ನವದೆಹಲಿ[ಜೂ. 03] ಜೂನ್ 1 ರಿಂದ ಲೆಕ್ಕ ಹಾಕಿದರೆ ಎಲ್ ಪಿಜಿ ದರದಲ್ಲಿ ಶೇ. 3.65 ರಷ್ಟು ಏರಿಕೆಯಾಗಿದೆ. ನಿರಂತರ ನಾಲ್ಕನೇ ತಿಂಗಳಿನಲ್ಲಿಯೂ ದರ ಹೆಚ್ಚಾಗಿದೆ.

ಸಬ್ಸಿಡಿ ರಹಿತ ಮತ್ತು ಸಬ್ಸಿಡಿ ಸಹಿತ ಎರಡು ಬಗೆಯ ಸಿಲಿಂಡರ್ ಗಳು ಏರಿಕೆ ಕಂಡಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ 25 ರೂ. ಜಾಸ್ತಿಯಾಗಿದೆ. ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರ್ ಬೆಲೆ 1.23 ರೂ.ಏರಿಕೆಯಾಗಿದೆ.

ಸಬ್ಸಿಡಿ ರಹಿತ ಸಿಲಿಂಡರ್ [14.2 ಕೆಜಿ] ಗೆ 737.50 ರೂ. ನೀಡಬೇಕಿದ್ದರೆ ಸಬ್ಸಿಡಿ ಸಹಿತ ಎಲ್ ಪಿಜಿಗೆ 497.37 ರೂ. ನೀಡಬೇಕಿದೆ. ಮಹಾನಗರದಿಂದ ಮಹಾನಗರಕ್ಕೆ ದರದಲ್ಲಿ ಕೊಂಚ ವ್ಯತ್ಯಾಸವಿದೆ. ಆದರೆ ಶೇಕಡಾವಾರು ಪ್ರಮಾಣದಲ್ಲಿ ಎಲ್ಲ ಕಡೆ ಏರಿಕೆಯಾಗಿದೆ. ದರ ಏರಿಕೆ ನಿಯಂತ್ರಿಸಿ ಕಾರಣವಿಲ್ಲದೆ ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.