Asianet Suvarna News Asianet Suvarna News

LPG Cylinder Price Hike: ಗ್ಯಾಸ್ ಸಿಲಿಂಡರ್ ದರ ಮತ್ತೆ 105 ರೂ. ಏರಿಕೆ, ಗ್ರಾಹಕರಿಗೆ ಶಾಕ್!

* ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಏರಿಕೆ

* ಗ್ಯಾಸ್ ಸಿಲಿಂಡರ್ ದರ ಮತ್ತೆ 105 ರೂ. ಏರಿಕೆ, ಗ್ರಾಹಕರಿಗೆ ಶಾಕ್

* ಗೃಹೋಪಯೋಗಿ ಗ್ಯಾಸ್ ದರ ಏರಿಕೆ ಇಲ್ಲ

LPG Price Hike Commercial gas cylinder price increases by Rs 105 pod
Author
Bnagalore, First Published Mar 1, 2022, 9:54 AM IST | Last Updated Mar 1, 2022, 10:37 AM IST

ನವದೆಹಲಿ(ಮಾ.01): ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ ಅಂದರೆ ಮಾರ್ಚ್ 1, 2022 ರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳಲ್ಲಿ (ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ) ದೊಡ್ಡ ಮಟ್ಟದ ಹೆಚ್ಚಳವನ್ನು ಮಾಡಿದೆ. ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಂದಿನಿಂದ 105 ರೂಪಾಯಿಯಿಂದ 2,012 ರೂಪಾಯಿಗೆ ಏರಿಕೆಯಾಗಿದೆ.

ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 105 ರೂಪಾಯಿ ಹೆಚ್ಚಿಸಲಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ. ಇಂದಿನಿಂದಲೇ ಹೊಸ ಬೆಲೆಗಳು ಜಾರಿಗೆ ಬಂದಿವೆ. ಈ ಹೆಚ್ಚಳದ ನಂತರ, ಹೋಟೆಲ್-ರೆಸ್ಟೋರೆಂಟ್ ಮೇಲೆ ಹೊರೆ ಇರುತ್ತದೆ ಮತ್ತು ಇದು ಗ್ರಾಹಕರನ್ನು ಸಹ ಹೊಡೆಯಬಹುದು. ಕಂಪನಿಗಳು ಫೆಬ್ರವರಿ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 91.50 ರೂ. ಏರಿಸಲಾಗಿತ್ತು.

LPG Cylinder Price: ವಾಣಿಜ್ಯ ಸಿಲಿಂಡರ್‌ ಬೆಲೆ 102 ರೂ. ಇಳಿಕೆ

ಸಣ್ಣ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರಿ ಏರಿಕೆ

ಸರ್ಕಾರಿ ತೈಲ ಕಂಪನಿಗಳು 5 ಕೆಜಿಯ ಸಣ್ಣ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನೂ ಹೆಚ್ಚಿಸಿವೆ. ಈಗ ದೆಹಲಿಯಲ್ಲಿ 5 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 27 ರೂ. ಏರಿಕೆಯಾಗಿದೆ. ಗ್ರಾಹಕರು ಈಗ 569 ರೂ.ಗೆ ಪಡೆಯುತ್ತಾರೆ. ಆದರೆ, ಕಂಪನಿಗಳು ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

LPG subsidy: ನಿಮ್ಮ ಅಕೌಂಟ್ ಗೆ LPG ಸಬ್ಸಿಡಿ ಕ್ರೆಡಿಟ್ ಆಗ್ತಿದ್ಯಾ?

