ತಪ್ಪಾಗಿ 1.2 ಲಕ್ಷ ರೂ ಷೇರು ಖರೀದಿಸಿದ ವ್ಯಕ್ತಿಗೆ ಬಂತು 60 ಲಕ್ಷ ರೂಪಾಯಿ ಆದಾಯ!
ಷೇರು ಮಾರುಕಟ್ಟೆಯಲ್ಲಿ 15 ಸಾವಿರ ರೂಪಾಯಿ ಹೂಡಿಕೆ ಮಾಡಿ ವಹಿವಾಟು ನಡೆಸುತ್ತಿದ್ದ. ಏನೋ ಪರೀಕ್ಷೆ ಮಾಡಲು ಹೋಗಿ ತಪ್ಪಾಗಿ 1.2 ಲಕ್ಷ ರೂಪಾಯಿ ಷೇರು ಖರೀದಿಯಾಗಿತ್ತು. ಆರ್ಡರ್ ಕ್ಯಾನ್ಸಲ್ ಮಾಡಲು ಸಾಧ್ಯವಾಗದ ಕಾರಣ ತಲೆ ಮೇಲೆ ಕೈಹೊತ್ತು ಕೂತಿದ್ದ. ಆದರೆ ಈ ತಪ್ಪು ಈತನಿಗೆ 60 ಲಕ್ಷ ರೂಪಾಯಿ ಆದಾಯ ತಂದುಕೊಟ್ಟಿದೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಲವರು ಲಾಭ ಗಳಿಸುತ್ತಿದ್ದಾರೆ. ಆದರೆ ಇದು ಸುಲಭದ ಕೆಲಸವಲ್ಲ. ಷೇರು ಮಾರುಕಟ್ಟೆ ಕುರಿತು ಅಧ್ಯಯನ ಅಗತ್ಯ. ಹಲವು ವರ್ಷಗಳ ಕಾಲ ಷೇರು ಮಾರುಕಟ್ಟೆ ಅಧ್ಯಯನ ಮಾಡಿ ಬಳಿಕ ಲಾಭ ಮಾಡಿಕೊಳ್ಳುತ್ತಾರೆ. ಸಣ್ಣ ಸಣ್ಣ ಷೇರು ಖರೀದಿಸಿ ವಹಿವಾಟು ಮಾಡುತ್ತಾ ಮಾರುಕಟ್ಟೆ ಹಾಗೂ ವಹಿವಾಟು ಕಲಿಯುತ್ತಾರೆ. ಯಾವುದೋ ಷೇರಿನ ಮೇಲೆ, ಅಚಾನಕ್ಕಾಗಿ ದುಡ್ಡು ಹಾಕಿ ಕಳೆದುಕೊಂಡವರೇ ಹೆಚ್ಚು. ಆದರೆ ಇಲ್ಲೊಬ್ಬ ತಪ್ಪಾಗಿ 1.2 ಲಕ್ಷ ರೂಪಾಯಿ ಮೊತ್ತದ ಷೇರು ಖರೀದಿಸಿದ್ದ. ತನ್ನ ಇರುವ ದುಡ್ಡು ಹೋಯಿತು ಎಂದು ಮತ್ತೆ ಷೇರು ವಹಿವಾಟು ನಡೆಸಲು ಹೋಗಿಲ್ಲ. ಅಚ್ಚರಿ ಎಂಬತೆ ಇದೇ 1.2 ಲಕ್ಷ ರೂಪಾಯಿ ಷೇರು ವರ್ಷದಲ್ಲಿ ಬರೋಬ್ಬರಿ 60 ಲಕ್ಷ ರೂಪಾಯಿ ಆದಾಯ ತಂದುಕೊಟ್ಟಿದೆ.
ಈ ಘಟನೆ ಕುರಿತು ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ. ಇದು 2021ರಲ್ಲಿ ಖರೀದಿಸಿದ ಷೇರು. ಈ ವ್ಯಕ್ತಿ ಐಪಿಒಗಳಲ್ಲಿ ಹೂಡಿಕೆ ಮಾಡುತ್ತಿದ್ದ. 15,000 ರೂಪಾಯಿಯಲ್ಲಿ ವ್ಯವಹಾರ ನಡೆಸುತ್ತಿದ್ದ. ರಿಸ್ಕಿ ಇರುವ SME IPOs ಕಡೆ ಮುಖ ತಿರುಗಿಸಿ ಕೂಡ ನೋಡುತ್ತಿರಲಿಲ್ಲ. ಹೀಗಿರುವಾಗ ಅಚಾನಕ್ಕಾಗಿ SME IPOದ EKI ಎನರ್ಜಿ ಷೇರು ಖರೀದಿಸಲು ಮುಂದಾದೆ. ಪ್ರತಿ ಷೇರಿನ ಬೆಲೆ 102 ರೂಪಾಯಿ. ಆದರೆ ಇದು ಒಂದು ಲಾಟ್ ಷೇರು ಖರೀದಿಸಬೇಕು. ಅಂದರೆ 1,200 ಷೇರು. ಇದರ ಒಟ್ಟು ಬೆಲೆ 1,22,400. ಇದ್ಯಾವುದರ ಅರಿವಿಲ್ಲದೆ ಷೇರು ಖರೀದಿಯಾಗಿತ್ತು. ನನ್ನ ಖಾತೆ ನೋಡಿದಾಗ 1.22 ಲಕ್ಷ ರೂಪಾಯಿ ಬ್ಲಾಕ್ ಆಗಿದೆ. ಪರಿಶೀಲಿಸಿದಾಗ 1,200 ಷೇರು ಖರೀದಿಯಾಗಿದೆ. ಇಷ್ಟೊತ್ತಿಗೆ ಕಾಲ ಮಿಂಚಿತ್ತು. ಆರ್ಡರ್ ಕ್ಯಾನ್ಸಲ್ ಮಾಡಲು ಸಾಧ್ಯವಾಗಲಿಲ್ಲ ಎಂದು ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಷೇರುಪೇಟೆಯಲ್ಲಿ ಇತಿಹಾಸ ಸೃಷ್ಟಿ! ಸೆನ್ಸೆಕ್ಸ್ 83000 ಅಂಕಗಳ ಗಡಿದಾಟಿದ್ದು ಇದೇ ಮೊದಲು!
