ಕೊರೋನಾ ನಿಯಂತ್ರಣಕ್ಕೆ ಮಹಾರಾಷ್ಟ್ರದಲ್ಲಿ ಹೇರಲಾದ ಲಾಕ್‌ಡೌನ್| ಮಹಾ ಲಾಕ್ಡೌನ್‌ನಿಂದ ಉದ್ಯಮ ವಲಯಕ್ಕೆ 40 ಸಾವಿರ ಕೋಟಿ ರೂ ನಷ್ಟ!
ಮುಂಬೈ(ಏ.06): ಕೊರೋನಾ ನಿಯಂತ್ರಣಕ್ಕೆ ಮಹಾರಾಷ್ಟ್ರದಲ್ಲಿ ಹೇರಲಾದ ಲಾಕ್‌ಡೌನ್‌ನಿಂದಾಗಿ ಹೋಟೆಲ್, ಉದ್ಯಮ ಹಾಗೂ ಸಾರಿಗೆ ವಲಯಗಳಿಗೆ 40 ಸಾವಿರ ಕೋಟಿ ರು. ನಷ್ಟವಾಗಲಿದೆ. ಇದು ರಾಷ್ಟ್ರಮಟ್ಟದ ಆದಾಯದ ಮೇಲೆ ಪರಿಣಾಮ ಬೀರಲಿದೆ ಎಂದು ‘ಕೇರ್’ ರೇಟಿಂಗ್ ಸಂಸ್ಥೆ ತಿಳಿಸಿದೆ.
2022ನೇ ಹಣಕಾಸು ವರ್ಷದಲ್ಲಿ ಒಟ್ಟಾರೆ 137.8 ಲಕ್ಷ ಕೋಟಿ ರು. ಪೈಕಿ ಮಹಾರಾಷ್ಟ್ರದಿಂದ 20.7 ಲಕ್ಷ ಕೋಟಿ ರು. ಆದಾಯ ಹರಿದುಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಲಾಕ್‌ಡೌನ್ ಕ್ರಮದಿಂದ ಇದೀಗ ಶೇ.2ರಷ್ಟುಆದಾಯ ಕುಸಿಯಲಿದೆ.
ಹೋಟೆಲ್, ಸಾರಿಗೆ ವಲಯಕ್ಕೆ 15,772 ಕೋಟಿ ರು., ರಿಯಲ್ ಎಸ್ಟೇಟ್‌ಗೆ 9885 ಕೋಟಿ ರು. ಹಾಗೂ ಸಾರ್ವಜನಿಕ ಆಡಳಿತಕ್ಕೆ 8192 ಕೋಟಿ ರು.ನಷ್ಟುನಷ್ಟವಾಗಲಿದೆ ಎಂದು ತಿಳಿಸಲಾಗಿದೆ.