ಸಬ್ಸಿಡಿ ಮೊತ್ತವೂ ಹೆಚ್ಚಳ

ಪ್ರಸಕ್ತ ಹಣಕಾಸು ವರ್ಷದ (2021-22) ಮೊದಲಾರ್ಧದಲ್ಲಿ ಸರ್ಕಾರವು ಇದುವರೆಗೆ ದೊಡ್ಡ ಮೊತ್ತವನ್ನು ಸಬ್ಸಿಡಿಯಾಗಿ ಪಾವತಿಸಿದೆ. ಮೊದಲಾರ್ಧದವರೆಗೆ ಸರ್ಕಾರ ಸುಮಾರು 7,500 ಕೋಟಿ ರೂ. 20216-17ನೇ ಹಣಕಾಸು ವರ್ಷದಲ್ಲಿ ಸರ್ಕಾರ ಇಡೀ ವರ್ಷದಲ್ಲಿ 12,133 ಕೋಟಿ ರೂ.ಗಳ ಸಹಾಯಧನ ನೀಡಿತ್ತು. ಇದುವರೆಗೆ ಒಂದು ಕೋಟಿಗೂ ಹೆಚ್ಚು ಮಂದಿ ಸಬ್ಸಿಡಿ ಬಿಟ್ಟು ಕೊಟ್ಟಾಗ ಈ ಅಂಕಿ ಅಂಶ ಗೋಚರಿಸುತ್ತದೆ.

ಗ್ಯಾಸ್ ಸಂಪರ್ಕ ವರ್ಗಾವಣೆ ಹೇಗೆ?

ಹಂತ 1 :  ನೀವು ಊರು ಬದಲಿಸಿದ್ದು, ಗ್ಯಾಸ್ ಸಂಪರ್ಕವನ್ನು ವರ್ಗಾಯಿಸಲು ಬಯಸಿದ್ದರೆ ನೀವು ಮೊದಲು ಈಗಿರುವ ನಗರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಬೇಕು. ನಿಮ್ಮ ಗ್ಯಾಸ್ ಸಿಲಿಂಡರ್ ಮತ್ತು ರೆಗ್ಯುಲೇಟರ್(Regulator) ಸಲ್ಲಿಸಬೇಕು. ಅದನ್ನು ಪರಿಶೀಲಿಸಿದ ನಂತರ ನೀವು ಮೊದಲು ಠೇವಣಿ (Deposit) ಮಾಡಿದ ಹಣ (Money)ವನ್ನು ಗ್ಯಾಸ್ ಏಜೆನ್ಸಿ ನಿಮಗೆ ಹಿಂದಿರುಗಿಸುತ್ತದೆ.

ನಿಮ್ಮ ಬ್ಯಾಂಕ್ ಖಾತೆಗೆ LPG ಸಬ್ಸಿಡಿ ಕ್ರೆಡಿಟ್ ಆಗುತ್ತಿದೆಯಾ?

ಹಂತ 2 :  ನೀವು ಗ್ಯಾಸ್ ಏಜೆನ್ಸಿಯಿಂದ ಫಾರ್ಮ್ ಅನ್ನು ಸಹ ಪಡೆಯುಬೇಕಾಗುತ್ತದೆ. ಅದರಲ್ಲಿ ನಿಮಗೆ ಗ್ಯಾಸ್ ಸಂಪರ್ಕವಿದೆ ಎಂದು ಬರೆಯಲಾಗುತ್ತದೆ. ನಿಮ್ಮ ಹೊಸ ನಗರದಲ್ಲಿ ಇದು ನಿಮಗೆ ಉಪಯುಕ್ತವಾಗುವುದರಿಂದ ನೀವು ಈ ಫಾರ್ಮ್ (Form )ಅನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ. ಈ ಫಾರ್ಮ್ ಇದ್ದಲ್ಲಿ ನೀವು ಗ್ಯಾಸದ ಸಂಪರ್ಕ ಪಡೆಯುವುದು ಸುಲಭವಾಗುತ್ತದೆ.  ಇತ್ತೀಚಿನ ದಿನಗಳಲ್ಲಿ ಇ-ಫಾರ್ಮಿಂಗ್ ವ್ಯವಸ್ಥೆ ಶುರು ಮಾಡಲಾಗಿದೆ. 