ಈ ಷೇರುಗಳು ಲಿಸ್ಟ್ ಆದಾಗ ಬೇಗ ಮಾರಾಟ ಮಾಡಿ ನಷ್ಟ ಸರಿದೂಗಿಸಬೇಕು ಎಂದು ಪ್ರತಿ ದಿನ ವ್ಯವಹಾರ ನೋಡತ್ತಿದ್ದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದರ ನಡುವೆ ಕುಟುಂಬದ ಕಮಿಟ್‌ಮೆಂಟ್ ಸೇರಿದಂತೆ ಹಲವು ವಿಚಾರಗಳಲ್ಲಿ ಬ್ಯೂಸಿಯಾಗಿದ್ದೆ. ಇತ್ತ 2021ರಲ್ಲೂ ಈ ಷೇರು ಲಿಸ್ಟ್‌ಗೆ ಬರಲಿಲ್ಲ. ಹೀಗಾಗಿ ನನ್ನ ದುಡ್ಡು ಹೋಯಿತು ಎಂದು ಬೇರೆ ಕೆಲಸದಲ್ಲಿ ನಿರತನಾಗಿದ್ದೆ. ಆದರೆ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಷೇರು ಮಾರುಕಟ್ಟೆಯಲ್ಲಿ ನನ್ನ ಖಾತೆ ನಿರ್ವಹಿಸುತ್ತಿದ್ದ ಮ್ಯಾನೇಜರ್ ಕರೆ ಮಾಡಿ ದೊಡ್ಡ ಮೊತ್ತ ಹೂಡಿಕೆ ಮಾಡಿದ್ದೀರಿ. ಬೇರೆ ಷೇರು ಖರೀದಿ ಕುರಿತು ಮಾಹಿತಿ ಕೇಳಿದ್ದಾರೆ.
ಅಚ್ಚರಿಯಾಗಿದೆ. ನನ್ನು 1.2 ಲಕ್ಷ ರೂ ತಪ್ಪಾದ ಷೇರು ಖರೀದಿ ಹಣ ಕಳೆದುಕೊಂಡಿದ್ದೇನೆ ಎಂದುಕೊಂಡಿದ್ದ ನನಗೆ ಆಶ್ವರ್ಯವಾಗಿದೆ ಎಂದು ಆತ ಹೇಳಿದ್ದಾನೆ. ತಕ್ಷಣವೇ ಷೇರು ಮಾರುಕಟ್ಟೆ ಖಾತೆ ತೆರೆದು ನೋಡಿದಾಗ ಅಚ್ಚರಿಯಾಗಿದೆ. ಕಾರಣ ಅಂದು ಒಂದು ಷೇರಿಗೆ 102 ರೂಪಾಯಿಗೆ ಖರೀದಿ ಮಾಡಿದ್ದೆ. ಇದೀಗ ಈ ಷೇರಿನ ಬೆಲೆ 5,180 ರೂಪಾಯಿ. ಹೀಗಾಗಿ ಒಟ್ಟು ಷೇರಿನ ಮೌಲ್ಯ 60 ಲಕ್ಷ ರೂಪಾಯಿ. ತಕ್ಷಣವೇ ಷೇರು ಮಾರಾಟ ಮಾಡಿ ಆದಾಯ ಗಳಿಸಿದೆ ಎಂದು ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ.
50 ಲಕ್ಷ ರೂಪಾಯಿ ಮತ್ತೆ ಹೂಡಿಕೆ ಮಾಡಿದ್ದೇನೆ. ಆದರೆ 10 ಲಕ್ಷ ರೂಪಾಯಿಯಲ್ಲಿ ಪ್ರವಾಸ ಮಾಡಿ ಜೀವನ ಆನಂದಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ರೀತಿಯ ತಪ್ಪಿ ಷೇರು ಮಾರುಕಟ್ಟೆಯಲ್ಲಿ ಆದಾಯ ಮಾಡಿದವರ ಸಂಖ್ಯೆ ಕಡಿಮೆ. ತಿಳಿಯದೇ ಹೂಡಿಕೆ ಮಾಡಿದರೆ ಕಳೆದುಕೊಳ್ಳುವುದೇ ಹೆಚ್ಚು.
MSCI ಎಮರ್ಜಿಂಗ್ ಮಾರ್ಕೆಟ್‌ನಲ್ಲಿ ಚೀನಾ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಭಾರತ!
How I Accidentally Made a Fortune in the Stock Market!!
byu/LuckyAsshole1 inIndianStockMarket