Asianet Suvarna News Asianet Suvarna News

ದೀಪಾವಳಿಗೆ ಆಘಾತ: ವಾಣಿಜ್ಯ ಬಳಕೆಯ LPG ಸಿಲಿಂಡರ್‌ ದರ 266 ರೂ. ಹೆಚ್ಚಳ!

* ದೀಪಾವಳಿ ಸಂಭ್ರಮಕ್ಕೆ ಭರದ ಸಿದ್ಧತೆ

* ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ

* ಸೋಮವಾರದಿಂದ 266 ರೂ. ಹೆಚ್ಚಳ

LPG Price Hike Commercial cooking gas cylinders gets costlier by Rs 266 pod
Author
Bangalore, First Published Nov 1, 2021, 2:10 PM IST

ಬೆಂಗಳೂರು(ನ.01): ದೀಪಾವಳಿ (Diwali) ಸಂಭ್ರಮಕ್ಕೆ ನಡೆಯುತ್ತಿರುವ ಸಿದ್ಧತೆ ಮಧ್ಯೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ ಗ್ರಾಹಕರಿಗೆ ಆಘಾತ ನೀಡಿದೆ. ಹೌದು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ (Commercial cooking gas) ದರ ಇಂದು, ಸೋಮವಾರದಿಂದ 266 ರೂ. ಹೆಚ್ಚಿಸಲಾಗಿದೆ. ಈ ನಡುವೆ ಗೃಹ ಬಳಕೆಯ ಗೃಹ ಬಳಕೆಯ ಎಲ್‌ಪಿಜಿ (LPG) ದರ ಏರಿಕೆಯಾಗಿಲ್ಲ ಎಂಬುವುದೇ ಕೊಂಚ ಸಮಾಧಾನದ ವಿಚಾರವಾಗಿದೆ.

ಈ ನೂತನ ದರ ಪಟ್ಟಿಯ ಅನ್ವಯ ದೆಹಲಿಯಲ್ಲಿ 1,734 ರೂಪಾಯಿಗೆ ಮಾರಾಟವಾಗುತ್ತಿದ್ದ ವಾಣಿಜ್ಯ ಬಳಕೆಯ 19 ಕೆ.ಜಿ. ಸಿಲಿಂಡರ್‌ ಬೆಲೆ 2000.50ರೂಪಾಯಿಗೆ ಏರಿಕೆಯಾಗಿದೆ. ಅತ್ತ ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ ಈಗ 2,073.50 ರೂ. ಮತ್ತು ಚೆನ್ನೈನಲ್ಲಿ(Chennai) ಈ ಉತ್ಪನ್ನದ ಬೆಲೆ 2,133 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ(Mumbai) 1,683 ರೂಪಾಯಿ ಇದ್ದ 19 ಕೆಜಿ ಕಮರ್ಷಿಯಲ್​ ಎಲ್​​ಪಿಜಿ ಸಿಲಿಂಡರ್​ ಬೆಲೆ ಈಗ 1,950ರೂಪಾಯಿಗೆ ಏರಿದೆ.  

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾಗುತ್ತಿದ್ದಂತೆ ಅತ್ತ ಹೊಟೇಲ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆ, ಬೇಕರಿಗಳಲ್ಲಿನ ತಿಂಡಿ-ತಿನಿಸುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದೆ.

ಪೆಟ್ರೋಲ್, ಡೀಸೆಲ್ ದರವೂ ಏರಿಕೆ

ಸೋಮವಾರ ಪೆಟ್ರೋಲ್‌(Petrol) ಮತ್ತು ಡೀಸೆಲ್‌(Diesel) ದರದಲ್ಲಿ ತಲಾ 35 ಪೈಸೆ ಹೆಚ್ಚಗೊಂಡಿದೆ. ನಿರಂತರ ಆರನೇ ದಿನವೂ ತೈಲ ದರ ಏರಿಕೆಯಾಗಿದ್ದು, ಗ್ರಾಹಕರು ಹೈರಾಣಾಗಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಹೆಚ್ಚಳವೂ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಮಾರಾಟ ದರದ ಮೇಲೆ ಪರಿಣಾಮ ಬೀರಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 113.56 ರೂಪಾಯಿ ಮತ್ತು ಡೀಸೆಲ್‌ಗೆ 104.50 ರೂಪಾಯಿ ಇದೆ; ಹೈದರಾಬಾದ್‌ನಲ್ಲಿ ಪೆಟ್ರೋಲ್‌ 114.12 ರೂಪಾಯಿ ಮತ್ತು ಡೀಸೆಲ್‌ ದರ 107.40 ರೂಪಾಯಿ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್‌ ದರ 109.69 ರೂಪಾಯಿ ಮತ್ತು ಡೀಸೆಲ್‌ಗೆ 98.42 ರೂಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್‌ 115.50 ರೂಪಾಯಿ ಮತ್ತು ಡೀಸೆಲ್‌ 106.62 ರೂಪಾಯಿಕ್ಕೆ ಮಾರಾಟವಾಗುತ್ತಿದೆ. ಕೋಲ್ಕತ್ತ ಮತ್ತು ಚೆನ್ನೈನಲ್ಲಿ ಪೆಟ್ರೋಲ್‌ ದರ ಕ್ರಮವಾಗಿ 110.15 ರೂಪಾಯಿ ಮತ್ತು106.35ರೂಪಾಯಿ, ಡೀಸೆಲ್‌ ದರ ಕ್ರಮವಾಗಿ 101.56 ರೂಪಾಯಿ ಮತ್ತು 102.59 ರೂಪಾಯಿ ನಿಗದಿಯಾಗಿದೆ.