ಹಂತ 3 : ಈ ಎಲ್ಲ ಕೆಲಸ ಮುಗಿದ ನಂತರ ನೀವು ವರ್ಗವಾಗುತ್ತಿರುವ   ನಿಮ್ಮ ಹೊಸ ನಗರದ ಗ್ಯಾಸ್ ಏಜೆನ್ಸಿಗೆ ಹೋಗಬೇಕು. ಅಲ್ಲಿಗೆ ಹೋಗಿ ಹಳೆ ಕಂಪನಿ ನೀಡಿದ ಫಾರ್ಮ್ ಅನ್ನು ನಿಮ್ಮ ಏಜೆನ್ಸಿಗೆ ತೋರಿಸಬೇಕು. ಇದನ್ನು ಗ್ಯಾಸ್ ಏಜೆನ್ಸಿ ಸಿಬ್ಬಂದಿ (Staff )ಪರಿಶೀಲನೆ ನಡೆಸುತ್ತದೆ.   

ಹಂತ 4 :  ಬಹುತೇಕ ಎಲ್ಲ ಕೆಲಸ ಮುಗಿದಂತೆ. ಕೊನೆಯದಾಗಿ ನೀವು  ನಿಮ್ಮ ಗ್ಯಾಸ್ ಏಜೆನ್ಸಿಗೆ ಹಣ ಪಾವತಿಸಬೇಕಾಗುತ್ತದೆ. ಗ್ಯಾಸ್ ಏಜೆನ್ಸಿಗೆ ಹಣ ನೀಡಿ,ಎಲ್ಲ ಕೆಲಸ ಮುಗಿಸಬೇಕಾಗುತ್ತದೆ. ಇದರ ನಂತರ, ನಿಮ್ಮ ಹೆಸರಿನಲ್ಲಿ ನೀಡಲಾದ ವರ್ಗಾವಣೆ ಸಂಪರ್ಕವನ್ನು ನೀವು ಪಡೆಯುತ್ತೀರಿ.

ಎಲ್ಪಿಜಿ ಸಂಪರ್ಕ ಪಡೆಯುವುದು ಕೂಡ ಈಗ ಸುಲಭವಾಗಿದೆ. ಕಂಪನಿಗಳು ಗ್ರಾಹಕರ ಕೆಲಸವನ್ನು ಸುಲಭಗೊಳಿಸಿವೆ. ಆಧಾರ್ ಕಾರ್ಡ್ (Aadhaar card )ಸಂಖ್ಯೆ ನೀಡಿದ್ರೆ ತುರ್ತು ಪರಿಸ್ಥಿತಿಯಲ್ಲಿ ಎಲ್ಪಿಜಿ ಕಂಪನಿಗಳು ಎಲ್ಪಿಜಿ ಸಂಪರ್ಕವನ್ನು ನೀಡುತ್ತವೆ. ನಂತ್ರ ವಿಳಾಸ ದಾಖಲೆ ನೀಡಿ,ಶಾಶ್ವತ ಕನೆಕ್ಷನ್ ಪಡೆಯಬೇಕಾಗುತ್ತದೆ. 

ಇದಲ್ಲದೆ ಒಂದು ಮಿಸ್ಡ್ ಕಾಲ್ ನಲ್ಲಿ ಗ್ಯಾಸ್ ಸಂಪರ್ಕ ಪಡೆಯಬಹುದು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ 8454955555 ಈ ನಂಬರ್ ಗೆ  ಮಿಸ್ಡ್ ಕಾಲ್ ಮಾಡಿದರೆ, ಕಂಪನಿ ನಿಮ್ಮನ್ನು ಸಂಪರ್ಕಿಸುತ್ತದೆ. ಇದರ ನಂತರ ನೀವು ವಿಳಾಸ ಪುರಾವೆ ಮತ್ತು ಆಧಾರ್ ಮೂಲಕ ಗ್ಯಾಸ್ ಸಂಪರ್ಕವನ್ನು ಪಡೆಯಬಹುದು. ಈ ಸಂಖ್ಯೆಯ ಮೂಲಕ ಗ್ಯಾಸ್ ರೀಫಿಲ್  ಸಹ ಮಾಡಬಹುದು.

Latest Videos
Follow Us:
Download App:
  • android
  • ios