚಿನ್ನದ ಕತೆ ಏನು?  ಮಾರಾಟಗಾರರಿಗೆ ಮಾತ್ರ ಕಡ್ಡಾಯ ಎಂದು ಸರ್ಕಾರ ಹೇಳಿದ್ದು ಸ್ವಂತದ್ದಾಗಿ ಇಟ್ಟುಕೊಂಡವರಿಗೆ ಸದ್ಯದ ಮಟ್ಟಿಗೆ ಯಾವ ತೊಂದರೆ ಇಲ್ಲ. 

ಹಾಲ್ ಮಾರ್ಕ್ ಯಾಕೆ ಬೇಕು? : ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಸ್ (ಬಿಐಎಸ್) ನಲ್ಲಿ ನೋಂದಣಿ ಮಾಡಿಕೊಂಡಿರುವ ಚಿನ್ನದ ಕಂಪನಿಗಳು ನಿಯಮ ಪಾಲಿಸಬೇಕಿದೆ. ಜೂನ್ 14, 2018 ರಿಂದ ಹಳೆ ನಿಯಮಗಳು ಜಾರಿಯಲ್ಲಿದ್ದವು.

ಇಳಿಕೆಯ ಹಾದಿಯಲ್ಲಿ ಚಿನ್ನದ ದರ; ಗ್ರಾಹಕನ ಮಂದಹಾಸ

ಈಗಿರುವ  ಮಾಹಿತಿ ಪ್ರಕಾರ ದೇಶದಲ್ಲಿರುವ ಶೇ.  30 ರಷ್ಟು ಚಿನ್ನ ಮಾತ್ರ ಹಾಲ್ ಮಾರ್ಕ್ ಹೊಂದಿವೆ. ಚಿನ್ನದ ಸುರಕ್ಷತೆ ಕಾಪಾಡುವುದೆ ಇದರ ಉದ್ದೇಶ. ಹಾಲ್‌ಮಾರ್ಕ್‌ ಕಾಯ್ದೆಯು ಆಭರಣ ವ್ಯಾಪಾರಿಗಳು ಗ್ರಾಹಕರಿಗೆ ಮಾರಾಟ ಮಾಡುವ ಚಿನ್ನಕ್ಕೆ ಮಾತ್ರ ಅನ್ವಯಿಸುತ್ತದೆ. ಗ್ರಾಹಕರು ತಮ್ಮ ಚಿನ್ನಾಭರಣಗಳು, ನಾಣ್ಯಗಳು ಅಥವಾ ಇನ್ಯಾವುದೇ ಚಿನ್ನದ ವಸ್ತುಗಳನ್ನು ಮಾರಾಟ ಮಾಡುವ ಮೊದಲು ಹಾಲ್‌ಮಾರ್ಕ್‌ ಮಾಡಿಸುವ ಅಗತ್ಯವಿಲ್ಲ. ಹೀಗಾಗಿ ಹಾಲ್‌ಮಾರ್ಕ್ ಇಲ್ಲದ ಆಭರಣಗಳನ್ನು ಸಂಗ್ರಹಿಸುವ ಅಥವಾ ಬಳಸಿಕೊಳ್ಳುವ ವ್ಯಕ್ತಿಗಳಿಗೆ ಇದರಿಂದ ಯಾವುದೇ ಪರಿಣಾಮವಿಲ್ಲ. 

ಹಾಲ್‌ಮಾರ್ಕ್ ಇಲ್ಲದಿದ್ದರೂ ಮಾರಾಟ ಮಾಡಲು ಸಾಧ್ಯವಿದೆ. ಇನ್ನೊಂದು ವಿಚಾರ ಗಮನಿಸಿ ನಿಮ್ಮ ಚಿನ್ನದಲ್ಲಿ ಹಾಲ್‌ಮಾರ್ಕ್‌ ಇಲ್ಲ ಎಂದು ಆಭರಣ ವ್ಯಾಪಾರಿ ಚಿನ್ನ ವಿನಿಮಯ ಮಾಡಿಕೊಳ್ಳಲು ನಿರಾಕರಿಸಿದರೆ ಗ್ರಾಹಕರು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು.

ಚಿನ್ನವನ್ನು ಅಡವಿಡುವಾಗ ಹಾಲ್‌ಮಾರ್ಕ್‌ ಕಡ್ಡಾಯವಿಲ್ಲ. ಹಾಲ್‌ಮಾರ್ಕ್‌ಗೂ ಚಿನ್ನದ ಸಾಲಕ್ಕೂ ಯಾವುದೇ ಸಂಬಂಧವಿಲ್ಲ.ಹೀಗಾಗಿ ಚಿನ್ನದ ವಿರುದ್ಧ ಸಾಲ ನೀಡುವ ಮೊದಲು ಅದರ ಗುಣಮಟ್ಟ ಮತ್ತು ಪ್ರಮಾಣವನ್ನು ಮೌಲ್ಯಮಾಪನವನ್ನು ವ್ಯಾಪಾರಿಗಳು ಮಾಡಿಕೊಳ್ಳುತ್ತಾರೆ.

14 ಕ್ಯಾರೆಟ್, 18 ಕ್ಯಾರೆಟ್, ಮತ್ತು 22 ಕ್ಯಾರೆಟ್ ಚಿನ್ನದ ಆಭರಣಗಳ ಮಾರಾಟಕ್ಕೆ ಹಾಲ್‌ಮಾರ್ಕ್ ಕಡ್ಡಾಯವಾಗಿದೆ. ಚಿನ್ನದ ಆಭರಣಗಳು ಮತ್ತು ಆ್ಯಂಟಿಕ್‌ಗಳಿಗೆ ಇದು ಅನ್ವಯಿಸುತ್ತದೆ. ಒಟ್ಟಿನಲ್ಲಿ ಹಾಲ್ ಮಾರ್ಕ್ ವ್ಯವಸ್ಥೆಯನ್ನು   ಆರಂಭಿಕವಾಗಿ ಜಾರಿಗೆ ತರಲಾಗಿದ್ದು ಚಿನ್ನದ  ತಯಾರಿಕರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. 

 

Follow Us:
Download App:
  • android
  • ios