ಮಧ್ಯ ಪ್ರದೇಶದ ಹಲವು ಭಾಗಗಳಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 120 ರೂಪಾಯಿ ದಾಟಿದೆ. ರಾಜಸ್ಥಾನದ ಗಂಗಾನಗರದಲ್ಲಿ ಪೆಟ್ರೋಲ್‌ 122.32 ರೂಪಾಯಿ ಮತ್ತು ಡೀಸೆಲ್‌ 113.21 ರೂಪಾಯಿ ತಲುಪಿದೆ. ತೈಲ ಸಾಗಣೆ ದರ ಮತ್ತು ಸ್ಥಳೀಯ ತೆರಿಗೆಗಳಿಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರ ವ್ಯತ್ಯಾಸ ದಾಖಲಾಗಿದೆ.

ಸೆಪ್ಟೆಂಬರ್‌ 28ರಿಂದ ಈವರೆಗೂ ಪೆಟ್ರೋಲ್‌ ದರ 26 ಬಾರಿ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 8.15 ರೂಪಾಯಿರಷ್ಟು ಹೆಚ್ಚಳವಾಗಿದೆ. ಡೀಸೆಲ್‌ ದರ ಸೆಪ್ಟೆಂಬರ್‌ 24ರಿಂದ 29 ಬಾರಿ ಹೆಚ್ಚಳವಾಗಿದ್ದು, ಲೀಟರ್‌ಗೆ 9.45 ರೂಪಾಯಿಷ್ಟು ಏರಿಕೆಯಾಗಿದೆ. ಅದಕ್ಕೂ ಮುನ್ನ ಮೇ 4ರಿಂದ ಜುಲೈ 17ರ ವರೆಗೂ ಪೆಟ್ರೋಲ್‌ 11.44 ರೂಪಾಯಿ ಹಾಗೂ ಡೀಸೆಲ್‌ 9.14ರೂಪಾಯಿರಷ್ಟು ಹೆಚ್ಚಳ ಕಂಡಿದೆ.

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಮತ್ತೆ ಏರಿಕೆಯಾಗಿಲ್ಲ.

ಇರುವುದರಲ್ಲಿ ಒಂದು ಸಮಾಧಾನ ಎಂದರೆ 14.2 ಕೆಜಿ ತೂಕದ ಮನೆ ಬಳಕೆ ಎಲ್​ಪಿಜಿ ಸಿಲಿಂಡರ್​​ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ದೆಹಲಿಯಲ್ಲಿ 14.2 ಕೆಜಿ ತೂಕದ ಎಲ್​ಪಿಜಿ ಸಿಲಿಂಡರ್​ ಬೆಲೆ (ಸಬ್ಸಿಡಿ ರಹಿತ) 899.50 ರೂ. ಇದೆ. ಕೋಲ್ಕತ್ತದಲ್ಲಿ 926 ರೂ.ಇದ್ದರೆ, ಚೆನ್ನೈನಲ್ಲಿ 915.50 ರೂಪಾಯಿ ಇದೆ. ಹಾಗೇ, ಕೊನೇ ಬಾರಿಕೆ ಮನೆ ಬಳಕೆ ಸಿಲಿಂಡರ್ ಬೆಲೆಯನ್ನು ಅಕ್ಟೋಬರ್ 6ರಂದು ಏರಿಸಲಾಗಿತ್ತು. ಹಾಗೇ ಕಮರ್ಷಿಯಲ್​ ಸಿಲಿಂಡರ್​ ಬೆಲೆಯನ್ನು ಅಕ್ಟೋಬರ್​ 1ರಂದು ಹೆಚ್ಚಿಸಲಾಗಿತ್ತು. ಇದೀಗ ಆದ ಹೆಚ್ಚಳದಿಂದ ಹಲವು ನಗರಗಳಲ್ಲಿ ಬೆಲೆ 2000 ರೂಪಾಯಿ ಗಡಿ ದಾಟಿದ್ದು ಹೊರೆಯೇ ಆಗಿದೆ.
 

Follow Us:
Download App:
  • android
  • ios